Site icon Vistara News

Indian 2: ಇಂಡಿಯನ್ 2ನಲ್ಲಿ ಸೆನ್ಸಾರ್ ಮಂಡಳಿ ಕೇಳಿದೆ ಆ ಐದು ಬದಲಾವಣೆ!

Indian 2 Kamal Haasan on censor board issuing 5 major cuts

ಬೆಂಗಳೂರು: ಕಳೆದ ವಾರ ಸೆನ್ಸಾರ್ ಮಂಡಳಿ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಯಿಂದ ‘ಇಂಡಿಯನ್ 2′ ಯು/ಎ ಪ್ರಮಾಣಪತ್ರವನ್ನು (Indian 2) ಪಡೆದುಕೊಂಡಿದೆ. ಸಿಬಿಎಫ್‌ಸಿ ಇಂಡಿಯನ್ 2 ಸಿನಿಮಾದಲ್ಲಿ 5 ಬದಲಾವಣೆಗಳನ್ನು ಶಿಫಾರಸು ಮಾಡಿದೆ. ಹಾಗೆಯೇ ಸಿನಿಮಾಗೆ ಯುಎ ಸರ್ಟಿಫಿಕೇಟ್ ಕೊಟ್ಟಿದೆ. ಇಂಡಿಯನ್ 2 ಜುಲೈ 12 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇಂಡಿಯನ್ 2 ಎಂಬುದು 1996 ರ ಇಂಡಿಯನ್ ಚಿತ್ರದ ಮುಂದುವರಿದ ಭಾಗವಾಗಿದೆ. ಕಮಲ್ ಹಾಸನ್ ಮತ್ತೆ ಪ್ರೇಕ್ಷಕರ ಮುಂದೆ ಮಿಂಚೋಕೆ ರೆಡಿಯಾಗಿದ್ದಾರೆ.

ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಚಿತ್ರದ ಪ್ರಚಾರ ಮಾಡುವಾಗ, ಚಿತ್ರದಲ್ಲಿ ಐದು ಕಟ್‌ಗಳು ಯಾಕಾಯ್ತು ಎಂಬುದರ ಬಗ್ಗೆ ನಿರ್ದೇಶಕರು ಮಾತನಾಡಿದರು. “ಸೆನ್ಸಾರ್ ಮಂಡಳಿಯು ಕೆಲವು ಕಟ್‌ಗಳನ್ನು ಕೇಳಿದೆ ಏಕೆಂದರೆ ಇದು ಎಲ್ಲಾ ವಯಸ್ಸಿನ ಮತ್ತು ಕುಟುಂಬ ನೋಡುವ ಸಿನಿಮಾ. ಮಂಡಳಿಗೆ ಚಿತ್ರ ಇಷ್ಟವಾಯಿತು ಎಂದು ಶಂಕರ್ ಹೇಳಿದರು. ʻʻಸೆನ್ಸಾರ್ ಮಂಡಳಿಯ ಸದಸ್ಯರು ಸಾಮಾನ್ಯವಾಗಿ ತಮ್ಮ ಪ್ರತಿಕ್ರಿಯೆಯನ್ನು ಚಿತ್ರದ ತಂಡದೊಂದಿಗೆ ಹಂಚಿಕೊಳ್ಳುವುದಿಲ್ಲ, ಆದರೆ ಸೆನ್ಸಾರ್ ಮಂಡಳಿಯಲ್ಲಿ ಚಲನಚಿತ್ರವನ್ನು ವೀಕ್ಷಿಸಿದ ಪ್ರತಿಯೊಬ್ಬರೂ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಸಿಬಿಎಫ್‌ಸಿ ಸಾಮಾನ್ಯವಾಗಿ ಯಾವುದೇ ಚಿತ್ರದ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ. ಅವರು ಪ್ರತಿಕ್ರಿಯೆಯ ಬಗ್ಗೆ ಸಾಕಷ್ಟು ಎಚ್ಚರವಹಿಸುತ್ತಾರೆʼʼಎಂದರು.

“ಧೂಮಪಾನ ಹಾನಿಕಾರಕ’’ ಎಂಬ ಪದಗಳನ್ನು ಚಿತ್ರದಲ್ಲಿ ಹಲವೆಡೆ ಕಾಣಿಸಿಕೊಳ್ಳುವಂತೆ ಮಾಡುವುದು. ಪದಗಳನ್ನು ಕಪ್ಪು ಮತ್ತು ಬಿಳಿ ಹಿನ್ನೆಲೆಯಲ್ಲಿ ದೊಡ್ಡದಾಗಿ ಮಾಡುವುದು. ಚಿತ್ರದ ಕೆಲವು ದೃಶ್ಯಗಳಲ್ಲಿ ಗೋಚರಿಸುವ ದೇಹದ ಭಾಗಗಳನ್ನು ಮಸುಕುಗೊಳಿಸುವುದು. ಬಾಡಿ ಶೋ ಆಗುವಂತಹ ಸ್ಥಳಗಳಲ್ಲಿ ಅದನ್ನು ಬ್ಲರ್ ಮಾಡುವುದು ಕೂಡಾ ಅಗತ್ಯವಾಗಿದೆ ಎಂದು ಚಿತ್ರತಂಡ ಹೇಳಿದೆ. ಕೆಲವು ಅನುಚಿತ ಪದಗಳನ್ನು ಬದಲಾಯಿಸಲು ಮತ್ತು ಚಿತ್ರದಲ್ಲಿ ಬಳಸಲಾದ ‘ಲಂಚ ಮಾರುಕಟ್ಟೆ’ ಎಂಬ ಲೇಬಲ್ ಅನ್ನು ಬದಲಾಯಿಸಲು ಸೂಚಿಸಿದೆ.

ಇದನ್ನೂ ಓದಿ: Indian 2 Trailer: `ಇಂಡಿಯನ್‌-2′ ಟ್ರೈಲರ್‌ ಔಟ್‌; ಹಲವು ಗೆಟಪ್​ನಲ್ಲಿ ಗಮನಸೆಳೆದ  ಕಮಲ್ ಹಾಸನ್!

ಚಿತ್ರದಲ್ಲಿ ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕನಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲ ಕಿಶೋರ್, ಜಾಕಿರ್ ಹುಸೇನ್, ಗುರು ಸೋಮಸುಂದರಾಮ್, ದೆಹಲಿ, ಗುರು ಸೋಮಸುಂದರಾಮ್ ಮಿಶ್ರಾ, , ಜಯಪ್ರಕಾಶ್, ಮನೋಬಾಲಾ, ಮತ್ತು ಅಶ್ವಿನಿ ತಂಗರಾಜ್ ಇದ್ದಾರೆ.
ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ನಿರ್ಮಿಸಿರುವ ಇಂಡಿಯನ್2 ಜುಲೈ 12 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸಿದ್ಧಾರ್ಥ್ ಇಂಡಿಯನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್‌ ಸಿನಿಮಾದಲ್ಲಿ ಸಿದ್ಧಾರ್ಥ್‌ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್‌ ಹಾಗೂ ಸಿದ್ಧಾರ್ಥ್‌ ಒಟ್ಟಿಗೆ ಕೆಲಸ ಮಾಡುವಂತಾಗಿದೆ.

ಇಂಡಿಯನ್ 2 ಲುಕ್‌ಗಾಗಿ ಕಮಲ್ ಸಾಕಷ್ಟು ಶ್ರಮ ವಹಿಸಿದ್ದಾರೆ. ಕಳೆದ ವರ್ಷ, ಬರಹಗಾರ ಜಯಮೋಹನ್ ಅವರು ಸೆಟ್‌ಗಳಲ್ಲಿ ಕಮಲ್ ಹಾಸನ್ ಇರುವ ಬಗೆಯನ್ನು ಬಣ್ಣಿಸಿದ್ದರು. ಕಮಲ್‌ ಅವರ ಬದ್ಧತೆ ಮತ್ತು ನಟನಾ ಮಯದಲ್ಲಿ ಹೇಗೆ ಇರುತ್ತಾರೆ ಎಂಬುದರ ಬಗ್ಗೆ ವಿವರಿಸಿದ್ದರು. ʻʻಕಮಲ್ ಅವರು ಸೆಟ್‌ಗಳಲ್ಲಿ ಬಹುತೇಕ ಹಸಿವಿನಿಂದಲೇ ಇರುತ್ತಾರೆ. ನಟಿಸುವ ಸಮಯದಲ್ಲಿ ಏನನ್ನೂ ತಿನ್ನುವುದಿಲ್ಲ. ಇದಕ್ಕೆ ಕಾರಣವೂ ಇದ್ದು, ನಟನೆ ಸಂದರ್ಭದಲ್ಲಿ ಏನನ್ನಾದರೂ ತಿನ್ನುತ್ತಿದ್ದರೆ, ಅಂದರೆ ಬಾಯಲ್ಲಿ ಅಗಿಯುತ್ತಿದ್ದರೆ, ಅದು ಪ್ರಾಸ್ಥೆಟಿಕ್ ಮೇಕ್ಅಪ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅವರು ನಟಿಸುವಾಗ ಕೇವಲ ಜ್ಯೂಸ್ ಡಯಟ್ ಮಾಡುತ್ತಿದ್ದರುʼʼ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

Exit mobile version