Site icon Vistara News

Vaibhav Gupta: ಇಂಡಿಯನ್ ಐಡಲ್‌ ಸೀಸನ್ 14 ಗೆದ್ದ ವೈಭವ್ ಗುಪ್ತಾ!

Indian Idol 14 Vaibhav Gupta from Kanpur wins show

ಬೆಂಗಳೂರು: ಸಿಂಗಿಂಗ್ ರಿಯಾಲಿಟಿ ಶೋ ಇಂಡಿಯನ್ ಐಡಲ್‌ನ ಸೀಸನ್ 14ರಲ್ಲಿ ವೈಭವ್ ಗುಪ್ತಾ (Vaibhav Gupta) ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ. ಟ್ರೋಫಿ ಜತೆಗೆ 25 ಲಕ್ಷ ರೂ ಬಹುಮಾನ ಮತ್ತು ಮಾರುತಿ ಸುಜುಕಿ ಬ್ರೆಝಾವನ್ನು ಗೆದ್ದಿದ್ದಾರೆ. ಅಂಜನಾ ಪದ್ಮನಾಭನ್, ​​ಅನನ್ಯ ಪಾಲ್, ಪಿಯೂಷ್ ಪನ್ವಾರ್, ಶುಭದೀಪ್ ದಾಸ್ ಮತ್ತು ಆದ್ಯ ಮಿಶ್ರಾ ಫೈನಲಿಸ್ಟ್‌ ಸ್ಪರ್ಧಿಗಳಾಗಿದ್ದರು.

ವೈಭವ್ ಮಾತನಾಡಿ , “ನನ್ನನ್ನು ಇಂಡಿಯನ್ ಐಡಲ್ 14ರ ವಿಜೇತ ಎಂದು ಕರೆಯಲು ನನಗೆ ಸಂತೋಷವಾಗಿದೆ. ಜನರು ನನ್ನನ್ನು ತುಂಬಾ ಪ್ರೀತಿಸಿದ್ದಾರೆ. ನನ್ನ ಕನಸುಗಳು ನನಸಾಗುತ್ತಿವೆ. ದೇವರ ಇಚ್ಛೆ. ನಾನು ಈಗ ಬಾಲಿವುಡ್ ಪ್ರವೇಶಿಸಲು ಬಯಸುತ್ತೇನೆ. ನನಗೆ ಸಿಗುತ್ತಿದ್ದ ಪ್ರೀತಿ ಮತ್ತು ಮೆಚ್ಚುಗೆಯಿಂದ ನಾನು ಇದನ್ನು ಗೆಲ್ಲಬಹುದೆಂಬ ಭರವಸೆ ಇತ್ತು. ಅದರಲ್ಲೂ ಮಹೇಶ್ ಭಟ್ ನನಗೆ ಶಿಳ್ಳೆ ಹೊಡೆದಾಗ ಆ ಕ್ಷಣ ನನಗೆ ತುಂಬಾ ಇಷ್ಟವಾಯಿತು”ಎಂದರು.

ಇದನ್ನೂ ಓದಿ: Shah Rukh Khan: ಪತ್ನಿ ಜತೆ ಸ್ಟೆಪ್‌ ಹಾಕಿದ ಶಾರುಖ್ ಖಾನ್‌: ವಿಡಿಯೊ ವೈರಲ್‌!

“ ಸಲ್ಮಾನ್ ಖಾನ್, ವಿಕ್ಕಿ ಕೌಶಲ್ ಮತ್ತು ರಣವೀರ್ ಸಿಂಗ್ ಅವರ ಸಿನಿಮಾಗಳಿಗೆ ಹಿನ್ನೆಲೆ ಗಾಯನ ಮಾಡವ ಆಸೆ ಇದೆ. ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. 90ರ ದಶಕದ ಅನುಭವ ಈಗ ಮತ್ತೆ ಬರುತ್ತಿದೆʼʼಎಂದರು.

ಗ್ರ್ಯಾಂಡ್ ಫಿನಾಲೆಯಲ್ಲಿ ಸೋನು ನಿಗಮ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಇಂಡಿಯನ್ ಐಡಲ್ ಸೀಸನ್ 14 ರಲ್ಲಿ ಶ್ರೇಯಾ ಘೋಷಾಲ್, ವಿಶಾಲ್ ದಾದ್ಲಾನಿ ಮತ್ತು ಕುಮಾರ್ ಸಾನು ತೀರ್ಪುಗಾರರಾಗಿದ್ದರು. ಇಂಡಿಯನ್ ಐಡಲ್ 14 ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶುರುವಾಗಿತ್ತು.

Exit mobile version