ಬೆಂಗಳೂರು: ಅನೇಕ ಸೌತ್ ಚಿತ್ರಗಳಲ್ಲಿ ನಟಿಸಿ, ತೆಲುಗು ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿ, ಕನ್ನಡದ ʻಸೂರ್ಯವಂಶʼ ಸಿನಿಮಾದಿಂದ ಕನ್ನಡಿಗರ ಹೃದಯ ಗೆದ್ದ ಇಶಾ ಕೊಪ್ಪಿಕರ್ (Isha Koppikar) ತಮ್ಮ ಬದುಕಿನ ಕಹಿ ಅನುಭವ ಹಂಚಿಕೊಂಡಿದ್ದಾರೆ. ʻಫಿಜಾʼ ಚಿತ್ರದ ಮೂಲಕ ಹಿಂದಿ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದ್ದರು ಇಶಾ ಕೊಪ್ಪಿಕರ್. ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ, ಇಶಾ ಮಾತನಾಡಿ ʻʻಆಗೆಲ್ಲ ಮಿ ಟೂ ಭಿಯಾನ ಇರಲಿಲ್ಲ. ನನ್ನ ಕಾಲದಲ್ಲಿ ಅನೇಕ ನಟಿಯರು ಇಂಡಸ್ಟ್ರಿ ತೊರೆದರು. ಕೆಲವೇ ಕೆಲವರು ಇಂಡಸ್ಟ್ರಿಯಲ್ಲಿ ಇದ್ದರು. ಅದರಲ್ಲಿ ನಾನೂ ಒಬ್ಬಳು. ನಾನು 18 ವರ್ಷವನಿದ್ದಾಗ ನಟ ಕಾಸ್ಟಿಂಗ್ ಕೌಚ್‌ಗಾಗಿ ಸಂಪರ್ಕಿಸಿದರು. ಕೆಲಸ ಸಿಗಬೇಕಾದರೆ ನಟರ ಜೊತೆ ‘ಫ್ರೆಂಡ್ಲಿ’ ಆಗಬೇಕು ಅಂತ ಹೇಳಿದ್ರು. ನೀವು ಯಾವ ಅರ್ಥದಲ್ಲಿ ‘ಫ್ರೆಂಡ್ಲಿ’ ಆಗಿರಬೇಕು ಎಂದು ಹೇಳುತ್ತಿದ್ದೀರಿ ಅಂತ ಅವರಿಗೆ ಮರು ಪ್ರಶ್ನೆ ಮಾಡಿದ್ದೆ ಎಂದಿದ್ದಾರೆ. ಇನ್ನೂ.. ಇದೊಂದೇ ಅಲ್ಲ. ಮತ್ತೊಮ್ಮೆ.. ಮತ್ತೊಬ್ಬ ಸ್ಟಾರ್ ನನಗೆ ಸಿಂಗಲ್ ಆಗಿ ಏಕಾಂತದಲ್ಲಿ ಭೇಟಿಯಾಗುವಂತೆ ಹೇಳಿದ್ದ ಎಂದಿದ್ದಾರೆ. ಡ್ರೈವರ್ ಅಥವಾ ಬೇರೆ ಯಾರನ್ನೂ ಜತೆಗೆ ಕರೆದುಕೊಂಡು ಬರಬಾರದು ಎಂಬ ಷರತ್ತನ್ನೂ ಹಾಕಿದ್ದ ಎಂದಿರುವ ಇಶಾ ಕೊಪ್ಪಿಕರ್, ಆ ಕಾಲಕ್ಕೆ ಆತ ಹಿಂದಿ ಚಿತ್ರರಂಗದ ‘ಎ’ ದರ್ಜೆಯ ನಾಯಕನಾಗಿದ್ದ ಎಂದು ಕೂಡ ಹೇಳಿದ್ದಾರೆ. ನನ್ನ ಜೊತೆ ಚಿತ್ರರಂಗದ ಬಂದ ಹಲವಾರು ನಾಯಕಿಯರು ಈ ಕಾಸ್ಟಿಂಗ್ ಕೌಚ್ ಕಾರಣಕ್ಕೆ ಚಿತ್ರರಂಗದಿಂದ ದೂರ ಸರೆದರು ಎಂದು ಹೇಳಿಕೊಂಡಿದ್ದಾರೆ.
ಸ್ಟಾರ್ ಹೀರೋಗಳ ಜತೆಗೆ ನೀನು ಯಾವಾಗಲೂ ಕ್ಲೋಸ್ ಆಗಿ ಮೂವ್ ಆಗಬೇಕು. ನಮ್ಮಗಳ ಸ್ನೇಹವನ್ನು ನೀನು ಹೊಂದಿರಬೇಕು ಎನ್ನುತ್ತಲೇ ಭುಜ ಹಿಸುಕಿ, ಅನುಚಿತವಾಗಿ ಆ ಸ್ಟಾರ್ ನಟ ನನ್ನ ಜೊತೆ ವರ್ತಿಸಿದ್ದ ಎಂದೂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Duniya Vijay: ʻಭೀಮʼ ರಿಲೀಸ್ ಡೇಟ್ ಅನೌನ್ಸ್ ಮಾಡಿದ ದುನಿಯಾ ವಿಜಯ್; ಸ್ಟಾರ್ ಹಿರೋ ಸಿನಿಮಾ ಜತೆ ಕ್ಲ್ಯಾಶ್?
ಅಂದಹಾಗೆ, ತೆಲುಗಿನ ‘ಚಂದ್ರಲೇಖಾ’ ಸಿನಿಮಾದಲ್ಲಿ ನಾಗಾರ್ಜುನಗೆ (Nagarjuna) ನಾಯಕಿಯಾಗಿ ಇಶಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಕನ್ನಡದ ನಟ ವಿಷ್ಣುವರ್ಧನ್ ನಟನೆಯ ‘ಸೂರ್ಯವಂಶ’, ರವಿಚಂದ್ರನ್ ಜೊತೆ ‘ಓ ನನ್ನ ನಲ್ಲೆ’, ‘ಹೂ ಅಂತೀಯಾ ಊಹೂ ಅಂತೀಯಾ’ ಚಿತ್ರಗಳಲ್ಲಿ ನಟಿಸಿದ್ದಾರೆ.