ಬೆಂಗಳೂರು: ನೂರಾರು ಕೋಟಿ ರೂ. ಸುಲಿಗೆ ಪ್ರಕರಣ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್ ಪ್ರೇಮಿಗಳ ದಿನದಂದು ಗೆಳತಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ (Jacqueline Fernandez) ಶುಭಾಶಯ ತಿಳಿಸಿ ಸುದ್ದಿಯಾಗಿದ್ದ. ಇದೀಗ ಸುಕೇಶ್ ನಟಿ ಜಾಕ್ವೆಲಿನ್‌ಗೆ ಪತ್ರ ಬರೆದಿದ್ದಾನೆ. ಆಗಸ್ಟ್ 11 ಜಾಕ್ವಲಿನ್ ಫರ್ನಾಂಡಿಸ್ ಬರ್ತ್‌ಡೇ. ಅವರ ಜನ್ಮದಿನಕ್ಕೆ ಒಂದು ತಿಂಗಳು ಇರುವಾಗಲೇ ಸುಕೇಶ್ ಪತ್ರ ಬರೆಯೋಕೆ ಆರಂಭಿಸಿದ್ದಾನೆ.
ಜಾಕ್ವೆಲಿನ್‌ಗೆ ಬರೆದಿರುವ ಪತ್ರದಲ್ಲಿ ಸುಕೇಶ್ ಚಂದ್ರಶೇಖರ್ ಹುಟ್ಟುಹಬ್ಬದ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. “ನನ್ನ ಬೊಮ್ಮ ಜಾಕ್ವೆಲಿನ್, ಬೇಬಿ ಗರ್ಲ್, ಇನ್ನು ಕೆಲವೇ ದಿನಗಳಲ್ಲಿ ನಿನ್ನ ಜನುಮದಿನ. ನಿಮ್ಮ ಜನ್ಮದಿನಕ್ಕೆ ಇನ್ನೂ 30 ದಿನಗಳು ಇವೆ. ಕಾಯಲು ಸಾಧ್ಯವಿಲ್ಲ, ಇದು ವರ್ಷದ ನನ್ನ ನೆಚ್ಚಿನ ದಿನ, ನಾನು ಆನಂದಿಸುವ ಆಚರಣೆ, ನಿಮ್ಮ ಸುಂದರ ನಗುವನ್ನು ನೋಡಿ, ನನ್ನ ಹೃದಯವನ್ನು ಕರಗಿಸುವ ಏಕೈಕ ವಿಷಯ ಇದು.”ಎಂದು ಬರೆದಿದ್ದಾನೆ.
ʻಬೇಬಿ, ಕಳೆದ ಎರಡು ದಿನಗಳಿಂದ, ನಾನು ನಿಮ್ಮ ನೆಚ್ಚಿನ ಹಾಡುಗಳಲ್ಲಿ ಒಂದನ್ನು ಕೇಳುತ್ತಿದ್ದೇನೆ. ಅದು ಯಾವುದು ಎಂದು ನಿಮಗೆ ತಿಳಿದಿದೆ.ನೀವು ಮಾತನಾಡುವ ರೀತಿ, ನಿಮ್ಮ ನಗು, ನಿಮ್ಮ ಅಪ್ಪುಗೆಗಳು, ಮುದ್ದಾಡುವಿಕೆಗಳು, ನನ್ನ ಮೇಲಿನ ನಿಮ್ಮ ಪ್ರೀತಿ, ಸೆಕೆಂಡುಗಳಲ್ಲಿ ಕಣ್ಮರೆಯಾಗುವ ನಿಮ್ಮ ಕೋಪ , ನಿಮ್ಮ ಕಣ್ಣುಗಳು, ಪ್ರತಿಯೊಂದು ವಿಷಯಯಲ್ಲಿ ಹ್ಯಾಂಗೊವರ್ ಆಗಿದ್ದೇನೆ.
“ನೀವು ನನಗೆ ಯಾವಾಗಲೂ ಪ್ರೀತಿಯ ಅರ್ಥವನ್ನು ನೀಡಿದ್ದೀರಿ, ತುಂಬಾ ಧನ್ಯವಾದಗಳು ಬೇಬಿ. ನಿಮ್ಮ ನಗು ನನ್ನ ಹೃದಯವನ್ನು ಕರಗಿಸುತ್ತದೆ. ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮನ್ನು ನೋಡಬೇಕು. ನೀವು ನನ್ನ ನಿಜವಾದ ಸೋಲ್ಮೇಟ್’ ಎಂದು ಕೂಡ ಸುಕೇಶ್ ಹೇಳಿದ್ದಾನೆ.
ಇದನ್ನೂ ಓದಿ: Jacqueline Fernandez: ವಿವಾದಿತ ಬಾಲಿವುಡ್ ನಟಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ
ಸುಕೇಶ್ ಮತ್ತು ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಚಾರವೇನೂ ಗುಟ್ಟಾಗಿ ಉಳಿದಿರಲಿಲ್ಲ. ಆದರೆ, ಜಾರಿ ನಿರ್ದೇಶನಾಲಯ ಸುಕೇಶ್ ಮೇಲೆ ಪ್ರಕರಣ ದಾಖಲಿಸುತ್ತಿದ್ದಂತೆ ಜಾಕ್ವೆಲಿನ್ ಅಂತರ ಕಾಪಾಡಿಕೊಂಡಿದ್ದರು. ವಂಚಕ ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್ ಜತೆ ಅದ್ಧೂರಿ, ಐಷಾರಾಮಿ ಸಮಯವನ್ನು ಕಳೆದಿದ್ದ. ಲಿಮಿಟಿಡ್ ಎಡಿಷನ್ ಪರ್ಫ್ಯೂಮ್ಸ್, ಡಿಸೈನರ್ ಬ್ಯಾಗ್ಸ್, ಬಟ್ಟೆಗಳು, ಪ್ರೈವೆಟ್ ಜೆಟ್ಸ್ ಇತ್ಯಾದಿ ಅದ್ದೂರಿ ಜೀವನಕ್ಕೆ ಏನೂ ಭರವಿರಲಿಲ್ಲ. ಹಾಗಾಗಿ, ಜಾಕ್ವೆಲಿನ್ ಸಂಪೂರ್ಣವಾಗಿ ಸುಕೇಶ್ ಹಿಡಿತದಲ್ಲಿದ್ದಳು. ಅಲ್ಲದೇ, ತನ್ನ ಕನಸಿನ ಗಂಡು ಸಿಕ್ಕಿದ್ದಾನೆ, ನಾನು ಮದುವೆಯಾಗಲಿದ್ದೇನೆ ಎಂದು ಜಾಕ್ವೆಲಿನ್ ತನ್ನ ಸ್ನೇಹಿತೆಯರ ಮುಂದೆ ಹೇಳಿಕೊಂಡಿದ್ದಳು.