Site icon Vistara News

Janhvi Kapoor: ರಾಧಿಕಾ ಮರ್ಚಂಟ್‌ ʻಬ್ರೈಡಲ್‌ ಶವರ್‌ʼ ಪಾರ್ಟಿಯಲ್ಲಿ ನಟಿ ಜಾನ್ವಿ ಕಪೂರ್!

Janhvi Kapoor attends Radhika Merchant bridal shower

ಬೆಂಗಳೂರು: ನಟಿ ಜಾನ್ವಿ ಕಪೂರ್ ( Janhvi Kapoor) ಅವರು ಅನಂತ್ ಅಂಬಾನಿ ಅವರ ಭಾವಿ ಪತ್ನಿ ರಾಧಿಕಾ ಮರ್ಚಂಟ್‌ ಅವರ ಬ್ರೈಡಲ್‌ ಶವರ್‌ ಪಾರ್ಟಿಯಲ್ಲಿ ( Radhika Merchant bridal shower) ಭಾಗವಹಿಸಿದ್ದರು. ಪಾರ್ಟಿಯ ಫೋಟೊಗಳನ್ನು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಜಾನ್ವಿ ಕೂಡ ಶೇರ್‌ ಮಾಡಿಕೊಂಡಿದ್ದಾರೆ. ಜುಲೈ 12 ರಂದು ರಾಧಿಕಾ ಮತ್ತು ಅನಂತ್ ವಿವಾಹವಾಗಲಿದ್ದಾರೆ.

ಪಾರ್ಟಿಗಾಗಿ, ರಾಧಿಕಾ ಗುಲಾಬಿ ಬಣ್ಣದ ಪೈಜಾಮ ಹಾಗೂ ಇನ್ನೊಂದು ಫೋಟೊದಲ್ಲಿ ಬಿಳಿ ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಉಡುಗೆಗೆ ಹೊಂದಿಕೆಯಾಗುವ ಕಿರೀಟವನ್ನು ಸಹ ಧರಿಸಿದ್ದರು. ಪಾರ್ಟಿಯಲ್ಲಿ ಜಾನ್ವಿ ಕೂಡ ಕ್ಯೂಟ್‌ ಆಗಿ ಕಂಡಿದ್ದಾರೆ. ಫೋಟೊಗಳಲ್ಲಿ ರಾಧಿಕಾ ಅವರ ಅಕ್ಕ ಅಂಜಲಿ ಮರ್ಚೆಂಟ್ ಮಜಿಥಿಯಾ ಕೂಡ ಕಾಣಿಸಿಕೊಂಡಿದ್ದಾರೆ. ಮದುವೆಗೆ ಮುಂಚಿನ ಸಂಭ್ರಮಾಚರಣೆಯ ಫೋಟೊಗಳನ್ನು ಹಂಚಿಕೊಂಡ ರಾಧಿಕಾ, “ಬ್ಲೆಸ್ಡ್ ವಿತ್ ದಿ ಬೆಸ್ಟ್” ಎಂದು ಬರೆದುಕೊಂಡಿದ್ದಾರೆ. ಕಳೆದ ತಿಂಗಳು ಜಾಮ್‌ನಗರದಲ್ಲಿ ನಡೆದ ರಾಧಿಕಾ ಮರ್ಚಂಟ್‌ ಮತ್ತು ಅನಂತ್ ಅಂಬಾನಿ ಅವರ ವಿವಾಹ ಪೂರ್ವದ ಸಂಭ್ರಮಾಚರಣೆಯಲ್ಲಿ ಮದುಮಗಳ ಕಡೆಯಿಂದ ಜಾನ್ವಿ ಕೂಡ ಇದ್ದರು.

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ, ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಉದ್ಯಮಿ ಮುಕೇಶ್‌ (Mukesh Ambani) ಅಂಬಾನಿ ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ವಿವಾಹ ಪೂರ್ವ ಸಂಭ್ರಮ ಅದ್ಧೂರಿಯಾಗಿ ನಡೆದಿತ್ತು. ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ಖ್ಯಾತ ಪಾಪ್‌ ಗಾಯಕಿ ರಿಹಾನಾ (Rihanna) ಅವರ ಲೈವ್‌ ಶೋ ಕೂಡ ಅದ್ಧೂರಿಯಾಗಿ ನೆರವೇರಿತ್ತು.

ಇದನ್ನೂ ಓದಿ: Priyanka Chopra: ʻಅಮರ್ ಸಿಂಗ್ ಚಮ್ಕಿಲಾʼ ಸಿನಿಮಾವನ್ನು ಹೊಗಳಿದ ಪ್ರಿಯಾಂಕಾ ಚೋಪ್ರಾ!

ಮದುವೆಯ ಪೂರ್ವ ಸಂಭ್ರಮದಲ್ಲಿ ಶಾರುಖ್ ಖಾನ್, ಗೌರಿ ಖಾನ್, ಸಲ್ಮಾನ್ ಖಾನ್, ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಸದ್ಗುರು, ಅಕ್ಷಯ್ ಕುಮಾರ್, ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಆಲಿಯಾ ಭಟ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಣಬೀರ್ ಕಪೂರ್, ನೀತು ಕಪೂರ್, ಅನನ್ಯಾ ಪಾಂಡೆ, ಜಾಹ್ನವಿ ಕಪೂರ್, ಶನಯಾ ಕಪೂರ್, ಶ್ರದ್ಧಾ ಕಪೂರ್, ಸೋನಮ್ ಕಪೂರ್ ಅಹುಜಾ, ಅನಿಲ್ ಕಪೂರ್, ಡೇವಿಡ್ ಧವನ್, ಎಂಎಸ್ ಧೋನಿ, ರೋಹಿತ್ ಶರ್ಮಾ, ಹಾರ್ದಿಕ್ ನೆಹ್ವಾಲ್, ಹಾರ್ದಿಕ್ ಪಾಂಡ್ಯ ಜಾಫ್ರಿ, ಅಮೀರ್ ಖಾನ್, ಸುಹಾನಾ ಖಾನ್, ರಿಯಾ ಕಪೂರ್, ಕರೀನಾ ಕಪೂರ್ ಖಾನ್, ಸೈಫ್ ಅಲಿ ಖಾನ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಜಾನ್ ಅಬ್ರಹಾಂ, ಕರಿಷ್ಮಾ ಕಪೂರ್, ಅಟ್ಲೀ, ರಾಮ್ ಚರಣ್, ಮನೀಶ್ ಮಲ್ಹೋತ್ರಾ, ಮಾಧುರಿ ದೀಕ್ಷಿತ್ ನೇನೆ, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತರರು ಇದ್ದರು.

Exit mobile version