ಬೆಂಗಳೂರು: ಕ್ರಿಕೆಟ್ ಕತೆಯನ್ನೇ ಮೂಲವಾಗಿಟ್ಟುಕೊಂಡಿರುವ ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ’ (Mr. & Mrs. Mahi) ಸಿನಿಮಾವೊಂದು ರೆಡಿಯಾಗುತ್ತಿದೆ. ಆ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ (Janhvi Kapoor) ಹಾಗೂ ಪ್ರತಿಭಾವಂತ ನಟ ರಾಜ್ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ’ 2024 ರ ಟಿ 20 ವಿಶ್ವಕಪ್ ಪ್ರಾರಂಭವಾಗುವ ಕೇವಲ 24 ಗಂಟೆಗಳ ಮೊದಲು ಮೇ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರದ ಸಂದರ್ಶನ ವೇಳೆ ನಟಿ 12 -13 ವರ್ಷ ವಯಸ್ಸಿನಲ್ಲಿರುವಾಗ ಸೋಷಿಯಲ್ ಮೀಡಿಯಾದಿಂದಾಗಿ ಲೈಂಗಿಕವಾಗಿ ನಾನು ಸಮಸ್ಯೆ ಎದುರಿಸಿದ್ದೆʼʼಎಂದು ಹೇಳಿಕೊಂಡಿದ್ದಾರೆ.
ನಟಿ ಮಾತನಾಡಿ ʻʻನಾನು ಮಾಧ್ಯಮಗಳಿಂದ ಮೊದಲ ಬಾರಿಗೆ ಲೈಂಗಿಕವಾಗಿ ಸಮಸ್ಯೆ ಎದುರಿಸಿದ್ದೆ. ಆಗ ನನಗೆ 12-13 ವರ್ಷ ವಯಸ್ಸು. ಒಮ್ಮೆ ನನ್ನ ತಾಯಿ ಮತ್ತು ತಂದೆಯೊಂದಿಗೆ ಈವೆಂಟ್‌ಗೆ ಹೋಗಿದ್ದೆ. ಆ ಚಿತ್ರಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದವು. ಮಾರ್ಫಿಂಗ್ ಮಾಡಿ ಪೋರ್ನ್ ವೆಬ್‌ಸೈಟ್‌ಗಳಲ್ಲಿ ಹಾಕಿದ್ದರು. ಆದರೆ ಇದು ಮಾರ್ಫ್ ಮಾಡಿದ ಚಿತ್ರಗಳು ಎಂದು ಹಲವರಿಗೆ ತಿಳಿದೇ ಇರಲಿಲ್ಲ. ನಿಜ ಎಂದು ನಂಬಿದ್ದರು. ಆ ಚಿಕ್ಕ ವಯಸ್ಸಿನಲ್ಲಿಯೇ ನನಗೆ ತುಂಬಾ ಆಘಾತವಾಗಿತ್ತು. ನನ್ನ ಫ್ರೆಂಡ್ಸ್ ಕೂಡ ಗೇಲಿ ಮಾಡುತ್ತಿದ್ದರು. ಆ ವಯಸ್ಸಿನಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿದೇ ಇರಲಿಲ್ಲʼ ಎಂದಿದ್ದಾರೆ.
ಇದನ್ನೂ ಓದಿ: Kannada New Movie: `ಅನರ್ಥ’ ಸಿನಿಮಾ ಟೀಸರ್ ಔಟ್!
ಮಿಸ್ಟರ್& ಮಿಸೆಸ್ ಮಹಿ
ಭಾರತವು ಕ್ರಿಕೆಟ್ ಅನ್ನು ಆರಾಧಿಸುವ ರಾಷ್ಟ್ರವಾಗಿದೆ,. ಕ್ರೀಡಾ ಅಭಿಮಾನಿಗಳಿಗೆ ಕ್ರಿಕೆಟ್ ಧರ್ಮಕ್ಕಿಂತ ಹೆಚ್ಚು. ಎಲ್ಲಾ ವಯಸ್ಸಿನ ಜನರು ವ್ಯಾಪಕವಾಗಿ ಅನುಸರಿಸುವ ಮತ್ತು ಪ್ರೀತಿಸುವ ಕ್ರೀಡೆಯಾಗಿದೆ. ಹೀಗಾಗಿ ಸಿನಿಮಾ ನಿರ್ಮಾಕರು ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದೇ ರೀತಿ ಬಾಲಿವುಡ್ ನಿರ್ದೇಶಕ ಶರಣ್ ಶರ್ಮಾ ಅವರು ನಟರಾದ ಜಾನ್ವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಭಿನಯದ ಕ್ರಿಕೆಟ್ ಆಧಾರಿತ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.
‘ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ’ ಎಂಬ ಶೀರ್ಷಿಕೆಯ ಈ ಚಲನಚಿತ್ರವು ಕ್ರಿಕೆಟ್ ಕ್ರೀಡೆಯ ಮೇಲಿನ ತಮ್ಮ ಪ್ರೀತಿಯನ್ನು ಅರಸುತ್ತಾ ಹಲವಾರು ಸವಾಲುಗಳು ಮತ್ತು ಅಡೆತಡೆಗಳ ಮೂಲಕ ಎದುರಿಸುವ ಸುಂದರ ಜೋಡಿಯೊಂದರ ಸುತ್ತ ಸುತ್ತುತ್ತದೆ.
ಚಿತ್ರದ ಟ್ರೈಲರ್ ಇನ್ನೂ ಬಿಡುಗಡೆಯಾಗದಿದ್ದರೂ, ಪ್ರಮುಖ ನಟಿ ಜಾಹ್ನವಿ ಕಪೂರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಅನಾವರಣಗೊಳಿಸಿದ್ದಾರೆ. ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ’ 2024 ರ ಟಿ 20 ವಿಶ್ವಕಪ್ ಪ್ರಾರಂಭವಾಗುವ ಕೇವಲ 24 ಗಂಟೆಗಳ ಮೊದಲು ಮೇ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಅಂದ ಹಾಗೆ ಸಿನಿಮಾದ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇಲ್ಲ. ಈ ಸಿನಿಮಾ ಧೋನಿಯ ಕತೆಯನ್ನು ಆಧರಿಸಿದ್ದು ಎಂದು ಎಂದು ಹೇಳಲಾಗುತ್ತಿದೆ. ಹೆಸರನ್ನು ಹೇಳುವಾಗ ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದ ಕತೆ ಎಂದು ಹೇಳಲಾಗುತ್ತಿದೆ. ಆದರೆ, ಅದರ ಬಗ್ಗೆ ಖಚಿತತೆ ಇಲ್ಲ. ಆದರೆ, ಕ್ರಿಕೆಟ್ ಆಧಾರಿತ ಸಿನಿಮಾ ಎಂಬುದು ಖಾತರಿ. ಹೀಗಾಗಿ ಸಿನಿ ಪ್ರೇಮಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳನ್ನು ಏಕಕಾಲಕ್ಕೆ ಸೆಳೆಯುವ ಉದ್ದೇಶವನ್ನು ನಿರ್ದೇಶಕರು ಹೊಂದಿದ್ದಾರೆ.