ಬೆಂಗಳೂರು: ಇಂದು ನಟಿ ಜಾನ್ವಿ ಕಪೂರ್ (Janhvi Kapoor) (ಮಾ.6) ಅವರಿಗೆ ಜನುಮದಿನದ ಸಂಭ್ರಮ. ಈ ನಟಿಯ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ಮೂರು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ‘ದೇವರ’ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ನಟಿಸಲು ಸಿದ್ಧರಾಗಿದ್ದಾರೆ. ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿರುವ 16ನೇ ಚಿತ್ರದಲ್ಲಿ ರಾಮ್ ಚರಣ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರತಂಡ ಇದೀಗ ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಿದೆ.
ಜಾನ್ವಿ ಕಪೂರ್ ಅವರ ಹುಟ್ಟುಹಬ್ಬದಂದು, ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ಸುದ್ದಿಯನ್ನು ಪ್ರಕಟಿಸಿದೆ. ʻʻಜಾನ್ವಿಕಪೂರ್ ಅವರಿಗೆ ಜನ್ಮದಿನದ ಶುಭಾಶಯಗಳು. RC 16ಗೆ ಸ್ವಾಗತ. ಬುಚ್ಚಿ ಬಾಬು ಸನಾ ನಿರ್ದೇಶಿಸಲಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಬೆಂಬಲದೊಂದಿಗೆ, ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳ ಅಡಿಯಲ್ಲಿ ಹೈ ಬಜೆಟ್‌ನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಸ್ಪೋರ್ಟ್ಸ್ ಡ್ರಾಮಾ ಚಿತ್ರ ಇದಾಗಿದ್ದು, ಪ್ಯಾನ್-ಇಂಡಿಯಾ ಚಲನಚಿತ್ರವಾಗಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Janhvi Kapoor: ‘ಲೀಪ್, ಲಾಫ್ & ಲರ್ನ್’ ಸ್ಟಾಂಡ್ ಅಪ್ ಸ್ಪೆಷಲ್‌ನಲ್ಲಿ ಜಾನ್ವಿ ಕಪೂರ್‌ರಿಂದ ಎಚ್‌ಪಿವಿ ಜಾಗೃತಿ!
Welcoming the celestial beauty on board for #RC16 ✨
— Mythri Movie Makers (@MythriOfficial) March 6, 2024
Happy Birthday to the mesmerizing #JanhviKapoor ❤️🔥#RamCharanRevolts
Global Star @AlwaysRamCharan @BuchiBabuSana @arrahman @RathnaveluDop @artkolla @vriddhicinemas @SukumarWritings pic.twitter.com/DGT335D4no
ಈ ಹಿಂದೆ ಜಾನ್ವಿ ಕಪೂರ್ ಅವರ ತಂದೆ ಬೋನಿ ಕಪೂರ್ ಸಂದರ್ಶನವೊಂದರಲ್ಲಿ ಈ ಸುದ್ದಿಯನ್ನು ಖಚಿತಪಡಿಸಿದ್ದರು. “ನನ್ನ ಮಗಳು ಈಗಾಗಲೇ ಜ್ಯೂನಿಯರ್ ಎನ್‌ಟಿಆರ್ ಅವರೊಂದಿಗೆ ಶೂಟಿಂಗ್ ಮಾಡುತ್ತಿದ್ದಾಳೆ. ಸದ್ಯದಲ್ಲೇ ರಾಮ್ ಚರಣ್ ಜತೆಗೂ ಸಿನಿಮಾ ಶುರು ಮಾಡಲಿದ್ದಾರೆ. ಈ ಇಬ್ಬರು ನಟರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ನನ್ನ ಮಗಳು ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ಸದ್ಯದಲ್ಲೇ ಸೂರ್ಯ ಜತೆ ನಟಿಸಲಿದ್ದಾರೆ. ನನ್ನ ಪತ್ನಿ ಶ್ರೀದೇವಿ ಬಹು ಭಾಷೆಗಳಲ್ಲಿ ನಟಿಸಿದ್ದರು. ಅದೇ ಹಾದಿಯಲ್ಲಿ ನನ್ನ ಮಗಳು ಸಾಗುತ್ತಿದ್ದಾಳೆʼʼ ಎಂದು ಹೇಳಿಕೊಂಡಿದ್ದರು.
ಜಾನ್ವಿ ಕಪೂರ್ ಕೊನೆಯದಾಗಿ ವರುಣ್ ಧವನ್ ಜತೆ ‘ಬವಾಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಆರ್‌ಸಿ 16’ ಮತ್ತು ‘ದೇವರ’ ಹೊರತುಪಡಿಸಿ, ಜಾನ್ವಿ ಅವರು ರಾಜ್‌ಕುಮಾರ್ ರಾವ್ ಎದುರು ‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’, ಸುಧಾಂಶು ಸರಿಯಾ ಅವರ ‘ಉಲಾಜ್’ ಮತ್ತು ವರುಣ್ ಧವನ್ ಎದುರು ‘ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ’ ಸಿನಿಮಾಗಳನ್ನು ಹೊಂದಿದ್ದಾರೆ.