ಬೆಂಗಳೂರು: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ವಿವಾಹ ಸಮಾರಂಭಕ್ಕೆ ಮುಂಚಿತವಾಗಿ, ಅಂಬಾನಿ ಕುಟುಂಬ ಸಂಗೀತ ಕಾರ್ಯಕ್ರಮ ಏರ್ಪಡಿಸಿತ್ತು. ಜುಲೈ 5, ರಂದು, ಅನಂತ್ ಮತ್ತು ರಾಧಿಕಾ ಅ ‘ಸಂಗೀತ’ ಸಮಾರಂಭದಲ್ಲಿ ಇಡೀ ಬಾಲಿವಡ್ ಗಣ್ಯರು ನೆರೆದಿದ್ದರು. ಈ ವೇಳೆ ಜಾಹ್ನವಿ ಕಪೂರ್ (Janhvi Kapoor) ನವಿಲು ಬಣ್ಣದ ಲೆಹೆಂಗಾದಲ್ಲಿ ಬಹಳ ಅದ್ಭುತವಾಗಿ ಕಂಡರು.
ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ನವಿಲು ಬಣ್ಣದ ಲೆಹೆಂಗಾದಲ್ಲಿ ಜಾಹ್ನವಿ ಕಪೂರ್ ಆಕರ್ಷಕವಾಗಿ ಕಾಣುತ್ತಿದ್ದರು. ಸ್ಕರ್ಟ್ ಕೃತಕ ನವಿಲು ಗರಿಗಳಿಂದ ಅಲಂಕರಿಸಲಾಗಿತ್ತು. ಜಾನ್ವಿ ಕಪೂರ್ ವಜ್ರದ ನೆಕ್ಲೇಸ್ ಕೂಡ ಧರಿಸಿದ್ದರು. ನವ್ಯಾ ನವೇಲಿ ನಂದಾ ಬೋಲ್ಡ್ ಲೆಹೆಂಗಾ ಚೋಲಿಯಲ್ಲಿ ಕಂಡರು. ತೋಳಿಲ್ಲದ ಬ್ರೇಲೆಟ್ ಶೈಲಿಯ ಚೋಲಿ ಮತ್ತು ವಿಶಿಷ್ಟವಾದ ಲೆಹೆಂಗಾ ಧರಿಸಿದ್ದರು.
ಗರ್ಭಿಣಿ ದೀಪಿಕಾ ಸೀರೆಯಲ್ಲಿ ಅತ್ಯಂತ ಕ್ಯೂಟ್ ಆಗಿ ಕಂಡಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮಂರ್ಚಂಟ್ ಸಂಗೀತ ಕಾರ್ಯಕ್ರಮದಲ್ಲಿ ನೇರಳೆ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ: Janhvi Kapoor: ಪಾಪರಾಜಿಗಳ ಅಸಲಿ ಮುಖ ರಿವೀಲ್ ಮಾಡಿದ ಜಾನ್ವಿ ಕಪೂರ್!
ನೇರಳೆ ಬಣ್ಣದ ಸೀರೆಯಲ್ಲಿ ತನ್ನ ಬೇಬಿ ಬಂಪ್ ಜತೆಗೆ ಪೋಸ್ ಕೂಡ ಕೊಟ್ಟಿದ್ದಾರೆ. ಚಿನ್ನದ ಆಭರಣಗಳನ್ನು ಧರಿಸಿದ್ದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಇದರ ವಿವರವನ್ನು ಬಹಿರಂಗಪಡಿಸುವ ಆಹ್ವಾನ ಪತ್ರಿಕೆ ರಿಲೀಸ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜುಲೈ 14ರವರೆಗೆ ಶುಭ ವಿವಾಹ, ಶುಭ ಆಶೀರ್ವಾದ ಮತ್ತು ಮಂಗಳ ಉತ್ಸವ ಎನ್ನುವ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ. ಕೆಲವು ದಿನಗಳ ಹಿಂದೆ ಮೂರು ದಿನಗಳ ಅದ್ದೂರಿ ಮದುವೆ ಪೂರ್ವ ಸಮಾರಂಭ ನಡೆದಿತ್ತು. ದೇಶ-ವಿದೇಶಗಳ ವಿವಿಧ ಕ್ಷೇತ್ರಗಳ ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು.
ಅಂಬಾನಿ ಸಂಗೀತ ಕಾರ್ಯಕ್ರಮದಲ್ಲಿ ಮಾಧುರಿ ದೀಕ್ಷಿತ್, ಖುಷಿ ಕಪೂರ್, ಅನನ್ಯಾ ಪಾಂಡೆ, ಸಲ್ಮಾನ್ ಖಾನ್, ಎಂಎಸ್ ಧೋನಿ, ಆದಿತ್ಯ ರಾಯ್ ಕಪೂರ್, ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ಅನೇಕ ಖ್ಯಾತನಾಮರು ಭಾಗವಹಿಸಿದ್ದರು.