ಬೆಂಗಳೂರು: ಬಾಲಿವುಡ್ ನಟ ಜಾನ್ ಅಬ್ರಹಾಂ (John Abraham) ಅವರು ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಇದೀಗ ಹೀರೊ ಆಗಿ ಮಿಂಚಲು ರೆಡಿ ಇದ್ದಾರೆ. ಜಾನ್ ಅಬ್ರಹಾಂ ನಟನೆಯ ‘ವೇದಾ’ ಸಿನಿಮಾ ಜುಲೈ 12ರಂದು ರಿಲೀಸ್ ಆಗಲಿದೆ. ಈ ಮೊದಲು ರಿಲೀಸ್ ಆಗಿದ್ದ ʻಬಾಟ್ಲಾ ಹೌಸ್ʼ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ನಿಖಿಲ್ ಅಡ್ವಾಣಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
‘ಅವಳಿಗೆ ಒಬ್ಬ ರಕ್ಷಕನ ಅಗತ್ಯವಿತ್ತು. ಆಕೆಗೆ ಆಯುಧ ಸಿಕ್ಕಿತು,” ಎಂದು ಪೋಸ್ಟರ್ ಜತೆಗೆ ಕ್ಯಾಪ್ಷನ್ ಹಂಚಿಕೊಂಡಿದೆ ಚಿತ್ರತಂಡ. ಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʻʻಬಾಟ್ಲಾ ಹೌಸ್ʼ ನೈಜ ಘಟನೆ ಆಧರಿಸಿ ಸಿದ್ಧವಾದ ಸಿನಿಮಾವಾಗಿತ್ತು. ‘ವೇದಾ ಇದು ಕೇವಲ ಸಿನಿಮಾ ಅಲ್ಲ. ನೈಜ ಘಟನೆ ಆಧರಿಸಿದ ನಮ್ಮ ಸಮಾಜದ ಪ್ರತಿಬಿಂಬ. ಅಬ್ರಾಹಂ ಹಾಗೂ ಶಾರ್ವರಿ ಈ ಚಿತ್ರದ ನಾಯಕ, ನಾಯಕಿ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಜಾನ್ ಕಾಶ್ಮೀರದಲ್ಲಿ ವೇದಾ ಚಿತ್ರೀಕರಣದ ಸ್ಕೆಡ್ಯೂಲ್ ಮುಗಿಸಿದ್ದರು. ದಕ್ಷಿಣ ಕಾಶ್ಮೀರದ ಶ್ರೀನಗರ ಮತ್ತು ಅನಂತನಾಗ್ ಜಿಲ್ಲೆಯಲ್ಲಿ ಚಿತ್ರೀಕರಣ ಮಾಡಲಾಗಿದೆ ʼʼಎಂದು ಹೇಳಿಕೊಂಡಿದ್ದಾರೆ ನಿಖಿಲ್ ಅಡ್ವಾಣಿ.
ಶಾರ್ವರಿ ಅವರು ಜಾನ್ ಅಬ್ರಹಾಂ ಜತೆ ಮೊದಲ ಬಾರಿಗೆ ನಟಿಸಿದ್ದಾರೆ. ಈ ಮೊದಲು ಅವರು ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಅವರು ‘ಮಹರಾಜ’ ಸಿನಿಮಾದಲ್ಲಿ ನಟಿಸಿದ್ದಾರೆ. ವೇದಾ ಸಿನಿಮಾ “ಹೈ-ಎನರ್ಜಿ ಆ್ಯಕ್ಷನ್-ಡ್ರಾಮಾ” ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರವನ್ನು ಜೀ ಸ್ಟುಡಿಯೋಸ್, ಜಾನ್ಸ್ ಜೆಎ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.
ಇದನ್ನೂ ಓದಿ: NRI NEWS: ಡಾ. ಅಬ್ರಹಾಂ ಕೊಲ್ಲಮನ ಶ್ರದ್ಧಾಂಜಲಿ ಸಭೆ
ಜಾನ್ ಅಬ್ರಹಾಂ ಅವರು ಸಿದ್ಧಾರ್ಥ್ ಆನಂದ್ ಅವರು ನಿರ್ದೇಶಿಸಿದ ʻಪಠಾಣ್ʼ ಚಿತ್ರದಲ್ಲಿ ಜಾನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.