ಬೆಂಗಳೂರು: ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಟೈಗರ್ ಶ್ರಾಫ್ ಫಿಟ್ನೆಸ್ಗೆ ಹೆಚ್ಚು ಪ್ರಾಮುಖ್ಯತೆ ನೀಡುವವರು. ಇವರು ಪಾನ್ ಮಸಾಲ ಸೇವನೆ ಮಾಡುವುದಿಲ್ಲ. ಆದಾಗ್ಯೂ ವಿಮಲ್ ಪ್ರಚಾರದಲ್ಲಿ ಇವರು ಭಾಗಿ ಆಗುತ್ತಿದ್ದಾರೆ. ಇದನ್ನು ಜಾನ್ ಅಬ್ರಹಾಂ ಟೀಕಿಸಿದ್ದಾರೆ.
ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡ ಜಾನ್, ‘ಸಾವನ್ನು ಮಾರಲು’ ಎಂದೂ ಬಯಸುವುದಿಲ್ಲ ಎಂದು ಹೇಳಿದರು. ನಟ ರ ಜಾಹೀರಾತು ಬಗ್ಗೆ ನೇರವಾಗಿ ಹೆಸರನ್ನು ಹೇಳದೆ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಪಾನ್ ಮಸಾಲ ಮಾರುವುದನ್ನು ಸಾವನ್ನು ಮಾರಾಟ ಮಾಡಿದಂತೆ’ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಜಾನ್ ಮಾತನಾಡಿ ʻʻಜನರು ಫಿಟ್ನೆಸ್ ಬಗ್ಗೆ ಮಾತನಾಡುತ್ತಾರೆ. ಆ ಬಳಿಕ ಅದೇ ವ್ಯಕ್ತಿಗಳು ಪಾನ್ ಮಸಾಲ ಪ್ರಚಾರ ಮಾಡುತ್ತಾರೆ. ನಾನು ಇಂಡಸ್ಟ್ರಿಯ ಎಲ್ಲರನ್ನೂ ಪ್ರೀತಿಸುತ್ತೇನೆ. ನಾನು ಅವರನ್ನು ಅಗೌರವಿಸುತ್ತಿಲ್ಲ. ಒಂದು ವಿಚಾರವನ್ನು ನಾನು ಸ್ಪಷ್ಟಪಡಿಸಬೇಕು. ನಾನು ನನ್ನ ಬಗ್ಗೆ ಮಾತನಾಡುತ್ತೇನೆ. ನಾನು ಸಾವನ್ನು ಮಾರಾಟ ಮಾಡಲ್ಲ. ಇದಕ್ಕೆ ನಾನು ಹಾಕಿಕೊಂಡ ಪ್ರಿನ್ಸಿಪಲ್ ಕಾರಣ. ನಾನು ನನ್ನ ಜೀವನವನ್ನು ಪ್ರಾಮಾಣಿಕತೆಯಿಂದ ಜೀವಿಸಿದರೆ ಮತ್ತು ನಾನು ಬೋಧಿಸುವದನ್ನು ನಾನು ಅಭ್ಯಾಸ ಮಾಡಿದರೆ, ಆಗ ನಾನೇ ರೋಲ್ ಮಾಡೆಲ್ ’ ಎಂದಿದ್ದಾರೆ ಅವರು.
ಇದನ್ನೂ ಓದಿ: Prashanth Neel-Jr Ntr: ಸೆಟ್ಟೇರಿತು ಪ್ರಶಾಂತ್ ನೀಲ್- ಜ್ಯೂ.ಎನ್‌ಟಿಆರ್ ಸಿನಿಮಾ; ರಿಲೀಸ್ ಡೇಟ್ ಅನೌನ್ಸ್!
ಈ ಹಿಂದೆ, ನಟರಾದ ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಅವರು ಪಾನ್ ಮಸಾಲಾ ಮತ್ತು ಗುಟ್ಕಾ ಬ್ರಾಂಡ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು. ಅಕ್ಷಯ್ ಅವರು ಅಂತಹ ಪ್ರಚಾರಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದರು. “ಈ ಜಾಹೀರಾತುಗಳನ್ನು 13ನೇ ಅಕ್ಟೋಬರ್, 2021 ರಂದು ಚಿತ್ರೀಕರಿಸಲಾಗಿದೆ. ಸಾರ್ವಜನಿಕವಾಗಿ ಘೋಷಿಸಿದಾಗಿನಿಂದ ನಾನು ಬ್ರ್ಯಾಂಡ್‌ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅವರು ಈಗಾಗಲೇ ಚಿತ್ರೀಕರಿಸಿದ ಜಾಹೀರಾತುಗಳನ್ನು ಮುಂದಿನ ತಿಂಗಳ ಅಂತ್ಯದವರೆಗೆ ಕಾನೂನುಬದ್ಧವಾಗಿ ಚಲಾಯಿಸಬಹುದು ”ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.
ಜಾನ್ ಅಬ್ರಹಾಂ ಅವರು ‘ವೇದ’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗುತ್ತಿದೆ. ಜಾತಿ ವಿಚಾರಗಳ ಬಗ್ಗೆ ಈ ಸಿನಿಮಾ ಇದೆ. ಈ ಚಿತ್ರದ ಜೊತೆಗೆ ‘ಸ್ತ್ರೀ 2’ ಸೇರಿ ಹಲವು ಚಿತ್ರಗಳು ಬಿಡುಗಡೆ ಆಗಿದೆ.