ಬೆಂಗಳೂರು: ಮೇ 20ಕ್ಕೆ ಟಾಲಿವುಡ್ ನಟ ಜ್ಯೂನಿಯರ್ ಎನ್‌ಟಿಆರ್ (Jr NTR) ಅವರ ಜನುಮ ದಿನ. ಈ ಮುಂಚೆಯೇ ಘೋಷಣೆಯಾಗಿದ್ದ ಪ್ರಶಾಂತ್ ನೀಲ್-ಜ್ಯೂ. ಎನ್‌ಟಿಆರ್ ಸಿನಿಮಾದ ಟೈಟಲ್ ಜ್ಯೂನಿಯರ್ ಎನ್‌ಟಿಆರ್ ಬರ್ತ್‌ಡೇ ದಿನ ರಿವೀಲ್ ಆಗಬಹುದು ಎಂದು ವರದಿಯಾಗಿದೆ. ಟೈಟಲ್ ಏನು ಎನ್ನುವ ಬಗ್ಗೆ ಬಹಳ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ.
ಆರ್‌ಆರ್‌ಆರ್ ಬಿಡುಗಡೆಯಾದಾಗಿನಿಂದ, ಜ್ಯೂ. ಎನ್‌ಟಿಆರ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಾಲಿವುಡ್‌ಗೆ ವಾರ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದಾರೆ ನಟ. ದೇವರ ಕೂಡ ಜ್ಯೂ. ಎನ್‌ಟಿಆರ್ ಕೈಯಲ್ಲಿದೆ. ಇದೀಗ ವರದಿಗಳ ಪ್ರಕಾರ NTR 31 ಅನ್ನು ತಾತ್ಕಾಲಿಕವಾಗಿ ʻಡ್ರ್ಯಾಗನ್ʼ ಎಂದು ಹೆಸರಿಡಲಾಗಿದೆ ಎಂದು ವರದಿಯಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಎಲ್ಲಾ ಭಾಷೆಗಳಲ್ಲಿ ಒಂದೇ ಟೈಟಲ್ ಇರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹಿಂದಿಯಲ್ಲಿ ಈ ಟೈಟಲ್ ಕರಣ್ ಜೋಹರ್ ಬಳಿ ಇತ್ತಂತೆ. ತಮ್ಮ ‘ಬ್ರಹ್ಮಾಸ್ತ್ರ’ ಚಿತ್ರಕ್ಕಾಗಿ ಈ ಟೈಟಲ್ ರಿಜಿಸ್ಟರ್ ಮಾಡಿಸಿದ್ದರಂತೆ. ಇದೀಗ ಆ ಟೈಟಲ್ ಅನ್ನು ನೀಲ್ ಚಿತ್ರಕ್ಕೆ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗ್ತಿದೆ.. ‘ಡ್ರ್ಯಾಗನ್’ಗಿಂತ ‘ಡೈನೋಸಾರ್’ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ.
ಇದನ್ನೂ ಓದಿ: Banners Of Jr NTR: ಜ್ಯೂ. ಎನ್‌ಟಿಆರ್ ಬ್ಯಾನರ್, ಫ್ಲೆಕ್ಸ್ ಕಿತ್ತು ಬಿಸಾಕಿ ಎಂದ ಬಾಲಯ್ಯ!
ಸದ್ಯ ನಟ ‘ದೇವರ‘ ಸಿನಿಮಾ (Devara Movie)ದಲ್ಲಿ ಬ್ಯಸಿಯಾಗಿದ್ದಾರೆ. ಒಂದು ದೊಡ್ಡ-ಬಜೆಟ್ ಕಮರ್ಷಿಯಲ್ ಆ್ಯಕ್ಷನ್ ಎಂಟರ್‌ಟೈನರ್. ಕೊರಟಾಲ ಶಿವ ಈ ಸಿನಿಮಾ ನಿರ್ದೇಶಕರು. `ದೇವರ’ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಪಕರು ಹೊಸ ಅಪ್ ಡೇಟ್ ನೀಡಿದ್ದಾರೆ. ಈ ಚಿತ್ರವು 2024ರ ಅಕ್ಟೋಬರ್ 10 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ. ಮೊದಲ ಭಾಗಕ್ಕೆ ‘ದೇವರ: ಭಾಗ 1’ ಎಂದು ಹೆಸರಿಡಲಾಗಿದೆ. ಈ ಮುಂಚೆ ಚಿತ್ರತಂಡ ಏಪ್ರಿಲ್ 5 ರಂದು ಸಿನಿಮಾ ರಿಲೀಸ್ ಡೇಟ್‌ವನ್ನು ಘೋಷಿಸಿತ್ತು.
ಜ್ಯೂನಿಯರ್ ಎನ್‌ಟಿಆರ್, ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ದೇವರ’ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್‌ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್‌ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ.
ಈ ಚಿತ್ರದ OTT ಹಕ್ಕುಗಳನ್ನು ಸ್ಟ್ರೀಮಿಂಗ್ ಕಂಪನಿ ನೆಟ್ಫ್ಲಿಕ್ಸ್ ಭಾರಿ ಬೆಲೆಗೆ ಪಡೆದುಕೊಂಡಿದೆ. ಮಾಹಿತಿಯ ಪ್ರಕಾರ, ನೆಟ್ಫ್ಲಿಕ್ಸ್ 155 ಕೋಟಿ ರೂಪಾಯಿ ನೀಡಿ ಈ ಚಿತ್ರದ OTT ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.