Site icon Vistara News

Kalki 2898 AD: ‘ಅಶ್ವತ್ಥಾಮ’ನಾಗಿ ಬಂದ ಅಮಿತಾಭ್‌: ಬಿಗ್‌ಬಿ ಲುಕ್ ಹೇಗಿದೆ?

Kalki 2898 AD Name of Amitabh Bachchan character revealed

ಬೆಂಗಳೂರು: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 ADಸದ್ಯ ನಿರೀಕ್ಷೆ ಹುಟ್ಟು ಹಾಕಿದೆ. ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನ್ನುವ ಖ್ಯಾತಿ ಈ ಸಿನಿಮಾಕ್ಕಿದೆ. ಟಾಲಿವುಡ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಕುತೂಹಲ ಮೂಡಿಸಿದೆ.  ಇವರ ಜತೆಗೆ ಘಟಾನುಘಟಿ ಕಲಾವಿದರಾದ ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌ (Amitabh Bachchanಮತ್ತು ಕಮಲ್‌ ಹಾಸನ್‌ (Kamal Haasan) ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಚಿತ್ರತಂಡ ಅಮಿತಾಭ್ ಬಚ್ಚನ್ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ತಂಡ ರಿವೀಲ್ ಮಾಡಿದೆ. ಅಶ್ವತ್ಥಾಮನಾಗಿ ಅಮಿತಾಭ್​ ಬಚ್ಚನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಏ.21ರಂದು ಚಿತ್ರತಂಡ ಅಮಿತಾಭ್‌ ಅವರ ಪಾತ್ರವನ್ನು ರಿವೀಲ್‌ ಮಾಡಿದೆ. ಅಶ್ವತ್ಥಾಮನಾಗಿ ಅಮಿತಾಭ್​ ಬಚ್ಚನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅಮಿತಾಭ್‌ ಬಚ್ಚನ್ ಹಳದಿ ಬಟ್ಟೆಯನ್ನು ಧರಿಸಿದ್ದರು. ಗುಹೆಯಂತೆ ಕಾಣುವ ಶಿವಲಿಂಗದ ಮುಂದೆ ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು. ಮಗುವೊಂದು ನೀನು ಯಾರು? ಎಂದು ಕೇಳಿದಾಗ ʻʻಪ್ರಾಚೀನ ಕಾಲದಿಂದಲೂ, ನಾನು ಅವತಾರದ ಆಗಮನಕ್ಕಾಗಿ ಕಾಯುತ್ತಿದ್ದೆ. ನಾನು ಗುರು ದ್ರೋಣರ ಮಗ. ಅಶ್ವತ್ಥಾಮ.”ಎಂದು ಹೇಳುತ್ತಾರೆ. ಈ ಮೂಲಕ ಅಮಿತಾಭ್‌ ಪಾತ್ರ ರಿವೀಲ್‌ ಆಗಿದೆ.

ಇದನ್ನೂ ಓದಿ: Kalki 2898 AD: ನಾಳೆ ಮಹತ್ವದ  ಅಪ್‌ಡೇಟ್‌ ನೀಡಲಿದೆ ಪ್ರಭಾಸ್‌ ಅಭಿನಯದ ʼಕಲ್ಕಿ 2898 ಎಡಿʼ ಚಿತ್ರತಂಡ; ಹೊಸ ರಿಲೀಸ್‌ ದಿನಾಂಕ ಘೋಷಣೆ?

ಭೂತ ಮತ್ತು ಭವಿಷ್ಯತ್‌ ಕಾಲದ ಕಥೆ ಹೇಳಲಿರುವ ʼಕಲ್ಕಿ 2898 ಎಡಿʼ ಚಿತ್ರಕ್ಕೆ ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಈ ಹಿಂದೆ 2024ರ ಮೇ 9ರಂದು ಚಿತ್ರ ತೆರೆ ಕಾಣಲಿದೆ ಎನ್ನಲಾಗಿತ್ತು. ಆದರೆ ಎಲ್ಲ ಕೆಲಸ ಪೂರ್ಣಗೊಂಡಿಲ್ಲದ ಕಾರಣ ರಿಲೀಸ್‌ ದಿನಾಂಕವನ್ನು ಮುಂದೂಡಲಾಗಿದೆ ಎಂದು ಕೆಲವು ದಿನಗಳ ಹಿಂದೆ ವರದಿಗಳು ತಿಳಿಸಿದ್ದವು. ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಾಗ್‌ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.

ವೈಜಯಂತಿ ಮೂವೀಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ದೀಪಿಕಾ ಪಡುಕೋಣೆ, ಪ್ರಭಾಸ್‌, ಅಮಿತಾಬ್‌ ಬಚ್ಚನ್‌ ಅವರ ಫಸ್ಟ್‌ ಲುಕ್‌ ಅನ್ನು ರಿಲೀಸ್‌ ಮಾಡಲಾಗಿತ್ತು. ಇದು ಚಿತ್ರಪ್ರೇಮಿಗಳ ಗಮನ ಸೆಳೆದಿತ್ತು. ಜತೆಗೆ ಶಿವರಾತ್ರಿಯಂದು ಪ್ರಭಾಸ್‌ ಅವರ ಪಾತ್ರ ಹೆಸರನ್ನೂ ರಿವೀಲ್‌ ಮಾಡಲಾಗಿತ್ತು. ಈ ಸಿನಿಮಾದಲ್ಲಿ ಪ್ರಭಾಸ್‌ ಭೈರವನಾಗಿ ಮಿಂಚಲಿದ್ದು, ಬಾಲಿವುಡ್‌ ನಟಿ ದಿಶಾ ಪಠಾಣಿ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ದುಬಾರಿ ಸಿನಿಮಾ

ʼಕಲ್ಕಿ 2898 ಎಡಿʼ ಈ ವರ್ಷದ ಅತೀ ಹೆಚ್ಚಿನ ಬಜೆಟ್‌ ಹೊಂದಿರುವ ಚಿತ್ರ ಎನಿಸಿಕೊಳ್ಳಲಿದೆ. ಈ ಚಿತ್ರದ ಬಜೆಟ್‌ ಬರೋಬ್ಬರಿ 600 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಂದರೆ ಇತ್ತೀಚಿನ ಬಹು ಕೋಟಿ ರೂ. ಬಜೆಟ್‌ನ ʼಸಲಾರ್‌ʼ (270 ಕೋಟಿ ರೂ.), ʼಅನಿಮಲ್‌ʼ (100 ಕೋಟಿ ರೂ.) ಮತ್ತು ʼಡಂಕಿʼ (140 ಕೋಟಿ ರೂ.) ಈ ಮೂರು ಚಿತ್ರಗಳ ಒಟ್ಟು ಬಜೆಟ್‌ಗಿಂತ ಜಾಸ್ತಿ. ಅಲ್ಲದೆ 2022ರಲ್ಲಿ ತೆರೆಕಂಡ ಬಾಲಿವುಡ್‌ ಚಿತ್ರ ʼಬಹ್ಮಾಸ್ತ್ರʼಕ್ಕಿಂತಲೂ (400 ಕೋಟಿ ರೂ.) ʼಕಲ್ಕಿʼಯ ಬಜೆಟ್‌ ಅಧಿಕ. ಹೀಗಾಗಿಯೇ ಈ ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿದೆ.

Exit mobile version