Site icon Vistara News

Kangana Ranaut: 37ನೇ ವಸಂತಕ್ಕೆ ಕಾಲಿಟ್ಟ ಕಂಗನಾ ರಣಾವತ್‌!

Kangana Ranaut

ಕಂಗನಾ ರಣಾವತ್ (Kangana Ranaut) ಹಿಂದಿ ಚಿತ್ರರಂಗದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಜತೆಗೆ ಪ್ರೇಕ್ಷಕರನ್ನು (kangana ranaut latest news) ತಮ್ಮ ನಟನೆ ಮೂಲಕ ರಂಜಿಸಿದ್ದಾರೆ. ಇಂದು (ಮಾರ್ಚ್ 23) 37ನೇ ವಸಂತಕ್ಕೆ (kangana ranaut date of birth) ಕಾಲಿಟ್ಟಿದ್ದಾರೆ ಕಂಗನಾ.

ಕಂಗನಾ ನಟಿ ಮಾತ್ರವಲ್ಲ. ಚಲನಚಿತ್ರ ನಿರ್ಮಾಪಕಿಯೂ ಹೌದು. ಹಿಮಾಚಲ ಪ್ರದೇಶದ ಭಂಬಾಲಾದಲ್ಲಿ (kangana ranaut life story) ಹುಟ್ಟಿ ಬೆಳೆದ (kangana ranaut birth place) ಕಂಗನಾ ಸಾಧಾರಣ ಕುಟುಂಬದಿಂದ ಬಂದವರು. ತಂದೆ ಅಮರ್‌ದೀಪ್ ರಣಾವತ್ ಉದ್ಯಮಿ, ತಾಯಿ ಆಶಾ ರಣಾವತ್‌ ಶಿಕ್ಷಕಿಯಾಗಿದ್ದರು.

ಬಹು ಬೇಡಿಕೆಯ ನಟಿ ಕಂಗನಾ ರಣಾವತ್ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಟಿ ಸದಾ ಸಕ್ರಿಯರಾಗಿರುತ್ತಾರೆ.

ಇದನ್ನೂ ಓದಿ: Kangana Ranaut : ಅಂಬಾನಿ ಮದುವೆ ಸಂಭ್ರಮದಲ್ಲಿ ʻಖಾನ್‌ʼಗಳ ಡ್ಯಾನ್ಸ್‌: ಇಂಥ ಆಮಿಷಗಳಿಗೆ ನಾನಂತೂ ಬಗ್ಗಲಿಲ್ಲ ಎಂದ ಕಂಗನಾ!

ಸಿನಿಮಾ ಜತೆಗೆ ಹಲವು ವಿವಾದಗಳಲ್ಲಿಯೂ ಇರುತ್ತಾರೆ ನಟಿ. ಇದೀಗ ಕಂಗನಾ ಕಂಗನಾ ರಣಾವತ್ (Kangana Ranaut) ಅವರು ತಮ್ಮ ನಿರ್ದೇಶನದ ʻಎಮರ್ಜೆನ್ಸಿʼ ಸಿನಿಮಾ ಮೂಲಕ ಮಿಂಚಲು ರೆಡಿಯಾಗಿದ್ದಾರೆ.

ʻಎಮರ್ಜೆನ್ಸಿʼ ಸಿನಿಮಾದಲ್ಲಿ ಕಂಗನಾ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಡೆ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.



Exit mobile version