Site icon Vistara News

Kangana Ranaut: ಊರ್ಮಿಳಾ ಕುರಿತು ಆಕ್ಷೇಪಾರ್ಹ ಹೇಳಿಕೆ: ಸನ್ನಿ ಲಿಯೋನ್‌ ಹೆಸರು ಎಳೆದು ತಂದ ಕಂಗನಾ!

Kangana Ranaut and sunny Urmila

ಬೆಂಗಳೂರು: ಕಂಗನಾ ರಣಾವತ್‌ (Kangana Ranaut) ಅವರು ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.  ಇದರ ಜತೆಗೆ 2020ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಕಂಗನಾ, ನಟಿ ಹಾಗೂ ರಾಜಕೀಯ ನಾಯಕಿಯಾಗಿ ಗುರುತಿಸಿಕೊಂಡಿರುವ ಊರ್ಮಿಳಾ ಮಾತೋಂಡ್ಕರ್ ( Urmila Matondkar) ಅವರನ್ನು ‘ಸಾಫ್ಟ್ ಪೋರ್ನ್ ಸ್ಟಾರ್’ ಎಂದು ಹೇಳಿ ವಿವಾದಕ್ಕೊಳಗಾಗಿದ್ದರು. ಇದೀಗ ಈ ವಿಡಿಯೊ ವೈರಲ್‌ ಆಗಿದ್ದು, ಸಾಕಷ್ಟು ಚರ್ಚೆಗಳು ಆಗುತ್ತಿವೆ. ಈ ಬಗ್ಗೆ ನಟಿ ಟೈಮ್ಸ್ ನೌ ಶೃಂಗಸಭೆಯಲ್ಲಿ ಸಮರ್ಥಸಿಕೊಂಡಿದ್ದಾರೆ.

“ಸಾಫ್ಟ್ ಪೋರ್ನ್ ಅಥವಾ ಪೋರ್ನ್ ಸ್ಟಾರ್ ಒಂದು ಆಕ್ಷೇಪಾರ್ಹ ಪದವೇ? ಅಲ್ಲ! ಇದು ಆಕ್ಷೇಪಾರ್ಹ ಪದವಲ್ಲ. ಇದು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲದ ಪದವಾಗಿದೆ. ವಯಸ್ಕ ಸಿನಿಮಾಗೆ ನಮ್ಮ ದೇಶದಲ್ಲಿ ಗೌರವ ಕೂಡ ಇದೆ. ಪೋರ್ನ್ ಸ್ಟಾರ್‌ಗಳಿಗೆ ನಾವು ಕೊಡುವಷ್ಟು ಗೌರವ ಯಾವ ದೇಶವೂ ಕೊಡುವುದಿಲ್ಲ. ಸನ್ನಿ ಲಿಯೋನ್‌ (Sunny Leone) ಅವರನ್ನು ಕೇಳಿ ಗೊತ್ತಾಗುತ್ತೆʼʼಎಂದು ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

ಊರ್ಮಿಳಾ ಮಾತೋಂಡ್ಕರ್ ಬಗ್ಗೆ ಕಂಗನಾ (Kangana Ranaut) ಮಾತನಾಡಿ ʻʻನನ್ನನ್ನು ರಾಜಕೀಯದಲ್ಲಿ ಪ್ರವೇಶಿಸಲು ಬಿಜೆಪಿಯು ಯಾವ ಆಧಾರದ ಮೇಲೆ ಪರಿಗಣಿಸಿದೆ ಎಂಬುದು ಊರ್ಮಿಳಾ ಅವರ ಪ್ರಶ್ನೆ ಆಗಿತ್ತು. ಕಲೆಗೆ ವಿವಿಧ ಕ್ಷೇತ್ರಗಳಿವೆ ಎಂದು ನಾನು ನಂಬುತ್ತೇನೆ. ಕಲೆಯನ್ನು ನಾವು ಸಂವೇದನಾಶೀಲ, ಸಮೂಹ ಕಲೆ ಎಂದು ನಾವು ಉಲ್ಲೇಖಿಸುತ್ತೇವೆ. ನಾನು ಬ್ಯಾಲೆನ್ಸ್ಡ್‌ ಸಿನಿಮಾ ಕಲಾವಿದರ ಗುಂಪಿಗೆ ಸೇರಿದವಳು ಎಂದು ನಾನು ವೈಯಕ್ತಿಕವಾಗಿ ನಂಬುತ್ತೇನೆʼಎಂದು ಹೇಳಿದರು.

ಇದನ್ನೂ ಓದಿ: Kangana Ranaut: 37ನೇ ವಸಂತಕ್ಕೆ ಕಾಲಿಟ್ಟ ಕಂಗನಾ ರಣಾವತ್‌!

ಮಾತ್ರವಲ್ಲ ವೇಶ್ಯೆಗೆ ಹೋಲಿಸಿದರೆ ಪೋರ್ನ್ ಸ್ಟಾರ್‌ಗಳನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳುವುದರ ಹಿಂದಿನ ಕಾರಣವನ್ನು ಕಂಗನಾ ಪ್ರಶ್ನಿಸಿದ್ದಾರೆ. “ನಾವು ಪೋರ್ನ್ ಸ್ಟಾರ್‌ಗಳನ್ನು ಸಾಮಾಜಿಕವಾಗಿ ಸ್ವೀಕರಿಸುವಾಗ ವೇಶ್ಯೆಯರ ಬಗ್ಗೆ ಈ ರೀತಿಯ ಕೆಟ್ಟ ಮನಸ್ಥಿತಿ ಏಕೆ ಹೊಂದಿದ್ದೇವೆ? ಅವರ ಬಳಿ ಹೆಚ್ಚು ಹಣವಿದೆ ಎಂಬ ಕಾರಣಕ್ಕಾಗಿಯೇ? ಗ್ಲಾಮರ್‌ಗಾಗಿಯೇ? ನಾವು ವೇಶ್ಯೆಯರನ್ನು ಪೋರ್ನ್ ಸ್ಟಾರ್‌ಗಳಂತೆ ಪರಿಗಣಿಸುತ್ತಿಲ್ಲ, ”ಎಂದು ಅವರು ಹೇಳಿದರು. ಇತ್ತೀಚಿನ ಕಂಗನಾ ಅವರ ಹೇಳಿಕೆಗಳ ಬಗ್ಗೆ ಊರ್ಮಿಳಾ ಮತ್ತು ಸನ್ನಿ ಇನ್ನೂ ಪ್ರತಿಕ್ರಿಯಿಸಿಲ್ಲ.

Exit mobile version