Site icon Vistara News

Kangana Ranaut: ಕಂಗನಾ ಪ್ರಕಾರ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್‌ ಅಂತೆ! ಕಾರಣವೇನು?

Kangana Ranaut

ಬೆಂಗಳೂರು: 2014ರಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಕಂಗನಾ ರಣಾವತ್‌ (Kangana Ranaut) ಈ ಮುಂಚೆ ಹೇಳಿಕೆ ನೀಡಿದ್ದರು. ಮಾರ್ಚ್ 27 ರಂದು, ಕಂಗನಾ ತನ್ನ ತವರು ʻಮಂಡಿʼಯಿಂದ ಅಭ್ಯರ್ಥಿಯಾಗಿ (Subhash Chandra Bose ) ಆಯ್ಕೆಯಾಗಿ, ಬಿಜೆಪಿಗೆ ಸೇರಿದ ಸ್ವಲ್ಪ ಸಮಯದ ನಂತರ ಟೈಮ್ಸ್ ನೌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು ಒಂದು ವಾರದ ನಂತರ, ಕಂಗನಾ ಸಂದರ್ಶನದ ಕ್ಲಿಪ್ ಎಕ್ಸ್‌ ಖಾತೆಯಲ್ಲಿ ವೈರಲ್ ಆಗಿದೆ. ಅದರಲ್ಲಿ, ಅವರು ಸ್ವಾತಂತ್ರ್ಯ ಹೋರಾಟಗಾರ ಮತ್ತು ʻಆಜಾದ್ ಹಿಂದ್ ಫೌಜ್ʼ ನಾಯಕ ʻಸುಭಾಷ್ ಚಂದ್ರ ಬೋಸ್ʼ ಅವರು ಭಾರತದ ಮೊದಲ ಪ್ರಧಾನಿ ಎಂದು ಕಂಗನಾ ಉಲ್ಲೇಖಿಸಿದ್ದಾರೆ. ಹಾಗೇ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

ಕಂಗನಾ ಹೇಳಿದ್ದೇನು?

ಕಂಗನಾ ಸಂದರ್ಶನದಲ್ಲಿ ಮಾತನಾಡಿ ʻʻನಾವು ಸ್ವಾತಂತ್ರ್ಯ ಪಡೆದಾಗ, ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಲ್ಲಿಗೆ ಹೋಗಿದ್ದರು? ಎಂದು ಕೇಳಿದರು. ಬೋಸ್ ಭಾರತದ ಪ್ರಧಾನಿ ಅಲ್ಲ ಎಂದು ಅಲ್ಲಿ ಕಂಗನಾಗೆ ನೆನಪಿಸಿದಾಗ, ಕಂಗನಾ ಹೇಳಿದ್ದು ಹೀಗೆ. ಸ್ವಾತಂತ್ರ್ಯ ಪಡೆದಾಗ ಬೋಸ್‌ ಆಗ ಇರಲಿಲ್ಲ, ಏಕೆ? ಅವರು ಎಲ್ಲಿಗೆ ಹೋದರು? ಅವರು ಹೇಗೆ ಕಣ್ಮರೆಯಾದರು? ” ಎಸ್‌ಸಿ ಬೋಸ್ ಭಾರತದ ಸ್ವಾತಂತ್ರ್ಯಕ್ಕಾಗಿ ಜಪಾನ್, ಜರ್ಮನಿಯೊಂದಿಗೆ ಹೋರಾಡಿದರುʼʼಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Kangana Ranaut : ನಾನು, ಶಾರುಖ್‌ ಈ ಯುಗದ ಕೊನೆಯ ಸೂಪರ್‌ಸ್ಟಾರ್‌ಗಳು ಎಂದ ಕಂಗನಾ!

ಸುಭಾಷ್ ಚಂದ್ರ ಬೋಸ್ ಅವರು 1945 ಅಗಸ್ಟ್ 18 ರಂದು ನಿಧನರಾದರು. ಭಾರತವು 1947ರ ಅಗಸ್ಟ್ 15ರಂದು ಸ್ವಾತಂತ್ರ್ಯ ಗಳಿಸಿತು. ಜವಾಹರಲಾಲ್ ನೆಹರು ಅವರನ್ನು ಭಾರತದ ಮೊದಲ ಪ್ರಧಾನ ಮಂತ್ರಿಯನ್ನಾಗಿ ಮಾಡಲಾಯಿತು.

ಇದೀಗ ಕಂಗನಾ ಅವರ ಈ ಮಾತಿಗೆ ಹಲವರು ನೆಗೆಟಿವ್‌ ಕಮೆಂಟ್‌ ಮಾಡಿದ್ದಾರೆ. ಎಕ್ಸ್‌ ಖಾತೆಯಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ. ʻʻಕಂಗನಾ ಪ್ರಕಾರ ಭಾರತಕ್ಕೆ 2014ರಲ್ಲಿ ಸ್ವಾತಂತ್ರ್ಯ ಸಿಕ್ಕಿತು.ನೇತಾಜಿ ಬೋಸ್ ಸ್ವತಂತ್ರ ಭಾರತದ ಮೊದಲ ಪ್ರಧಾನಿ. ಸರ್ದಾರ್ ಪಟೇಲ್ ಅವರಿಗೆ ಇಂಗ್ಲಿಷ್ ಗೊತ್ತಿಲ್ಲದ ಕಾರಣ ಪ್ರಧಾನಿಯಾಗಿಲ್ಲ. ಮುಂದಿನ 5 ವರ್ಷಗಳಲ್ಲಿ ಇಂತಹ ಹೆಚ್ಚಿನ ಜೋಕ್‌ಗಳಿಗಾಗಿ ʻಮಂಡಿʼಯ ಮತದಾರರು ಕಂಗನಾಗೆ ಮತ ಹಾಕಬೇಕುʼʼಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬರು “ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಂದು ಕಂಗನಾ ರಣಾವತ್ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. 2014ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿಜಿ ಎಂದು ನಮಗೆಲ್ಲರಿಗೂ ತಿಳಿದಿದೆ, ”ಎಂದು ಇನ್ನೊಬ್ಬರು ವ್ಯಂಗ್ಯ ಮಾಡಿದ್ದಾರೆ. ʻʻಕಂಗನಾ ಅವರು ಶಿಕ್ಷಣ ಸಚಿವರಾದರೆ, ಸುಭಾಷ್ ಚಂದ್ರ ಬೋಸ್ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಎಂದು ಹೇಳುವ ಮೂಲಕ ಇತಿಹಾಸವನ್ನು ಮರು ಸೃಷ್ಟಿಸುತ್ತಿದ್ದಾರೆʼʼ ಎನ್ನುವ ಮೂಲಕ ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

Exit mobile version