ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಆಗಾಗ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದರು. ಆದರೆ ಇದೀಗ ಅವರು ತಾವು ಧರಿಸಿದ ಉಡುಪೊಂದರಿಂದ ಸುದ್ದಿಯಾಗಿದ್ದಾರೆ. ಕಂಗನಾ ರಣಾವತ್ ಅವರ ಇತ್ತೀಚಿನ ಧರ್ಮಶಾಲಾ ಪ್ರವಾಸವು ಜನರ ಗಮನ ಸೆಳೆದಿದೆ. ಹಾಗೇ ಅವರು ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈಲಾಮಾ ಅವರನ್ನು ಭೇಟಿ ಮಾಡಿದ್ದಾರೆ. ಅವರು ರಾಜಕೀಯ ಆಕಾಂಕ್ಷೆಗಳ ನಡುವೆ ಆಧ್ಯಾತ್ಮಿಕತೆಯ ಕಡೆಗೆ ಗಮನ ಹರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ರಾಜಕೀಯ ಚಟುವಟಿಕೆಗಳ ನಡುವೆ ನಟಿ ಕಂಗನಾ ರಣಾವತ್ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಕೆಲವು ಪೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಮಂಡಿ ಕ್ಷೇತ್ರದ ಭರ್ಮೌರ್ ಗೆ ಭೇಟಿ ನೀಡಿರುವುದು ತಿಳಿದುಬಂದಿದೆ. ತಮ್ಮ ಪೋಸ್ಟ್ ನಲ್ಲಿ ಅವರು ಸ್ಥಳೀಯರೊಂದಿಗೆ ಸಂವಹನ ಮತ್ತು 7ನೇ ಶತಮಾನದಷ್ಟು ಹಿಂದಿನ ಪ್ರಸಿದ್ಧ ಚೌರಾಸಿ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಿರುವ ಬಗ್ಗೆ ವಿವರಿಸಿದ್ದಾರೆ. ಮತ್ತು ಪ್ರಾಚೀನ ಕಲಾಕೃತಿಗಳಿಗೆ ಸಾಕ್ಷಿಯಾದ ಮತ್ತು ಸಾವಿನ ನಂತರದ ಜೀವನದ ರಹಸ್ಯಗಳ ಬಗ್ಗೆ ಕಲಿಯುವ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಈ ವೇಳೆ ಅವರು ಚಂಬಾ ಗಡ್ಡಿ ಸಮುದಾಯದ ಸಾಂಪ್ರದಾಯಿಕ ಉಡುಪುನ್ನು ಧರಿಸಿದ್ದು, ಇದರಲ್ಲಿ ಉದ್ದನೆಯ ಕಸೂತಿ ಕುರ್ತಾ ಮತ್ತು ಸಡಿಲ ಪೈಜಾಮಾ ಮತ್ತು ಪ್ಯಾಟಿ ಟೋಪಿ ಇರುವುದಾಗಿ ಅವರು ಉಲ್ಲೇಖಿಸಿದ್ದಾರೆ.
Bharmour the land of God 🙏🙏@KanganaTeam #Himachal #Devbhoomi pic.twitter.com/xI34P9iwfB
— Pol khol (@polkholsab) April 17, 2024
ಮುಂಬರುವ ಲೋಕಸಭಾ ಚುನಾವಣೆಗೆ ನಟಿ ಕಂಗನಾ ಅವರು ಗಮನಾರ್ಹ ರಾಜಕೀಯ ಇತಿಹಾಸವನ್ನು ಹೊಂದಿರುವ ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸಲು ಆಯ್ಕೆ ಮಾಡಿರುವುದು ಕುತೂಹಲವನ್ನು ಹೆಚ್ಚಿಸುತ್ತಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಮಂಡಿಯಲ್ಲಿ ರಾಜಕೀಯ ರಂಗಕ್ಕೆ ಕಾಲಿಡುತ್ತಿದ್ದ ರಣಾವತ್ ಅವರಿಗೆ ಕಠಿಣ ಸವಾಲನ್ನು ಒಡ್ಡಿತ್ತು. ಈ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸುವ ಗುರಿ ಹೊಂದಿರುವ ಬಿಜೆಪಿ 2019ರಂತೆ ತನ್ನ ಯಶಸ್ಸನ್ನು ಪುನರಾವರ್ತಿಸುವ ಭರವಸೆಯಲ್ಲಿದೆ.
ಇದನ್ನೂ ಓದಿ:Malika Arora: ನೀನು ವರ್ಜಿನ್ನಾ? ಮಗನಿಗೆ ಬೋಲ್ಡ್ ಆಗಿ ಪ್ರಶ್ನಿಸಿದ ನಟಿ ಮಲೈಕಾ!
ನಟಿ ಕಂಗನಾ ರಣಾವತ್ ಅವರು ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಗಾಗಿ ಸಜ್ಜಾಗುತ್ತಿದ್ದಾರೆ. ಇದು ಅವರ ನಿರ್ದೇಶನಕ ಚೊಚ್ಚಲ ಚಿತ್ರವಾಗಿದೆ. ಹಾಗೇ ನಟಿ ಇತ್ತೀಚೆಗೆ ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟಿಸಲಾದ ರಾಮಮಂದಿರಕ್ಕೂ ಭೇಟಿ ನೀಡಿದ್ದಾರೆ. ಹಾಗೂ ದೀರ್ಘಕಾಲದಿಂದ ಕಾಯುತ್ತಿದ್ದ ಅನೇಕ ಸಮರ್ಪಿತ ವ್ಯಕ್ತಿಗಳ ಕನಸು ಇಂದು ನನಸಾಗಿದೆ ಎಂದು ಅವರು ತಿಳಿಸಿದ್ದಾರೆ.