ಬೆಂಗಳೂರು: 12th ಫೇಲ್’ ಸಿನಿಮಾ (12th Fail Movie) ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ವಿಧು ವಿನೋದ್ ಚೋಪ್ರಾ ನಿರ್ದೇಶನ ಮತ್ತು ವಿಕ್ರಾಂತ್ ಮೆಸ್ಸಿ ನಾಯಕನಾಗಿ ನಟಿಸಿರುವ ಚಿತ್ರ ಸುಮಾರು 70 ಕೋಟಿ ರೂಪಾಯಿ ಗಳಿಸಿತು. ನಂತರ ಒಟಿಟಿಯಲ್ಲೂ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. 12th ಫೇಲ್ ಚಿತ್ರ ಅನುರಾಗ್ ಪಾಠಕ್ ಅವರ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆತಡೆಗಳನ್ನು ದಾಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಜೀವನವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಆದರೀಗ ಕಂಗನಾ ಅವರು ವಿಧು ವಿನೋದ್ ಚೋಪ್ರಾ ಪತ್ನಿ ಅನುಪಮಾ ಚೋಪ್ರಾ ಮೇಲೆ ಗರಂ ಆಗಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ತಾವೇ ಸಿನಿಮಾವನ್ನು ಇಷ್ಟು ದಿನ ಹೊಗಳಿ ಈಗ ಏಕಾಏಕಿ ಅನುಪಮಾ ಚೋಪ್ರಾ ಬಗ್ಗೆ ನೆಗೆಟಿವ್ ಆಗಿ ಬರೆದುಕೊಂಡಿದ್ದಾರೆ.
12th ಫೇಲ್ ಸಿನಿಮಾವನ್ನು ನೇರವಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದು ಬೇಡ ಎಂದು ವಿಧು ವಿನೋದ್ ಚೋಪ್ರಾ ಅವರಿಗೆ ಅನುಪಮಾ ಚೋಪ್ರಾ ಸಲಹೆ ನೀಡಿದ್ದರು. ಈ ಚಿತ್ರವನ್ನು ಯಾರೂ ಕೂಡ ಥಿಯೇಟರ್ನಲ್ಲಿ ನೋಡುವುದಿಲ್ಲ ಎಂದು ಅವರು ಹೇಳಿದ್ದರು. ಹೆಂಡತಿಯ ಮಾತನ್ನು ನಿರ್ಲಕ್ಷಿಸಿ ವಿಧು ವಿನೋದ್ ಚೋಪ್ರಾ ಅವರು ‘12th ಫೇಲ್’ ಚಿತ್ರವನ್ನು ಥಿಯೇಟರ್ನಲ್ಲಿ ರಿಲೀಸ್ ಮಾಡಿದರು. ವಿಶ್ವಾದ್ಯಂತ ಈ ಸಿನಿಮಾ ಸುಮಾರು 70 ಕೋಟಿ ರೂಪಾಯಿ ಗಳಿಸಿತು. ಇದೀಗ ಈ ಕುರಿತು ಕಂಗನಾ ಅನುಪಮಾ ಚೋಪ್ರಾ ಬಗ್ಗೆ ಗರಂ ಆಗಿ ಬರೆದುಕೊಂಡಿದ್ದು ಕುತೂಹಲ ಮೂಡಿಸಿದೆ.
ʻʻವಿಧು ಸರ್ ಅವರ ಪತ್ನಿ ಅನುಪಮಾ ಚೋಪ್ರಾ ಅವರು ಸಿನಿಮಾ ಪತ್ರಕರ್ತೆಯಾಗಿ ಅಪಾಯಕಾರಿ. ಪ್ರತಿಭಾವಂತ, ಕಿರಿಯ ಮಹಿಳೆಯರನ್ನು ಕಂಡರೆ ಅವರಿಗೆ ಅಸೂಯೆ ಇದೆ. ತನ್ನ ಗಂಡನ ಬಗ್ಗೆಯೂ ಅವರಿಗೆ ಹೊಟ್ಟೆಕಿಚ್ಚು ಇದೆ ಎಂದರೆ ಆಶ್ಚರ್ಯವಿಲ್ಲ. ಗಂಡನ ಖ್ಯಾತಿಯಿಂದಲೇ ಅವರು ಹಣ ಗಳಿಸಿದ್ದಾರೆ. ಅದರಿಂದಲೇ ವೆಬ್ಸೈಟ್ ಮತ್ತು ಇತರೆ ಬಿಸ್ನೆಸ್ ನಡೆಸುತ್ತಿದ್ದಾರೆ. ನಿರ್ದೇಶಕನ ಪತ್ನಿ ಅಂತ ಹೇಳಿಕೊಂಡು ಬಾಲಿವುಡ್‌ನ ಪಾರ್ಟಿಗೆ ಬರುತ್ತಾರೆ. ನಿಜವಾದ ಪ್ರತಿಭಾವಂತರು ಮತ್ತು ಒಳ್ಳೆಯ ಸಿನಿಮಾಗಳ ವಿರುದ್ಧವಾಗಿ ಗಾಸಿಪ್ ಮಾಡುತ್ತಾರೆ’ ಎಂದು ಕಂಗನಾ ಅವರು ಎಕ್ಸ್‌ನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: Kangana Ranaut: ನಿಶಾಂತ್ ಪಿಟ್ಟಿ ಜತೆ ರಿಲೇಶನ್‌ಶಿಪ್‌ನಲ್ಲಿ ಇಲ್ಲ, ಬೇರೊಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದ ಕಂಗನಾ!
Vidhu sir’s wife @anupamachopra is a disgrace in the name of film journalist, she is not only xenophobic but also deeply jealous and insecure of younger and intelligent women, no wonder she is jealous of her own husband, on whose name and wealth she built her website and other… pic.twitter.com/u6SchlUehk
— Kangana Ranaut (@KanganaTeam) February 4, 2024
12th ಫೇಲ್ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಅಕ್ಟೋಬರ್ 27ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಚಿತ್ರದಲ್ಲಿ ಮನೋಜ್ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸೆ ನಟಿಸಿದ್ದಾರೆ ಮತ್ತು ಮೇಧಾ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ.
ಮೇಧಾ ಶಂಕರ್, ಅನಂತ್ ವಿ ಜೋಶಿ, ಅಂಶುಮಾನ್ ಪುಷ್ಕರ್ ಮತ್ತು ಪ್ರಿಯಾಂಶು ಚಟರ್ಜಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ವಾಣಿಜ್ಯಾತ್ಮಕವಾಗಿ, ವಿಮರ್ಶಾತ್ಮಕವಾಗಿ ಮೆಚ್ಚುಗೆಯನ್ನು ಪಡೆಯಿತು.
ʻಪರಿಂದಾ’, ‘1942 ಎ ಲವ್ ಸ್ಟೋರಿ’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸುವುದರ ಜತೆಗೆ ಮುನ್ನಾಭಾಯ್, ತಾರೇ ಜಮೀನ್ ಪರ್, 3 ಈಡಿಯೆಟ್ಸ್ ಸಿನಿಮಾಗಳನ್ನು ನೀಡಿದ ಬಾಲಿವುಡ್‌ನ ವಿಧು ವಿನೋದ್ ಚೋಪ್ರಾ ಅವರೊಂದಿಗೆ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಒಡೆತನದ ಕೆಆರ್‌ಜಿ ಸ್ಟುಡಿಯೋಸ್ ಕೈಜೋಡಿಸಿತ್ತು.