Site icon Vistara News

Kangana Ranaut: ಕಂಗನಾ ರಣಾವತ್ ಗೋಮಾಂಸ ತಿನ್ನೋದು ನಿಜಾನಾ?

Kangana Ranaut

ಬೆಂಗಳೂರು: ನಟಿ-ರಾಜಕಾರಣಿ ಕಂಗನಾ ರಣಾವತ್ (Kangana Ranaut) ತಮ್ಮ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಂಗನಾ (Kangana Ranaut eats beef) ಅವರು ಗೋಮಾಂಸ ತಿನ್ನುತ್ತಾರೆ ಎಂದು ಹಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಇದೀಗ ಕಂಗನಾ ʻಇದೊಂದು ನಾಚಿಕೆಗೇಡಿನ ಸಂಗತಿʼ ಎಂದು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಕಂಗನಾ ಎಕ್ಸ್‌ನಲ್ಲಿ ಬರೆದು ʻʻನಾನು ಗೋಮಾಂಸ ಅಥವಾ ಇತರ ಯಾವುದೇ ರೀತಿಯ ರೇಡ್‌ ಮೀಟ್‌ವನ್ನು ಸೇವಿಸುವುದಿಲ್ಲ. ನನ್ನ ಬಗ್ಗೆ ಆಧಾರರಹಿತ ವದಂತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ದಶಕಗಳಿಂದ ಯೋಗ ಮತ್ತು ಆಯುರ್ವೇದ ಜೀವನ ವಿಧಾನವನ್ನು ಫಾಲೋ ಮಾಡಿಕೊಂಡು ಬರುತ್ತಿದ್ದೇನೆ. ನನ್ನ ಜನರಿಗೆ ನಾನು ಹೇಗೆ ಎಂಬುದು ತಿಳಿದಿದೆ. ಮಾತ್ರವಲ್ಲ ನಾನು ನನ್ನನ್ನು ಹಿಂದೂ ಎಂದು ಹೆಮ್ಮೆಯಾಗಿ ಹೇಳಿಕೊಳ್ಳುತ್ತೇನೆ. ಜೈ ಶ್ರೀ ರಾಮ್ʼʼ ಎಂದು ಅವರು ಬರೆದುಕೊಂಡಿದ್ದಾರೆ.

ಈ ಬಾರಿ ಕಂಗನಾ ತನ್ನ ತವರು ಹಿಮಾಚಲ ಪ್ರದೇಶದ ʻಮಂಡಿʼ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ (Subhash Chandra Bose ) ಕಣಕ್ಕಿಳಿದಿದ್ದಾರೆ. ಬಿಜೆಪಿ ಸೇರಿದ ಬಳಿಕ ಅವರು ಟೈಮ್ಸ್ ನೌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾವನೆ ಮಾಡಿದ್ದಾರೆ.

ಇದನ್ನೂ ಓದಿ: BJP Candidates: ಬಿಜೆಪಿ 5ನೇ ಪಟ್ಟಿ; ಕಂಗನಾ ರಣಾವತ್‌, ಅರುಣ್‌ ಗೋವಿಲ್ ಸೇರಿ 111 ಮಂದಿಗೆ ಟಿಕೆಟ್

ಕಂಗನಾ ಟ್ವೀಟ್‌

ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್‌ ಅಂದಿದ್ದರು!

 ಸ್ವಾತಂತ್ರ್ಯ ಹೋರಾಟಗಾರ ಮತ್ತು ʻಆಜಾದ್ ಹಿಂದ್ ಫೌಜ್ʼ ನಾಯಕ ʻಸುಭಾಷ್ ಚಂದ್ರ ಬೋಸ್ʼ ಅವರು ಭಾರತದ ಮೊದಲ ಪ್ರಧಾನಿ ಎಂದು ಕಂಗನಾ ಉಲ್ಲೇಖಿಸಿದ್ದರು. ಹಾಗೇ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅಲ್ಲ ಎಂದು ನೇರವಾಗಿಯೇ ಹೇಳಿದ್ದರು. 2014ರಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಕಂಗನಾ ರಣಾವತ್‌ (Kangana Ranaut) ಈ ಮುಂಚೆ ಹೇಳಿಕೆ ನೀಡಿದ್ದರು.

ಕಂಗನಾ ಹೇಳಿದ್ದೇನು?

ಕಂಗನಾ ಸಂದರ್ಶನದಲ್ಲಿ ಮಾತನಾಡಿ ʻʻನಾವು ಸ್ವಾತಂತ್ರ್ಯ ಪಡೆದಾಗ ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್ ಎಲ್ಲಿಗೆ ಹೋಗಿದ್ದರು? ಎಂದು ಕೇಳಿದ್ದರು. ಬೋಸ್ ಭಾರತದ ಪ್ರಧಾನಿ ಅಲ್ಲ ಎಂದು ಅಲ್ಲಿ ಕಂಗನಾಗೆ ನೆನಪಿಸಿದಾಗ, ಕಂಗನಾ ಹೇಳಿದ್ದು ತಮ್ಮ ಹೇಳಿಕೆಯ ಹಿಂದೆ ಸೂಕ್ಷ್ಮತೆ ಎಂದು ಸೂಚ್ಯವಾಗಿ ಹೇಳಿದ್ದರು.

Exit mobile version