Site icon Vistara News

Karan Johar: ಬರ್ತ್‌ಡೇ ದಿನ ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕರಣ್ ಜೋಹರ್!

Karan Johar announces new film on birthday

ಬೆಂಗಳೂರು: ಇಂದು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar ) ಅವರಿಗೆ 52ನೇ ಹುಟ್ಟುಹಬ್ಬದ ಸಂಭ್ರಮ. ಕರಣ್ ಜೋಹರ್ ಅವರು ಚಲನಚಿತ್ರ ನಿರ್ಮಾಪಕರಾದ ಯಶ್ ಜೋಹರ್ ಮತ್ತು ಹಿರೂ ಜೋಹರ್ ದಂಪತಿಯ ಪುತ್ರ. ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಿದ್ದರು. ʻಕಭಿ ಖುಷಿ ಕಭಿ ಗಮ್’, ‘ಕಭಿ ಅಲ್ವಿದಾ ನಾ ಕೆಹೆನಾ’, ‘ಮೈ ನೇಮ್ ಇಸ್ ಖಾನ್’, ‘ಸ್ಟೂಡೆಂಟ್ ಆಫ್ ದಿ ಇಯರ್’ ಹೀಗೆ ಅನೇಕ ಹಿಟ್‌ ಸಿನಿಮಾವನ್ನು ಕರಣ್‌ ನಿರ್ದೇಶಿಸಿದ್ದಾರೆ. ಇದೀಗ ಈ ವಿಶೇಷ ದಿನದಂದು ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಆದರೆ ಟೈಟಲ್‌ ಇನ್ನೂ ಘೋಷಣೆ ಮಾಡಿಲ್ಲ.

ʻʻಗೆಟ್‌ ಸೆಟ್‌ ಗೋ, ಅನ್‌ಟೈಟಲ್‌ ನರೇಷನ್‌ ಡ್ರಾಪ್ಟ್‌ , ಕರಣ್ ಜೋಹರ್ ಡೈರೆಕ್ಷನ್‌ʼʼ ಎಂದು ಬರೆದು ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ. ಕರಣ್‌ ಹೊಸ ಪ್ರಾಜೆಕ್ಟ್‌ ಘೋಷಿಸುತ್ತಿದ್ದಂತೆ, ಆಯೇಶ್ ಶ್ರಾಫ್ ಕಮೆಂಟ್‌ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಲವರು ಶಾರುಖ್ ಖಾನ್ ಮತ್ತು ಕಾಜೋಲ್ ಅವರನ್ನು ಮತ್ತೆ ಒಟ್ಟಿಗೆ ತೆರೆಯ ಮೇಲೆ ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಆಡ್ವಾಣಿಯನ್ನು ಒಟ್ಟಿಗೆ ತೆರೆ ಮೇಲೆ ತನ್ನಿ ಎಂದು ಮನವಿ ಕೂಡ ಮಾಡಿದ್ದಾರೆ.

ನಿನ್ನೆಯಷ್ಟೇ , ಕರಣ್ ಅವರು ಮುಂಬೈನಲ್ಲಿ ಬರ್ತ್‌ಡೇ ಪಾರ್ಟಿ ಆಯೋಜಿಸಿದ್ದರು. ಕಾಜೋಲ್, ಅನಿಲ್ ಕಪೂರ್, ಫರಾ ಖಾನ್ ಮತ್ತು ಇತರರು ಭಾಗಿಯಾಗಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: Karan Johar: ‘ಕಳಪೆ’ ಮಿಮಿಕ್ರಿ ಕಂಡು ಕರಣ್ ಜೋಹರ್ ಗರಂ; ಕ್ಷಮೆಯಾಚಿಸಿದ ಹಾಸ್ಯನಟ!

ಕರಣ್‌ ಫ್ಯಾನ್ಸ್‌ ಸೇರಿದಂತೆ ಬಾಲಿವುಡ್‌ ಸೆಲೆಬ್ರಿಟಿಗಳು ಸೋಷಿಯಕಲ್‌ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ. ಕರೀನಾ ಕಪೂರ್ ಖಾನ್ ಅವರು ಕರಣ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಮಲೈಕಾ ಅರೋರಾ ಕೂಡ ʻʻ ಹ್ಯಾಪಿ ಡೇ ಯೂ ಸೆಕ್ಸಿ ಬಾಯ್‌..ʼʼ ಎಂದು ವಿಶ್‌ ಮಾಡಿದ್ದಾರೆ.

ಕರಣ್‌ ಕೊನೆಯದಾಗಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾ ನಿರ್ದೇಶಿಸಿದ್ದರು. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಕಮರ್ಷಿಯಲ್ ಹಿಟ್ ಆಗಿತ್ತು. ಪ್ರಸ್ತುತ ಅವರು ಹಲವಾರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮತ್ತೊಂದೆಡೆ, ಕರಣ್ ಜೋಹರ್ ಅವರ ಸಲ್ಮಾನ್ ಖಾನ್ ಅವರ ‘ದಿ ಬುಲ್’ ಶೀರ್ಷಿಕೆಯ ಚಿತ್ರ ಸೆಟ್ಟೇರಲು ಸಜ್ಜಾಗಿದೆ.

Exit mobile version