Site icon Vistara News

Kareena Kapoor: ಕರೀನಾ ಕೈಯಲ್ಲಿದೆಯಂತೆ ಸೌತ್‌ ಸಿನಿಮಾ ಬಿಗ್‌ ಪ್ರಾಜೆಕ್ಟ್‌!

Kareena Kapoor just confirm her south Indian film

ಬೆಂಗಳೂರು: ನಟಿ ಕರೀನಾ ಕಪೂರ್ (Kareena Kapoor) ಅವರು ಬಹು ದೊಡ್ಡ ಸೌತ್‌ ಸಿನಿಮಾ ಪ್ರಾಜೆಕ್ಟ್‌ನಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಅದು ಯಶ್‌ `ಟಾಕ್ಸಿಕ್; ಸಿನಿಮಾ ಆಗಿರಬಹುದೇ ಎಂದು ಯಶ್‌ ಫ್ಯಾನ್ಸ್‌ ಊಹಿಸಿದ್ದಾರೆ. ಕರೀನಾ ಈ ಬಗ್ಗೆ ಮಾತನಾಡಿರುವ ವಿಡಿಯೊವೊಂದು ವೈರಲ್‌ ಆಗಿದೆ.

ಅಭಿಮಾನಿಗಳೊಂದಿಗೆ ಕರೀನಾ ಜೂಮ್ ಮೀಟಿಂಗ್‌ನಲ್ಲಿ ಮಾತನಾಡಿʻʻನಾನು ಬಹು ದೊಡ್ಡ ಸೌತ್‌ ಸಿನಿಮಾ ಮಾಡುತ್ತಿರಬಹುದು. ಈಗ ಅದು ಇಡೀ ಪ್ಯಾನ್-ಇಂಡಿಯಾ ಸಿನಿಮಾ ಆಗಿದೆ. ಹಾಗಾಗಿ ನಾನು ಎಲ್ಲಿ ಶೂಟಿಂಗ್ ಮಾಡಲಿದ್ದೇನೆ ಎಂದು ನನಗೆ ತಿಳಿದಿಲ್ಲ. ಆದರೆ ಸೌತ್‌ ಸಿನಿಮಾದಲ್ಲಿ ಇರುತ್ತಿರುವುದು ನಾನು ಮೊದಲ ಬಾರಿಗೆʼʼಎಂದು ಹೇಳಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗುತ್ತದ್ದಂತೆ ಕರೀನಾ ಅವರು ಯಶ್‌ ಸಿನಿಮಾದ ಭಾಗವಾಗಲಿದ್ದಾರೆ ಎಂದು ಕಮೆಂಟ್‌ ಮೂಲಕ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ ಫ್ಯಾನ್ಸ್‌.

ಮಲಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ʼಟಾಕ್ಸಿಕ್‌ʼ ಚಿತ್ರದಲ್ಲಿ ಟಾಲಿವುಡ್‌ನ ಸಾಯಿ ಪಲ್ಲವಿ ನಾಯಕಿಯಾಗಿ ಅಭಿನಯಿಸುತ್ತಾರೆ. ಜತೆಗೆ ಮಲೆಯಾಳಂ ನಟಿ ಸಂಯುಕ್ತಾ ಮೆನನ್‌ ಮತ್ತೊಬ್ಬ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಮಾತ್ರವಲ್ಲ ಬಹುಭಾಷಾ ನಟಿ ರಾಶಿ ಖನ್ನಾ ಅವರ ಹೆಸರೂ ಕೇಳಿ ಬಂದಿದೆ. ಇದರ ಜತೆಗೆ ಮಲಯಾಳಂ ನಟ ಟೊವಿನೋ ಥಾಮಸ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಬರೋಬ್ಬರಿ 170 ಕೋಟಿ ರೂಪಾಯಿ ಬಜೆಟ್‌ನ ಈ ಯಶ್‌ ಚಿತ್ರ ಡ್ರಗ್‌ ಮಾಫಿಯಾ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ಮೂಲಗಳು ತಿಳಿಸಿದ್ದು, ಪ್ರಮುಖ ಪಾತ್ರದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ವಿಚಾರವನ್ನು ಚಿತ್ರತಂಡ ಇದುವರೆಗೆ ಬಹಿರಂಗಪಡಿಸಿಲ್ಲ. 2025ರಲ್ಲಿ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ.

ಇದನ್ನೂ ಓದಿ: Mission Divyastra: ʼದಿವ್ಯಾಸ್ತ್ರʼಕ್ಕೆ ಜೀವ ತುಂಬಿದ ʼದಿವ್ಯ ಪುತ್ರಿ! ಯಾರಿವರು?

So I think Kareena’s film with Yash is confirmed! She said this on a zoom meeting with her fans yesterday.
byu/Adorable_Name_1565 inBollyBlindsNGossip

ಕಥೆಗೆ ಬಹು ಮುಖ್ಯ ತಿರುವು ನೀಡುವ ಪಾತ್ರದಲ್ಲಿ ಕರೀನಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೂ ಯಶ್‌ ಬಾಲಿವುಡ್‌ ಕಲಾವಿದರ ಜತೆ ತೆರೆ ಹಂಚಿಕೊಂಡಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶನದ ʼಕೆಜಿಎಫ್‌ 2ʼ ಚಿತ್ರದಲ್ಲಿ ಬಾಲಿವುಡ್‌ ತಾರೆಯರಾದ ಸಂಜಯ್‌ ದತ್‌ ಮತ್ತು ರವೀನಾ ಟಂಡನ್‌ ಕಾಣಿಸಿಕೊಂಡಿದ್ದರು. ಯಶ್‌ ಜತೆ ಇವರ ಪಾತ್ರಗಳೂ ಮೆಚ್ಚುಗೆ ಪಡೆದಿದ್ದವು. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ʼಟಾಕ್ಸಿಕ್‌ʼ ಚಿತ್ರವನ್ನು ನಿರ್ಮಿಸಲಿದ್ದಾರೆ.

Exit mobile version