Site icon Vistara News

Saif Ali Khan: ಈದ್ ಆಚರಿಸಿದ ಸೈಫ್ ಅಲಿ ಖಾನ್-ಕರೀನಾ: ಕಿರಿಯ ಮಗ ಮಿಸ್ಸಿಂಗ್‌!

Kareena Kapoor

ಬೆಂಗಳೂರು: ಬಾಲಿವುಡ್‌ನ ಕ್ಯೂಟ್‌ ಜೋಡಿ ಎಂದೇ ಖ್ಯಾತಿ ಪಡೆದ ಸೈಫ್ ಅಲಿ ಖಾನ್ (Saif Ali Khan) ಮತ್ತು ಕರೀನಾ ಕಪೂರ್ ಖಾನ್ (Kareena Kapoor) ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಕುಟುಂಬದೊಂದಿಗೆ ಈದ್‌ ಆಚರಣೆ (Eid celebration) ಮಾಡಿಕೊಂಡಿದೆ. ಸೈಫ್ ಅವರ ಸಹೋದರಿ ಸಬಾ ಪಟೌಡಿ (Saba Pataudi) ತಮ್ಮ ಈದ್ ಹಬ್ಬದ ಫೋಟೋಗಳನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತೈಮೂರ್ ಕುಟುಂಬದೊಂದಿಗೆ ಮಾತ್ರ ಪೋಸ್ ನೀಡಿದ್ದಾನೆ. ತಮ್ಮ ಜೆಹ್ ಅಲಿ ಖಾನ್, ಹಾಗೆಯೇ ಸೈಫ್ ಅವರ ಮಕ್ಕಳು – ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್‌ ಗೈರಾಗಿದ್ದರು.

ಸೈಫ್‌ ಹಾಗೂ ಕರೀನಾ ಅವರು ಕುಟುಂಬದ ಜತೆ ಈದ್ ಕೂಟವನ್ನು ಏರ್ಪಡಿಸಿದ್ದರು. ಹಸಿರು ಮತ್ತು ಗುಲಾಬಿ ಬಣ್ಣದ ಕುರ್ತಾ ಪೈಜಾಮಾ ಸೆಟ್‌ನಲ್ಲಿ ಕರೀನಾ ಕಂಡು ಬಂದರೆ, ಸೈಫ್ ಬಿಳಿ ಪೈಜಾಮಾದೊಂದಿಗೆ ನೀಲಿ ಕುರ್ತಾದಲ್ಲಿ ಕಂಡು ಬಂದರು. ತೈಮೂರ್ ತನ್ನ ತಂದೆಯೊಂದಿಗೆ ಹೊಂದಿಕೆಯಾಗುವ ನೀಲಿ ಕುರ್ತಾ ಮತ್ತು ಪೈಜಾಮ ಧರಿಸಿದ್ದರು.

“ಈದ್ ಮುಬಾರಕ್!! ಕುಟುಂಬ ಯಾವಾಗಲೂ ಮುಖ್ಯ! ಸುಂದರ ಕ್ಷಣಗಳು…ಮಿಸ್ಸಿಂಗ್‌ ಜೆಹ್ಜಾನ್ ಇನ್ನಿ ಮತ್ತು ಕುನಾಲ್ . ಕುಟುಂಬದೊಂದಿಗೆ ಈದ್ ವಿಶೇಷವಾಗಿದೆ! ಎಂದು ಸೈಫ್ ಅವರ ಸಹೋದರಿ ಸಬಾ ಪಟೌಡಿ ಫೋಟೊ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Crew Box Office Day 2: ಕಲೆಕ್ಷನ್‌ನಲ್ಲಿ ಮುನ್ನುಗ್ಗುತ್ತಿದೆ ಕರೀನಾ, ಕೃತಿ, ಟಬು ಅಭಿನಯದ ʻಕ್ರ್ಯೂʼ ಸಿನಿಮಾ!

ಸಿನಿಮಾ ವಿಚಾರಕ್ಕೆ ಬಂದರೆ ಕರೀನಾ ಇತ್ತೀಚಿಗೆ ಬಿಡುಗಡೆಯಾದ ʻಕ್ರ್ಯೂʼ ಸಿನಿಮಾ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಚಿತ್ರ ಟಬು ಮತ್ತು ಕೃತಿ ಸನೂನ್‌ ಸಹ ಮುಖ್ಯ ಪಾತ್ರದಲ್ಲಿ ಇದ್ದಾರೆ. ಬಿಡುಗಡೆಯಾದ 14 ದಿನಗಳಲ್ಲಿ ಚಿತ್ರ 64.67 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

ಕಪಿಲ್ ಶರ್ಮಾ ಹಾಗೂ ದಿಲ್ಜಿತ್ ದೋಸಾಂಜ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಏಕ್ತಾ ಕಪೂರ್, ರಿಯಾ ಕಪೂರ್, ಅನಿಲ್ ಕಪೂರ್ ಮತ್ತು ದಿಗ್ವಿಜಯ್ ಪುರೋಹಿತ್ ಅವರು ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಅನಿಲ್ ಕಪೂರ್ ಫಿಲ್ಮ್ಸ್ ಮತ್ತು ಕಮ್ಯುನಿಕೇಷನ್ ನೆಟ್‌ವರ್ಕ್ ಅಡಿಯಲ್ಲಿ ಜಂಟಿಯಾಗಿ ಕ್ರ್ಯೂ ಚಿತ್ರವನ್ನು ನಿರ್ಮಿಸಲಾಗಿದೆ. ಮೊದಲ ಬಾರಿಗೆ ಕರೀನಾ ಕಪೂರ್ ಖಾನ್, ಟಬು ಮತ್ತು ಕೃತಿ ಸನೂನ್ ಪರದೆಯನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಗಗನಸಖಿಯರ ಪಾತ್ರವನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: Sachin Tendulkar: ಕೀನ್ಯಾದ ಕಾಡಿನಲ್ಲಿ ಸಚಿನ್​ಗೆ ಬಿಲ್ಲು-ಬಾಣಗಳಿಂದ ಗಾರ್ಡ್​ ಆಫ್​ ಹಾನರ್​

ಕರೀನಾ ಕೈಯಲ್ಲಿದೆ ಸೌತ್‌ ಸಿನಿಮಾ ಬಿಗ್‌ ಪ್ರಾಜೆಕ್ಟ್‌!

ಯಶ್‌ ಸಿನಿಮಾ ʼಟಾಕ್ಸಿಕ್‌ʼನಲ್ಲಿ ಕಥೆಗೆ ಬಹು ಮುಖ್ಯ ತಿರುವು ನೀಡುವ ಪಾತ್ರದಲ್ಲಿ ಕರೀನಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೂ ಯಶ್‌ ಬಾಲಿವುಡ್‌ ಕಲಾವಿದರ ಜತೆ ತೆರೆ ಹಂಚಿಕೊಂಡಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶನದ ʼಕೆಜಿಎಫ್‌ 2ʼ ಚಿತ್ರದಲ್ಲಿ ಬಾಲಿವುಡ್‌ ತಾರೆಯರಾದ ಸಂಜಯ್‌ ದತ್‌ ಮತ್ತು ರವೀನಾ ಟಂಡನ್‌ ಕಾಣಿಸಿಕೊಂಡಿದ್ದರು. ಯಶ್‌ ಜತೆ ಇವರ ಪಾತ್ರಗಳೂ ಮೆಚ್ಚುಗೆ ಪಡೆದಿದ್ದವು. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ʼಟಾಕ್ಸಿಕ್‌ʼ ಚಿತ್ರವನ್ನು ನಿರ್ಮಿಸಲಿದ್ದಾರೆ.

Exit mobile version