ಬೆಂಗಳೂರು: ಕರೀನಾ ಕಪೂರ್ (Kareena Kapoor) ಮತ್ತು ಸೈಫ್ ಅಲಿ ಖಾನ್ ತಮ್ಮ ಮುಂಬೈ ನಿವಾಸದ ಹೊರಗೆ ಒಬ್ಬರಿಗೊಬ್ಬರು ಚುಂಬಿಸಿಕೊಂಡಿದ್ದಾರೆ. ಪಾಪರಾಜಿಗಳ ಮುಂದೆಯೇ ಕಿಸ್ ಕೊಟ್ಟುಕೊಂಡಿದ್ದಾರೆ. ಇದೀಗ ಈ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ವೈರಲ್ ಆದ ವಿಡಿಯೊಗಳಲ್ಲಿ ದಂಪತಿ ತಮ್ಮ ಕಾರುಗಳ ಕಡೆಗೆ ಸಾಗುತ್ತಿರುವಾಗ ಒಬ್ಬರಿಗೊಬ್ಬರು ಮಾತು ಕತೆ ನಡೆಸಿದ್ದಾರೆ. ಈ ವೇಳೆ ಕರೀನಾ ಅವರು ಪತಿ ಸೈಫ್‌ಗೆ ಮೊದಲು ಮುತ್ತು ಕೊಟ್ಟರು. ಆ ಬಳಿಕ ಸೈಫ್ ಕೂಡ ಕರೀನಾಗೆ ಕಿಸ್ ಕೊಟ್ಟಿದ್ದಾರೆ. ಕರೀನಾ ನೀಲಿ ಬಣ್ಣದ ಡೆನಿಮ್‌ಗಳೊಂದಿಗೆ ಬಿಳಿ ಕುರ್ತಾವನ್ನು ಧರಿಸಿದ್ದರು. ಸೈಫ್ ಬಿಳಿ ಕುರ್ತಾದಲ್ಲಿ ಮ್ಯಾಚಿಂಗ್ ಪೈಜಾಮಾದೊಂದಿಗೆ ಕಾಣುತ್ತಿದ್ದರು.
ಇದೀಗ ಫ್ಯಾನ್ಸ್ ಕಮೆಂಟ್ ಮೂಲಕ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಈ ವಿಡಿಯೊಗೆ ಹಲವರು ʻಕ್ಯೂಟ್ʼಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ʻʻಮೊದಲ ಬಾರಿ ಭೇಟಿಯಾದಂತೆ ಕಾಣುತ್ತೀರಿ. ಸದಾ ಹೀಗೆ ನಗುತ್ತ ಇರಿʼʼಎಂದು ಕಮೆಂಟ್ ಮಾಡಿದ್ದಾರೆ.
ಕರೀನಾ ಮತ್ತು ಸೈಫ್ 2012ರಲ್ಲಿ ವಿವಾಹವಾದರು. ಅದಕ್ಕೂ ಮುಂಚೆ ಸೈಫ್ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. 2004ರಲ್ಲಿ ವಿಚ್ಛೇದನ ಪಡೆದುಕೊಂಡರು. ಸೈಫ್ ಮತ್ತು ಅಮೃತಾ ಅವರಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸೈಫ್ ಮತ್ತು ಕರೀನಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ .
ಇದನ್ನೂ ಓದಿ: Kareena Kapoor: ʻಯುನಿಸೆಫ್ ಇಂಡಿಯಾʼಗೆ ರಾಯಭಾರಿಯಾದ ಕರೀನಾ ಕಪೂರ್
ಸಿನಿಮಾ ವಿಚಾರಕ್ಕೆ ಬಂದರೆ ಕರೀನಾ ಕಪೂರ್ ಕೊನೆಯದಾಗಿ ʻಕ್ರ್ಯೂʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ರೋಹಿತ್ ಶೆಟ್ಟಿಯವರ ‘ಸಿಂಗಮ್ ಅಗೇನ್’ ಮತ್ತು ಹನ್ಸಲ್ ಮೆಹ್ತಾ ಅವರ ‘ದಿ ಬಕಿಂಗ್ಹ್ಯಾಮ್ ಮರ್ಡರ್ಸ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಸೈಫ್ ಅಲಿ ಖಾನ್ ಅವರು ಜ್ಯೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಅವರೊಂದಿಗೆ ‘ದೇವರ’ ತೆಲುಗು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದೇವರ’ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್‌ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್‌ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ.
ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಇದೆ. ಅಪ್ಪ-ಮಗ ಎರಡೂ ಪಾತ್ರದಲ್ಲಿ ಇವರೇ ಅಭಿನಯ ಮಾಡಲಿದ್ದಾರಂತೆ. ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರದಂತೆ ಕಾಣಿಸುತ್ತಿದೆ. ಯುವಸುಧಾ ಆರ್ಟ್ಸ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಆರ್ಟ್ಸ್ ಈ ಚಿತ್ರವನ್ನು ನಿರ್ಮಿಸಿದ್ದು, ನಂದಮೂರಿ ಕಲ್ಯಾಣ್ ರಾಮ್ ಅವರು ಪ್ರಸ್ತುತಪಡಿಸಿದ್ದಾರೆ.