ಬೆಂಗಳೂರು: ಅಂಬಾನಿ ಮದುವೆಯಲ್ಲಿ ಕತ್ರಿನಾ (Katrina Kaif) ಹಾಗೂ ವಿಕ್ಕಿ ಕೌಶಲ್ (Vicky Kaushal) ಭಾಗಿಯಾಗಿದ್ದರು. ರೆಡ್ ಸೀರೆಯಲ್ಲಿ ಕತ್ರಿನಾ ಮಿಂಚಿದ್ದರು. ಕತ್ರಿನಾ ಕೈಫ್ ಗರ್ಭಿಣಿ ಎಂಬ ವದಂತಿಗಳು ಹಬ್ಬಿತ್ತು. ಕೊನೆಗೂ ವಿಕ್ಕಿ ಕೌಶಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟ, ನವದೆಹಲಿಯಲ್ಲಿ ತನ್ನ ಮುಂಬರುವ ಚಲನಚಿತ್ರ ಬ್ಯಾಡ್ ನ್ಯೂಜ್‌ನ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ಕತ್ರಿನಾ ಗರ್ಭಿಣಿಯಾಗಿಲ್ಲ ಎಂದು ದೃಢಪಡಿಸಿದರು. ಒಂದು ವೇಳೆ ನಟಿ ಪ್ರಗ್ನೆಂಟ್ ಆದರೆ ಆ ಒಳ್ಳೆಯ ಸುದ್ದಿಯನ್ನು ಶೇರ್ ಮಾಡಿಕೊಳ್ಳುತ್ತೇನೆ ಎಂದರು.
ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಲಂಡನ್‌ನಲ್ಲಿ ವಕೇಶನ್ ಮೂಡ್‌ನಲ್ಲಿದ್ದರು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಲಂಡನ್‌ನಲ್ಲಿ ಓಡಾಡುತ್ತಿರುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಶೇಷ ಅಂದರೆ ಕತ್ರಿನಾ ಪ್ರಗ್ನೆಂಟ್ ಅಂತೆ ಕಂಡಿದ್ದರು. ಕತ್ರಿನಾ ಕೈಫ್ ಅವರು ಕಪ್ಪು ಬಣ್ಣದ ಬ್ಲೇಜರ್ ಹಾಕಿದ್ದರು. ಅವರ ಹೊಟ್ಟೆ ಉಬ್ಬಿದಂತೆ ಕಾಣಿಸಿತ್ತು. ಅವರ ಅಭಿಮಾನಿಗಳಿಗೆ! ಇದರಿಂದ ಅನೇಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು
ʻಜೀ ಲೆ ಜರಾ’ ಚಿತ್ರದ ಶೂಟಿಂಗ್ ಮುಗಿದ ನಂತರ ನಾನು ಮತ್ತು ವಿಕ್ಕಿ ಮೊದಲ ಮಗುವನ್ನು ಹೊಂದಲಿದ್ದೇವೆʼ ಎಂದು ಕತ್ರಿನಾ ತನ್ನ ಸ್ನೇಹಿತರಿಗೆ ಹೇಳಿರುವುದಾಗಿ ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು. “ನಾನು ವಿಜಯ್ ಸೇತುಪತಿ ಮತ್ತು ಫರ್ಹಾನ್ ಅಖ್ತರ್ ಅವರೊಂದಿಗೆ ಮಾಡುತ್ತಿರುವ ಚಿತ್ರಗಳ ಶೂಟಿಂಗ್ ಮುಗಿಸಿದ ನಂತರವೇ ಮಗುವನ್ನು ಯೋಜಿಸುತ್ತೇನೆ” ಎಂದು ಕತ್ರಿನಾ ತಮ್ಮ ಸ್ನೇಹಿತರಿಗೆ ಹೇಳಿದ್ದರಂತೆ.
ಇದನ್ನೂ ಓದಿ: Katrina Kaif: ಕೊರಗಜ್ಜನ ಕ್ಷೇತ್ರದಲ್ಲಿ ಕತ್ರಿನಾ ಕೈಫ್; ದೈವದ ಬಳಿ ನಟಿ ಬೇಡಿಕೊಂಡಿದ್ದೇನು?
ವಿಕ್ಕಿ ಕೌಶಲ್ (Vicky Kaushal) ತಮ್ಮ ಮುಂದಿನ ಚಿತ್ರ `ಛಾವಾ’ದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿಯ ಪ್ರಕಾರ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ನಿಭಾಯಿಸಲಿದ್ದಾರೆ. “ಚಿತ್ರವು ಪ್ರಾಥಮಿಕವಾಗಿ ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದ್ದರೂ, ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ನಿರ್ವಹಿಸುತ್ತಿದ್ದರು ಎನ್ನುವುದು ವಿಶೇಷ. ಈ ವಿಚಾರ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಲಿದೆ.