Site icon Vistara News

Kattappa To Turn Modi: ಮೋದಿ ಪಾತ್ರದಲ್ಲಿ `ಬಾಹುಬಲಿ’ ಕಟ್ಟಪ್ಪ!

Kattappa To Turn Modi Sathyaraj To Play Biopic On Prime Minister

ಬೆಂಗಳೂರು: ಬ್ಲಾಕ್‌ಬಸ್ಟರ್ `ಬಾಹುಬಲಿ’ ಸಿನಿಮಾದಲ್ಲಿ ಕಟ್ಟಪ್ಪ (Kattappa To Turn Modi) ಪಾತ್ರಕ್ಕೆ ಹೆಸರುವಾಸಿಯಾದ ಹಿರಿಯ ನಟ ಸತ್ಯರಾಜ್ (Veteran actor Sathyaraj) ಅವರು ಪ್ರಧಾನಿ ನರೇಂದ್ರ ಮೋದಿ (Biopic On Prime Minister) ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಪಾತ್ರವನ್ನು ಸಿನಿಮಾ ತಜ್ಞ ರಮೇಶ್ ಬಾಲಾ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿಯವರ ಜೀವನ ತೆರೆ ಮೇಲೆ ಬಂದಿರುವುದು ಇದೇನು ಮೊದಲಲ್ಲ. 2019 ರಲ್ಲಿ, ನಟ ವಿವೇಕ್ ಒಬೆರಾಯ್, ಓಮಂಗ್ ಕುಮಾರ್ ನಿರ್ದೇಶಿಸಿದ ಜೀವನಚರಿತ್ರೆಯ ಚಿತ್ರದಲ್ಲಿ ಕಂಡು ಬಂದಿದ್ದರು. ಇದಲ್ಲದೆ, ಮಹೇಶ್ ಠಾಕೂರ್, ಲಾಲ್ಜಿ ಡಿಯೋರಿಯಾ, ರಜಿತ್ ಕಪೂರ್ ಮತ್ತು ಕೆಕೆ ಶುಕ್ಲಾ ಅವರಂತಹ ಇತರ ನಟರು ಮೋದಿ ಕುರಿತು ಸಿನಿಮಾ ಮಾಡಿದ್ದಾರೆ. ಮೋದಿ ಪಾತ್ರದಲ್ಲಿ ಸತ್ಯರಾಜ್​ ಕಾಣಿಸಿಕೊಳ್ಳಲಿದ್ದಾರೆ ಎಂಬುದು ದಕ್ಷಿಣ ಭಾರತದ ಹಿರಿಯ ನಟನ ಬಗ್ಗೆ ಹೆಚ್ಚುತ್ತಿರುವ ಜನಪ್ರಿಯತೆಯನ್ನೂ ತೋರಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದರು. ಆ ಬಳಿಕ ಕೆಲವು ಚಿತ್ರ ನಿರ್ಮಾಪಕರು ಅವರ ಜೀವನಗಾಥೆಯ ಬಗ್ಗೆ ಆಸಕ್ತಿಯನ್ನು ತಳೆದರು. ನಿರ್ದೇಶಕ ಓಮುಂಗ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ‘ಪಿಎಂ ನರೇಂದ್ರ ಮೋದಿ(PM Narendra Modi)’ ಸಿನಿಮಾವನ್ನು ಪ್ರಕಟಿಸಿದರು ಮತ್ತು 2019ರಲ್ಲಿ ಈ ಸಿನಿಮಾ ಬಿಡುಗಡೆಯಾಯಿತು. ಪ್ರಧಾನಿ ನೇರಂದ್ರ ಮೋದಿ ಅವರ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಅವರು ನಟಿಸಿದ್ದಾರೆ. ವಿವೇಕ್ ತಂದೆ ಸುರೇಶ್ ಒಬೆರಾಯ್ ಅವರು ಚಿತ್ರದ ನಿರ್ಮಾಪಕರ ಪೈಕಿ ಒಬ್ಬರು.

ಇದನ್ನೂ ಓದಿ: Actor Sathyaraj: `ಬಾಹುಬಲಿ’ ಕಟ್ಟಪ್ಪನ ತೊಡೆ ಮೇಲೆ ಕುಳಿತ ಈ ಕ್ಯೂಟ್‌ ನಟ ಯಾರು? ಹೇಳಿ ನೋಡೋಣ!

ಭಾರೀ ವಿವಾದವಾಗಿತ್ತು

2019ರ ಏಪ್ರಿಲ್- ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಿಗದಿಯಾಗಿತ್ತು. ಚುನಾವಣೆಯ ಕಾವು ಜೋರಾಗಿತ್ತು. ಇದೇ ಸಂದರ್ಭದಲ್ಲಿ ನಿರ್ಮಾಪಕರು ಪಿಎಂ ನರೇಂದ್ರ ಮೋದಿ ಸಿನಿಮಾ ಬಿಡುಗಡೆಗೆ ಮುಂದಾದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಮಧ್ಯೆ ಒಣ ರಗಳೆಗೂ ಕಾರಣವಾಯಿತು. ಪಿಎಂ ನರೇಂದ್ರ ಮೋದಿ ಸಿನಿಮಾ ಮತದಾರರಿಗೆ ಆಮಿಷ ಒಡ್ಡಬಹುದು ಎಂಬ ಆರೋಪ ಕೇಳಿ ಬಂತು. ಹಾಗಾಗಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಸಿನಿಮಾಗೆ ಬಿಡುಗಡೆಯ ಭಾಗ್ಯ ಸಿಗಲಿಲ್ಲ. ಫಲಿತಾಂಶ ಪ್ರಕಟವಾದ ಮಾರನೇ ದಿನ ಅಂದರೆ 2019 ಮೇ 24ರಂದು ಸಿನಿಮಾ ಬಿಡುಗಡೆಯಾಯಿತು.

ಬಿಡುಗಡೆ ಮುನ್ನ ಭಾರೀ ಸದ್ದಿಗೆ ಕಾರಣವಾಗಿದ್ದ ಪಿಎಂ ನರೇಂದ್ರ ಮೋದಿ ಸಿನಿಮಾ, ಬಿಡುಗಡೆಯ ಬಳಿಕ ಅಷ್ಟೇನೂ ಸದ್ದು ಮಾಡಲಿಲ್ಲ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆಯೂ ಸಿಗಲಿಲ್ಲ. 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಹಿಂದಿ ಭಾಷೆಯ ಚಿತ್ರವು ತನ್ನ ಲೈಫ್‌ ಟೈಮ್‌ನಲ್ಲಿ 28 ಕೋಟಿ ರೂ. ಗಳಿಕೆ ಮಾಡಿತ್ತು.

ಸ್ಫೂರ್ತಿಯಾದರು ಮೋದಿ

ಬಹುಶಃ ಸಂಪೂರ್ಣವಾಗಿ ಮೋದಿ ಅವರನ್ನು ಕೇಂದ್ರವಾಗಿಟ್ಟು ಈವರೆಗೆ ಅಷ್ಟೇನೂ ಚಿತ್ರಗಳ ಬಂದಿಲ್ಲ. ಆದರೆ, ಕೆಲವು ಸಿನಿಮಾಗಳಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಕೆಲವು ಪಾತ್ರಗಳನ್ನು ಅವರನ್ನು ಹೋಲುತ್ತವೆ. ಹಾಗಾಗಿ, ಮೋದಿ ಅವರಿಗೂ ಸಿನಿಮಾ ರಂಗಕ್ಕೂ ನಂಟಿದೆ ಎದು ಹೇಳಬಹುದು.

Exit mobile version