Site icon Vistara News

Kaun Banega Crorepati Season 16: 25 ಲಕ್ಷ ರೂ. ಪ್ರಶ್ನೆಗೆ ಉತ್ತರಿಸಲು ವಿಫಲರಾದ ಬೆಂಗಳೂರಿನ ಎಂಜಿನಿಯರ್! ಏನಿತ್ತು ಆ ಪ್ರಶ್ನೆ?

Kaun Banega Crorepati Season 16

ಕೌನ್ ಬನೇಗಾ ಕರೋಡ್ ಪತಿಯ 16ನೇ ಸರಣಿ (Kaun Banega Crorepati Season 16) ಆಗಸ್ಟ್ 12ರಂದು ಗ್ರ್ಯಾಂಡ್ ಪ್ರೀಮಿಯರ್ ಸಂಚಿಕೆಯೊಂದಿಗೆ ಪ್ರಾರಂಭವಾಗಿದೆ. ಕಾರ್ಯಕ್ರಮದ ನಿರೂಪಕರಾಗಿ ಅಮಿತಾಭ್‌ ಬಚ್ಚನ್ (Amitabh Bachchan) ಮರಳಿ ಬಂದಿದ್ದಾರೆ. ಬೆಂಗಳೂರು (bengaluru) ಮೂಲದ ಉತ್ಕರ್ಷ್ ಬಕ್ಸಿ ಅವರು ಕಾರ್ಯಕ್ರಮದಲ್ಲಿ ಮೊದಲ ಸ್ಪರ್ಧಿಯಾಗಿ ಪಾಲ್ಗೊಂಡಿದ್ದಾರೆ. ಮೊದಲ ಸ್ಪರ್ಧೆಯಲ್ಲಿ ಎಂಜಿನಿಯರ್ ಉತ್ಕರ್ಷ್ ಬಕ್ಸಿ ಅವರು ಪ್ರಾರಂಭದ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು. ಆದರೆ 25 ಲಕ್ಷ ರೂ. ಮೌಲ್ಯದ ಮಹಾಭಾರತದ ಪ್ರಶ್ನೆಗೆ ಉತ್ತರ ನೀಡುವಲ್ಲಿ ವಿಫಲರಾದರು.

25 ಲಕ್ಷ ರೂ.ನ ಪ್ರಶ್ನೆ ಏನು?

ಅಮಿತಾಭ್‌ ಬಚ್ಚನ್ ಅವರು ಉತ್ಕರ್ಷ್ ಬಕ್ಸಿ ಅವರ ಜ್ಞಾನ ಮತ್ತು ಅದ್ಭುತ ಸಂಗೀತ ಪ್ರತಿಭೆಯಿಂದ ಪ್ರಭಾವಿತರಾದರು. 12.50 ಲಕ್ಷ ರೂ. ಗೆದ್ದ ಅನಂತರ ಬಿಗ್ ಬಿ ಮಹಾಭಾರತ ಕುರಿತಾದ 25 ಲಕ್ಷ ರೂ. ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆ ಹೀಗಿತ್ತು: ಮಹಾಭಾರತದ ಪ್ರಕಾರ ಅಂಬಾಗೆ ಮಾಲೆಯನ್ನು ಉಡುಗೊರೆಯಾಗಿ ನೀಡಿದ ಮತ್ತು ಅದನ್ನು ಧರಿಸಿದವರು ಭೀಷ್ಮನನ್ನು ಕೊಲ್ಲುತ್ತಾರೆ ಎಂದು ಹೇಳಿದ ದೇವರು ಯಾರು?

ಇದರ ಆಯ್ಕೆಗಳೆಂದರೆ ಎ) ಭಗವಾನ್ ಶಿವ ಬಿ) ಭಗವಾನ್ ಕಾರ್ತಿಕೇಯ ಸಿ) ಭಗವಾನ್ ಇಂದ್ರ ಮತ್ತು ಡಿ) ಭಗವಾನ್ ವಾಯು

ಪ್ರಶ್ನೆಯನ್ನು ಕೇಳಿದ ಅನಂತರ ಉತ್ಕರ್ಷ್ ತಮ್ಮ ವೀಡಿಯೋ ಕಾಲ್ ಎ ಫ್ರೆಂಡ್ ಲೈಫ್‌ಲೈನ್ ಅನ್ನು ಬಳಸಲು ನಿರ್ಧರಿಸಿದರು. ಇದರಲ್ಲಿ ಅವರು ತಮ್ಮ ಸ್ನೇಹಿತನನ್ನು ಕರೆದು ಅವರು ನೀಡಿದ ಉತ್ತರವಾದ A ಆಯ್ಕೆಯನ್ನು ನೀಡಿದರು. ಉತ್ಕರ್ಷ್ ಅದರ ಬಗ್ಗೆ ಸಾಕಷ್ಟು ಖಚಿತವಾಗಿರಲಿಲ್ಲ. ಹೀಗಾಗಿ ಅವರು ತಮ್ಮ ಅಂತಿಮ ಜೀವಸೆಲೆಯಾದ ಡಬಲ್ ಡಿಪ್ ಅನ್ನು ತೆಗೆದುಕೊಂಡರು. ಬಳಿಕ ಅವರು ಆರಂಭದಲ್ಲಿ ಆಯ್ಕೆ ಮಾಡಿದ್ದ ಎ ಆಯ್ಕೆಯನ್ನು ಬಿಟ್ಟು D ಅನ್ನು ಆಯ್ದುಕೊಂಡರು. ಆದರೆ ಈ ಎರಡೂ ಉತ್ತರವೂ ತಪ್ಪಾಗಿತ್ತು.

ಅತಿಯಾದ ಆತ್ಮವಿಶ್ವಾಸದಿಂದ ಉತ್ಕರ್ಷ್ ಬಕ್ಸಿ 25 ಲಕ್ಷ ರೂಪಾಯಿ ಕಳೆದುಕೊಂಡು 3.20 ಲಕ್ಷ ರೂ. ಅನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಈ ಪ್ರಶ್ನೆಯ ಸರಿಯಾದ ಉತ್ತರ ಬಿ- ಭಗವಾನ್ ಕಾರ್ತಿಕೇಯ. ಈ ಎಪಿಸೋಡ್‌ನ ಕ್ಲಿಪ್ ಅನ್ನು ಸೋನಿ ಟಿವಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.


ಹೊಸ ಬದಲಾವಣೆ

ಕೌನ್ ಬನೇಗಾ ಕರೋಡ್ ಪತಿ 16ನೇ ಸರಣಿಯಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಹೊಂದಿದೆ. ಇದರಲ್ಲಿ ‘ಸೂಪರ್ ಸವಾಲ್’ ಮತ್ತು ‘ದುಗ್ನಾಸ್ತ್ರ’ ಪರಿಚಯಿಸಿದ್ದಾರೆ. ಸ್ಪರ್ಧಿಯು ಸೂಪರ್ ಸವಾಲ್ ಉತ್ತರಿಸಲು ಪ್ರಯತ್ನಿಸುವ ಮೂಲಕ ಮೊತ್ತವನ್ನು ದ್ವಿಗುಣಗೊಳಿಸುವ ಅವಕಾಶವನ್ನು ಪಡೆಯುತ್ತಾನೆ.

ರಚನೆಕಾರರು ಈ ಹಿಂದೆ ಕಾರ್ಯಕ್ರಮದ ಪ್ರಚಾರದ ವಿಡಿಯೋವನ್ನು ಹಂಚಿಕೊಂಡಿದ್ದರು. ಅದರಲ್ಲಿ ಅಮಿತಾಭ್ ಬಚ್ಚನ್ ಸೆಟ್‌ನಲ್ಲಿ ಕನಿಷ್ಠ ಹತ್ತು ಕೆಮರಾಗಳಿವೆ ಮತ್ತು ಪ್ರತಿ ಚಲನೆಯನ್ನು ರೆಕಾರ್ಡ್ ಮಾಡಲಾಗುತ್ತಿದೆ ಎಂದು ತಮಾಷೆಯಾಗಿ ಹೇಳಿದ್ದರು.


ಇದರಲ್ಲಿ ಅಮಿತಾಭ್‌ ಹೀಗೆ ಹೇಳಿದ್ದರು. ಬಡಾ ಕಾಂಪ್ಲಿಕೇಟೆಡ್ ಹೈ ಯೇ ಸೆಟ್, ಹಜಾರೋ ಲೈಟ್ ಹೈ, ಕಂಪ್ಯೂಟರ್ ಸೆ ಚಲ್ತಿ ಹೈ. ಕೆಮರಾ 10- 12 ಕೋಯಿ ಕುಚ್ ಭಿ ಕರೋಗೆ ಪಕಡ್ ಜಾಯೇಗಾ ಎಂದು ಹೇಳಿದರು. ಇದರ ಅರ್ಥ ಸೆಟ್ ಸಾಕಷ್ಟು ಸಂಕೀರ್ಣವಾಗಿದೆ. 1000 ಲೈಟ್‌ಗಳು ಕಂಪ್ಯೂಟರ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತವೆ. ಸುಮಾರು 10-12 ಕೆಮರಾಗಳಿವೆ. ಎಲ್ಲವನ್ನೂ ರೆಕಾರ್ಡ್ ಮಾಡಲಾಗುತ್ತದೆ. ಯಾರು ಏನೇ ಮಾಡಿದರೂ ಗೊತ್ತಾಗುತ್ತದೆ ಎಂದಿರುವ ಪ್ರೋಮೋ ಜೊತೆಗೆ ಶೀರ್ಷಿಕೆಯು, ಕೆಬಿಸಿ ಮೇ ಇತ್ ನೇ ಕೆಮರಾ ಹೈ, ಕಿ ಹರ್ ಮಸ್ತಿ ಭರ್ ಪಾಲ್ ಹೋತಾ ಹೈ ಕ್ಯಾಪ್ಚರ್! ಅಂದರೆ ಕೆಬಿಸಿ ಹಲವು ಕೆಮರಗಳನ್ನು ಹೊಂದಿದ್ದು, ಪ್ರತಿ ಮೋಜಿನ ಕ್ಷಣಗಳನ್ನು ಸೆರೆ ಹಿಡಿಯಲಾಗುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: 70th National Film Awards: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರೇಸ್‌ನಲ್ಲಿ ರಿಷಬ್‌ ಶೆಟ್ಟಿ; ʼಕಾಂತಾರʼಕ್ಕೆ ಸಿಗುತ್ತಾ ಇನ್ನೊಂದು ಪ್ರತಿಷ್ಠಿತ ಗರಿ?

ಅಮಿತಾಭ್ ಬಚ್ಚನ್ ಅತಿಥಿಯಾಗಿ ಕಾಣಿಸಿಕೊಂಡಿದ್ದ ಕೌನ್ ಬನೇಗಾ ಕರೋಡ್‌ಪತಿಯ ಮೊದಲ ಸೀಸನ್ 2000ರಲ್ಲಿ ಪ್ರದರ್ಶನಗೊಂಡಿತು. ಬಳಿಕ ಶಾರುಖ್ ಖಾನ್ ನಿರೂಪಣೆ ಮಾಡಿದ 2006 ರ ಮೂರನೇ ಸೀಸನ್ ಹೊರತುಪಡಿಸಿ, ಉಳಿದಂತೆ ಅಮಿತಾಭ್‌ ಬಚ್ಚನ್ ಅವರೇ ಇದರ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ.

Exit mobile version