ಬೆಂಗಳೂರು: ʻಸ್ಟಾರ್ ಟ್ರೆಕ್ʼ: ಡಿಸ್ಕವರಿ ಸೇರಿದಂತೆ ಹಿಟ್ ಸಿನಿಮಾ ನೀಡಿದ ಕೆನಡಾದ ನಟ `ಕೆನ್ನೆತ್ ಅಲೆಕ್ಸಾಂಡರ್ ಮಿಚೆಲ್ʼ ನಿಧನರಾಗಿದ್ದಾರೆ. ನಟನಿಗೆ 49 ವರ್ಷ ವಯಸ್ಸಾಗಿತ್ತು. 2020ರಲ್ಲಿ ಮಿಚೆಲ್ ಅವರು ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (Amyotrophic Lateral Sclerosis) ತುತ್ತಾಗಿದ್ದರು. ಅವರ ಕುಟುಂಬ ಸದಸ್ಯರು ನಿಧನದ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ಕೆನ್ನೆತ್ ಅಲೆಕ್ಸಾಂಡರ್ ಮಿಚೆಲ್ ಅನೇಕ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಪರಿಚಿತರಾಗಿದ್ದರು. ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್, ಅಥವಾ ALS, ಮೆದುಳು ಮತ್ತು ಬೆನ್ನುಹುರಿಯ ನರ ಕೋಶಗಳ ಮೇಲೆ ಪರಿಣಾಮ ಬೀರುವ ಕಾಯಿಲೆ ಆಗಿದೆ. ಕ್ರಮೇಣ ಬೆನ್ನುಹುರಿ ಮತ್ತು ಮೆದುಳಿನಾದ್ಯಂತ ನರ ಕೋಶಗಳು ಕ್ರಮೇಣ ಕ್ಷೀಣಿಸುತ್ತವೆ. ಇದನ್ನು ಲೌ ಗೆಹ್ರಿಗ್ ಕಾಯಿಲೆ ಎಂದೂ ಕರೆಯುತ್ತಾರೆ.
ಮಿಚೆಲ್ 2019ರ ಕ್ಯಾಪ್ಟನ್ ಮಾರ್ವೆಲ್’ನಲ್ಲಿ ಬ್ರೀ ಲಾರ್ಸನ್ ಅವರ ತಂದೆ ಜೋಸೇಫ್ ಡ್ಯಾನ್ವರ್ಸ್ ಪಾತ್ರವನ್ನು ನಿರ್ವಹಿಸಿದರು. `ದಿ ರಿಕ್ರೂಟ್’, ದಿ ಗ್ರೀನ್’, ಮಿರಾಕಲ್’ ಸೇರದಂತೆ ಅನೇಕ್ ಹಿಟ್ ಸಿನಿಮಾ ನೀಡಿದ್ದರು.
ಇದನ್ನೂ ಓದಿ: Ameen Sayani: ‘ಬಿನಾಕಾ ಗೀತ್‌ಮಾಲಾʼ ಖ್ಯಾತಿಯ ರೇಡಿಯೋ ನಿರೂಪಕ ಅಮೀನ್ ಸಯಾನಿ ನಿಧನ
Kenneth Mitchell, 'Star Trek: Discovery' and 'Captain Marvel' actor, dies at 49 after ALS diagnosis
— Edward (@EdwardEvilap) February 26, 2024
The celebrated actor, who had Lou Gehrig’s diseasehttps://t.co/NyCfiD902S
ಲೋವರ್ ಡೆಕ್ಸ್‌ನ ಸಂಚಿಕೆಯಲ್ಲಿ ಹಲವಾರು ಪಾತ್ರಗಳಿಗೆ ಧ್ವನಿ ನೀಡಿದ್ದಾರೆ. 2020ರಲ್ಲಿ ನಟ ತಮಗಿರುವ ಕಾಯಿಲೆ ಬಗ್ಗೆ ಹೇಳಿಕೊಂಡಿದ್ದರು. ಮಿಚೆಲ್ ಅವರು ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದು ಇಷ್ಟ ಎಂದು ಸಂದರ್ಶನದಲ್ಲಿ ತಿಳಿಸಿದ್ದರು. ಕ್ರಮೇಣ ಸಿನಿ ರಂಗದಲ್ಲಿ ತೊಡಗಿಸಿಕೊಳ್ಳಲು ಕಷ್ಟಕರವಾಗಿತ್ತು ಎಂದು ಹೇಳಿಕೊಂಡಿದ್ದರು.