ಬೆಂಗಳೂರು: ಜೋಯಾ ಅಖ್ತರ್ ಅವರ `ದಿ ಆರ್ಚೀಸ್’ ನಟನೆಯ ನಂತರ, ಖುಷಿ ಕಪೂರ್ (Khushi Kapoor) ಮೊದಲ ಬಾರಿಗೆ ಶೌನಾ ಗೌತಮ್ ನಿರ್ದೇಶನದ ಮುಂದಿನ ಸಿನಿಮಾಗಾಗಿ ಸಜ್ಜಾಗುತ್ತಿದ್ದಾರೆ. ʻನಾದನಿಯಾನ್ʼನಲ್ಲಿ (Naadaniyaan) ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್ (Ibrahim Ali Khan) ನಾಯಕನಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ, ಚಿತ್ರೀಕರಣದ ಫೋಟೊವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು. ವೈರಲ್ ಆದ ಫೋಟೊದಲ್ಲಿ ಪುಣೆಯ ಖಾಸಗಿ ವಿಶ್ವವಿದ್ಯಾಲಯದಲ್ಲಿ ಖುಷಿ, ಇಬ್ರಾಹಿಂ ಮತ್ತು ಓರಿ ಶೂಟ್ ಒಳಗೊಂಡಿತ್ತು.
ಧರ್ಮ ಪ್ರೊಡಕ್ಷನ್ಸ್ ಇಬ್ರಾಹಿಂ ಅಲಿ ಖಾನ್ ಅಭಿನಯದ ʻನಾದನಿಯಾನ್ʼ ಎಂಬ ರೊಮ್ಯಾಂಟಿಕ್ ಕಾಮಿಡಿ ವೀಕ್ಷಕರಿಗೆ ಸಂತೋಷಕರ ಅನುಭವ ನೀಡಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಐಶ್ವರ್ಯಾ-ಅಭಿಷೇಕ್ ಡಿವೋರ್ಸ್ ವದಂತಿ; ಒಟ್ಟಾಗಿ ಕಾಣಿಸಿಕೊಂಡ ದಂಪತಿ
Big announcement! #KhushiKapoor gears up for her next venture titled #Naadaniyaan, under the banner of #DharmaProductions. Joining her is Ibrahim Ali Khan. Anticipation is soaring! pic.twitter.com/eTEBPkwswq
— Neetu Kumar (@neetukumar02) February 15, 2024
ಇಬ್ರಾಹಿಂ ಅಲಿ ಖಾನ್ ಅವರ ಚೊಚ್ಚಲ ಚಿತ್ರ
ಕಾಜೋಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಜತೆಗೆ ಧರ್ಮ ಪ್ರೊಡಕ್ಷನ್ಸ್‌ನ ʻಸರ್ಜಮೀನ್ʼ ಸಿನಿಮಾ ಮೂಲಕ ಇಬ್ರಾಹಿಂ ಬಾಲಿವುಡ್‌ಗೆ ಚೊಚ್ಚಲ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ನಿರ್ದೇಶಕ ಕರಣ್ ಜೋಹರ್ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಬಗ್ಗೆ ಸುಳಿವು ನೀಡಿದ್ದು, ಕುತೂಹಲಕಾರಿ ಕಥಾಹಂದರದ ಬಗ್ಗೆ ಸ್ವಲ್ಪ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಸಸ್ಪೆನ್ಸ್ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಯ ಬಗ್ಗೆ ಒಂದು ವರ್ಷದಿಂದ ರಹಸ್ಯವಾಗಿಡಲಾಗಿತ್ತು.
ಹಿಂದಿ ಕಿರಿತೆರೆ ನಟಿ ಶ್ವೇತಾ ತಿವಾರಿ ಪುತ್ರಿ ಫಲಕ್ ತಿವಾರಿ ಜತೆ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಫಲಕ್ ತಿವಾರಿ, ಸಲ್ಮಾನ್ ಖಾನ್ ನಟನೆಯ ʻಕಿಸಿ ಕಾ ಬಾಯ್, ಕಿಸಿ ಕಾ ಜಾನ್ʼ ಎನ್ನುವ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ಇಬ್ರಾಹಿಂ ಅಲಿ ಖಾನ್ ಜತೆಗೆ ಫಲಕ್ ತಿವಾರಿ ಆಗಾಗ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು.