ಬೆಂಗಳೂರು: ಡ್ರೀಮ್ ಸ್ಲೇಟ್ ಪಿಕ್ಚರ್ಸ್ ಅಧಿಕೃತವಾಗಿ ಬಹು ನಿರೀಕ್ಷಿತ ಬಯೋಪಿಕ್ ‘ಬೇಡಿ: ದಿ ನೇಮ್ ಯು ನೋ. ದ ಸ್ಟೋರಿ ಯು ಡೋಂಟ್’ ಸಿನಿಮಾ ಘೋಷಿಸಿದೆ. ಈ ಬಯೋಪಿಕ್ (Kiran Bedi) ಸಿನಿಮಾ ನಮ್ಮ ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ (Indias first IPS officer) ಆಗಿರುವ ( BEDI: The Name You Know. The Story You Don’t) ಕಿರಣ್ ಬೇಡಿ ಕುರಿತಾಗಿ ಇದೆ. ಕುಶಾಲ್ ಚಾವ್ಲಾ ಅವರು ಬರೆದು ನಿರ್ದೇಶಿಸಿದ ಈ ಸಿನಿಮಾ ಬೇಡಿ ಅವರ ವೃತ್ತಿಜೀವನ ಕುರಿತು ಇದೆ.
ಈ ಬಗ್ಗೆ ಕಿರಣ್ ಬೇಡಿ ಮಾತನಾಡಿ ʻʻಈ ಕಥೆ ಕೇವಲ ನನ್ನ ಕಥೆಯಲ್ಲ. ಇದು ಭಾರತೀಯ ಮಹಿಳೆಯ ಕಥೆ-ಭಾರತದಲ್ಲಿ ಬೆಳೆದ, ಭಾರತದಲ್ಲಿ ಅಧ್ಯಯನ ಮಾಡಿದ, ಭಾರತೀಯ ಪೋಷಕರಿಂದ ಬೆಳೆದ ಮತ್ತು ತನ್ನ ವೃತ್ತಿಜೀವನದುದ್ದಕ್ಕೂ ಭಾರತದ ಜನರಿಗಾಗಿ ಕೆಲಸ ಮಾಡಿದ ಭಾರತೀಯ ಮಹಿಳೆಯ ಕಥೆ. ನಾವು ಈ ಚಿತ್ರವನ್ನು 50ನೇ ಅಂತಾರಾಷ್ಟ್ರೀಯ ಮಹಿಳಾ ವರ್ಷದಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ, ಇದು ನಮ್ಮ ಶ್ರೇಷ್ಠ ರಾಷ್ಟ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಭಾರತೀಯ ಮಹಿಳೆಯ ಕಥೆಯಾಗಿದೆʼʼಎಂದರು.
ಕುಶಾಲ್ ಚಾವ್ಲಾ ಮಾತನಾಡಿ ʻʻಈ ಚಿತ್ರವು ಪ್ರೀತಿಯ ಶ್ರಮ. ನಾಲ್ಕು ವರ್ಷಗಳ ಕಾಲ ಸಂಶೋಧನೆಯಲ್ಲಿ ತೊಡಗಿ ಮಾಡಿರುವ ಸಿನಿಮಾ. ಡಾ.ಕಿರಣ್ ಬೇಡಿಯವರ ಜೀವನದ ಕುರಿತು ಸಿನಿಮಾ ಮಾಡಿ ನಿರ್ದೇಶಿಸಿರುವುದು ನನ್ನ ಸೌಭಾಗ್ಯ. ಅವರು ನನಗೆ ಸ್ಫೂರ್ತಿಯಾಗಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು, ಹಾಗೇ ಅವರ ವಿಶ್ವಾಸವನ್ನು ಗಳಿಸಿರುವುದು ನನಗೆ ಆಶೀರ್ವಾದವಾಗಿದೆʼʼ ಎಂದರು.
ಇದನ್ನೂ ಓದಿ: ರಾಜ ಮಾರ್ಗ ಅಂಕಣ | ಕಿರಣ್ ಬೇಡಿ ಎಂಬ ಕ್ರಾಂತಿಯ ಕಿಡಿ, 73 ವರ್ಷದ ಆಕೆ ಇಂದಿಗೂ ದೇಶದ ಯೂತ್ ಐಕಾನ್!
ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಜೀವನಾಧಾರಿತ ಬೇಡಿಯ ಮೋಷನ್ ಪೋಸ್ಟರ್ ಈಗಾಗಲೇ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಡ್ರೀಮ್ ಸ್ಲೇಟ್ ಪಿಕ್ಚರ್ಸ್ ಅಡಿಯಲ್ಲಿ ಗೌರವ್ ಚಾವ್ಲಾ ನಿರ್ಮಿಸಿದ್ದಾರೆ. ಇನ್ನು ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿಲ್ಲ.
ಭಾರತದ ವಿವಿಧ ಭಾಷೆಗಳಲ್ಲಿ ಕಿರಣ್ ಬೇಡಿ ಹೆಸರಲ್ಲಿ ಬಂದಿರುವ ಪೊಲೀಸ್ ಸಿನೆಮಾಗಳು ಬೇರೆ ಯಾರ ಹೆಸರಲ್ಲಿ ಕೂಡ ಬಂದಿರುವ ಉದಾಹರಣೆ ಇಲ್ಲ. ಇಡೀ ದೇಶದ ಯೂತ್ ಐಕಾನ್ ಆಗಿದ್ದಾರೆ ಕಿರಣ್. ಹೆಣ್ಮಕ್ಕಳ ಪಾಲಿಗಂತೂ ಆತ್ಮವಿಶ್ವಾಸದ ಪ್ರತೀಕ. ಯಾವುದೇ ಮಹಿಳಾ ಚರ್ಚೆ ಆಕೆಯ ಹೆಸರೆತ್ತದೆ ಮುಕ್ತಾಯವಾಗುವುದು ಸಾಧ್ಯವೇ ಇಲ್ಲ.
ಕಿರಣ್ ಬೇಡಿ ಮಾಡಿದ ಈ ಜೈಲು ಸುಧಾರಣೆಯ ಕ್ರಮಗಳು ಜಗತ್ತಿನಲ್ಲಿಯೇ ವಿನೂತನ ಆಗಿದ್ದವು. ಅದರಿಂದ ದೇಶದ, ವಿದೇಶದ ಮಾಧ್ಯಮಗಳು ಆಕೆಯ ಬಗ್ಗೆ, ತಿಹಾರ್ ಜೈಲಿನ ಸುಧಾರಣ ಕ್ರಮಗಳ ಬಗ್ಗೆ ಲೀಡ್ ಲೇಖನ ಬರೆದವು. ಆಗ ಭಾರೀ ಇಂಪ್ರೆಸ್ ಆದ ಅಮೆರಿಕಾದ ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಆಕೆಗೆ ಪತ್ರ ಬರೆದು ಶುಭಾಶಯ ಹೇಳಿದರು. ಮತ್ತು ಅವರ ಜೊತೆ ಒಮ್ಮೆ ಊಟ ಮಾಡಬೇಕು ಅಂತ ಆಸೆ ವ್ಯಕ್ತ ಪಡಿಸಿದರು! ಆಕೆಗೆ ಜಾಗತಿಕ ಮಟ್ಟದ ‘ಮ್ಯಾಗ್ಸೆಸೆ ಪ್ರಶಸ್ತಿ’ಯು ದೊರೆಯಿತು. ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತು. ಮುಂದೆ ನಿವೃತ್ತರಾದ ನಂತರ ಅವರು ಪಾಂಡಿಚೇರಿಯ ಮೊದಲ ಮಹಿಳಾ ಗವರ್ನರ್ ಆಗಿ ಸೇವೆ ಸಲ್ಲಿಸಿದರು