ಬೆಂಗಳೂರು: ಆಮೀರ್ ಖಾನ್ (Aamir Khan) ಅವರು ಕಿರಣ್ ರಾವ್ (Kiran Rao) ಅವರೊಂದಿಗೆ ಡೇಟಿಂಗ್ ಪ್ರಾರಂಭಿಸುವ ಮೊದಲು, ರೀನಾ ದತ್ತಾ ( Reena Dutta) ಅವರನ್ನು ವಿವಾಹವಾಗಿದ್ದರು. ʻಲಗಾನ್ʼ ಬಿಡುಗಡೆಯಾದ ಒಂದು ವರ್ಷದ ನಂತರ 2002ರಲ್ಲಿ ಆಮೀರ್ ಮತ್ತು ರೀನಾ ಡಿವೋರ್ಸ್ ಪಡೆದುಕೊಂಡರು. ಅಚ್ಚರಿ ವಿಚಾರ ಎಂದರೆ, ʻಲಗಾನ್ʼ ಸಿನಿಮಾದಲ್ಲಿ ಕಿರಣ್ ಅವರು ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಅಮೀರ್ನೊಂದಿಗಿನ ಕಿರಣ್ ಅವರ ಪ್ರೇಮ ಸಂಬಂಧವೇ ರೀನಾ ಅವರೊಂದಿಗಿನ ವಿಚ್ಛೇದನಕ್ಕೆ ಕಾರಣವಾಯಿತು ಎಂದು ಸುದ್ದಿ ಹಬ್ಬಿತ್ತು. ಆದರೆ ಅದಲ್ಲ ಅಸಲಿ ವಿಚಾರ ಎಂದು ಕಿರಣ್ ಬಹಿರಂಗಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಕಿರಣ್ ಅವರು ʻಲಗಾನ್ʼ ಚಿತ್ರೀಕರಣದ ಸಮಯದಲ್ಲಿ ಅಮೀರ್ ಅವರೊಂದಿಗೆ ನಾನು ಅಷ್ಟೇನೂ ಕ್ಲೋಸ್ ಆಗಿಲ್ಲ. ಮಾತನಾಡಿಸಿಯೂ ಇಲ್ಲ ಎಂದು ಹೇಳಿದ್ದಾರೆ. ಮೂರು ವರ್ಷಗಳ ನಂತರ 2004 ರಲ್ಲಿ ಡೇಟ್ ಮಾಡಲು ಪ್ರಾರಂಭಿಸಿದೆವು ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Aamir Khan: ಹಾರರ್ ಲುಕ್ನಲ್ಲಿ ಕಂಡ ಆಮಿರ್ ಖಾನ್: ಅಭಿಮಾನಿಗಳಲ್ಲಿ ಹೆಚ್ಚಾಯ್ತು ಕುತೂಹಲ!
ಕಿರಣ್ ಮಾತನಾಡಿ ʻʻಆಮೀರ್ ಮತ್ತು ನಾನು ಲಗಾನ್ ಸಿನಿಮಾ ಬಳಿಕ ಕ್ಲೋಸ್ ಆದೆವು ಎಂದು ತುಂಬ ಜನ ಭಾವಿಸುತ್ತಾರೆ. ʻಸ್ವದೇಸ್ʼ ಸಮಯದಲ್ಲಿ ಅಮೀರ್ ಮತ್ತು ನಾನು ಕ್ಲೋಸ್ ಆದೆವು. ಆಮೀರ್ ಆ ಸಮಯದಲ್ಲಿ ಮಂಗಲ್ ಪಾಂಡೆ ಚಿತ್ರೀಕರಣಕ್ಕೆ ಹೋಗುತ್ತಿದ್ದರು. ಅಶುತೋಷ್ ಗೋವಾರಿಕರ್ ಅವರೊಂದಿಗೆ ಒಂದೆರಡು ಜಾಹೀರಾತುಗಳನ್ನು ಚಿತ್ರೀಕರಿಸಿದ್ದೆ. ಆಗ ನನಗೂ ಆಮೀರ್ಗೂ ಪರಿಚಯವಾಯ್ತು. ಅಲ್ಲಿಯ ತನಕ ಆಮೀರ್ ಜತೆ ಸಂಪರ್ಕದಲ್ಲಿ ಇರಲಿಲ್ಲ. ವಾಸ್ತವವಾಗಿ, ಲಗಾನ್ನಲ್ಲಿ, ನಾನು ಅವನೊಂದಿಗೆ ಮಾತೂ ಆಡಲಿಲ್ಲ. ಅವರ ಡಿವೋರ್ಸ್ ವದಂತಿಗೆ ಇದು ಕಾರಣ ಅಲ್ಲʼʼಎಂದು ಹೇಳಿಕೊಂಡಿದ್ದಾರೆ.
15 ವರ್ಷಗಳ ದಾಂಪತ್ಯ ಜೀವನವನ್ನು ಅನುಭವಿಸಿದ ಬಳಿಕ 2021ರಲ್ಲಿ ಆಮೀರ್ ಖಾನ್ (Aamir Khan) ಮತ್ತು ಕಿರಣ್ ರಾವ್ ವಿಚ್ಛೇದನವನ್ನು ಘೋಷಿಸಿದರು. ಇದಾದ ಬಳಿಕವೂ ಆಮೀರ್ ಮತ್ತು ಕಿರಣ್ಗೆ 13 ವರ್ಷದ ಮಗ ಆಜಾದ್ಗೆ ಪೋಷಕರಾಗಿ ಮುಂದುವರಿಯುತ್ತಿದ್ದಾರೆ. ಅಷ್ಟೇ ಅಲ್ಲ ಇತ್ತೀಚೆಗೆ ʻಲಾಪತಾ ಲೇಡೀಸ್ʼ ಸಿನಿಮಾ ಪ್ರಚಾರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆಮೀರ್ ಖಾನ್ ಪ್ರೊಡಕ್ಷನ್ (APK) ಮತ್ತು ಕಿರಣ್ ಅವರ ಕಿಂಡ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ʻಲಾಪತಾ ಲೇಡೀಸ್ʼ. 14 ವರ್ಷಗಳ ಬ್ರೇಕ್ ನಂತರ ಚಿತ್ರವನ್ನು ನಿರ್ದೇಶಿಸಿದ್ದಾರೆ ಕಿರಣ್.