ಬೆಂಗಳೂರು: 90 ರ ದಶಕದ ನಟ ಮತ್ತು ಟಿ-ಸಿರೀಸ್‌ನ ಸಹ-ಮಾಲೀಕ ಕ್ರಿಶನ್ ಕುಮಾರ್ (Krishan Kumar) ಅವರ ಪುತ್ರಿ ತಿಶಾ ಕುಮಾರ್ ನಿಧನರಾಗಿದ್ದಾರೆ. ತಿಶಾ ಕುಮಾರ್ ( Tishaa Dies) ಅವರು ಕೇವಲ 21ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು.
ಆಕೆಯ ಕ್ಯಾನ್ಸರ್ ಚಿಕಿತ್ಸೆಗಾಗಿ ಮುಂಬೈನಿಂದ ಜರ್ಮನಿಗೆ ಕರೆದೊಯ್ಯಲಾಯಿತು. ನಿನ್ನೆ ಜರ್ಮನಿಯ ಆಸ್ಪತ್ರೆಯಲ್ಲಿ ತಿಶಾ ಕೊನೆಯುಸಿರೆಳೆದಿದ್ದಾರೆ. ಟಿ-ಸೀರೀಸ್ ವಕ್ತಾರರು ಈ ಬಗ್ಗೆ ಹಂಚಿಕೊಂಡಿದ್ದಾರೆ, “ಕ್ರಿಶನ್ ಕುಮಾರ್ ಅವರ ಪುತ್ರಿ ತಿಶಾ ಕುಮಾರ್ ಅವರು ಅನಾರೋಗ್ಯದಿಂದ ದೀರ್ಘಕಾಲದ ಹೋರಾಟದ ನಂತರ ನಿನ್ನೆ ನಿಧನರಾದರು. ಇದು ಕುಟುಂಬಕ್ಕೆ ಕಷ್ಟಕರ ಸಮಯ.ಈ ಕಷ್ಟದ ಸಮಯದಲ್ಲಿ ಖಾಸಗಿತನವನ್ನು ಗೌರವಿಸಿ’ ಎಂದು ಕೋರಿದ್ದಾರೆ. ಕ್ರಿಶನ್ ಕುಮಾರ್ ಅವರು ಬಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆ ಟಿ-ಸೀರಿಸ್ನ ಭಾಗವಾಗಿದ್ದಾರೆ. ಟಿ-ಸೀರಿಸ್ ನಿರ್ಮಾಣದ ಸಿನಿಮಾಗಳಲ್ಲಿ ಇವರ ಪಾಲೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಟಿ-ಸೀರಿಸ್ ಕಡೆಯಿಂದ ಸುತ್ತೋಲೆ ರಿಲೀಸ್ ಮಾಡಲಾಗಿದೆ.
ಕ್ರಿಶನ್ ಕುಮಾರ್ ನಿರ್ಮಾಪಕರಾಗಿದ್ದು, “ಬೇವಾಫಾ ಸನಮ್” (1995) ನಲ್ಲಿನ ಪಾತ್ರಕ್ಕಾಗಿ ಮತ್ತು ಭಾರತದಲ್ಲಿನ ಅತಿದೊಡ್ಡ ಸಂಗೀತ ನಿರ್ಮಾಣ ಕಂಪನಿಯಾದ ಟಿ-ಸಿರೀಸ್ ಅನ್ನು ಹೊಂದಿದ್ದಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.
ಕ್ರಿಶನ್ ಕುಮಾರ್ ದುವಾ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಚಂದ್ರಭಾನ್, ಕ್ರಿಶನ್ ಟಿ-ಸೀರೀಸ್ ಎಂದು ಕರೆಯಲ್ಪಡುವ ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಕಿರಿಯ ಸಹೋದರ.
ಇದನ್ನೂ ಓದಿ: Dhruva Sarja: 3 ವರ್ಷವಾದರೂ ʻಮಾರ್ಟಿನ್ʼ ಸಿನಿಮಾ ರಿಲೀಸ್ ಆಗಲು ತಡವಾಗಿದ್ದೇಕೆ? ನಿರ್ಮಾಪಕರಿಗೆ ಮೋಸ ಮಾಡಿದ್ಯಾರು?
ತಿಶಾ ಅವರು 2003ರ ಸೆಪ್ಟೆಂಬರ್ 6ರಂದು ಜನಿಸಿದರು. ಅವರು ಕೃಷ್ಣ ಹಾಗೂ ತಾನ್ಯಾ ಸಿಂಗ್ ಮಗಳು. ದಂಪತಿಗೆ ಇರುವ ಏಕೈಕ ಮಗಳು ಇವರಾಗಿದ್ದರು. ಅವರ ಬಗ್ಗೆ ಹೊರ ಜಗತ್ತಿಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ತಿಶಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಸಂದೀಪ್ ರೆಡ್ಡಿ ವಂಗ ನಿರ್ದೇಶನದ, ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಯಿತು. ಇದನ್ನು ಟಿ-ಸೀರಿಸ್ ನಿರ್ಮಾಣ ಮಾಡಿದೆ. ‘ಅನಿಮಲ್’, ‘ಭೂಲ್ ಭುಲಯ್ಯ 2’ ರೀತಿಯ ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು ಕ್ರಿಶನ್ ಕುಮಾರ್ .