Site icon Vistara News

Kriti Kharbanda:  ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಗೂಗ್ಲಿʼ ಸಿನಿಮಾ ನಟಿ

Kriti Kharbanda Pulkit Samra

ಹಲವು ವರ್ಷಗಳಿಂದ ಡೇಟ್‌ ಮಾಡುತ್ತಿದ್ದ ಪುಲ್ಕಿತ್ ಸಾಮ್ರಾಟ್ ಹಾಗೂ ʻಗೂಗ್ಲಿʼ ಸಿನಿಮಾ ನಟಿ ಕೃತಿ ಕರಬಂದ (Kriti Kharbanda) ಮಾರ್ಚ್ 15ರಂದು  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇವರಿಬ್ಬರು ಅದ್ಧೂರಿ ವಿವಾಹ ದೆಹಲಿಯ ಐಟಿಸಿ ಗ್ರ್ಯಾಂಡ್ ಭಾರತ್​ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಗಳು ಜರುಗಿವೆ. ಆಪ್ತರು ಹಾಗೂ ಕುಟುಂಬದವರು ಮಾತ್ರ ಈ ಮದುವೆಗೆ ಆಗಮಿಸಿದ್ದರು.

ಕೃತಿ ಹಾಗೂ ಪುಲ್ಕಿತ್ ‘ಪಾಗಲ್​ಪಂತಿ’ ಚಿತ್ರದ ಸೆಟ್​ನಲ್ಲಿ ಭೇಟಿ ಆದರು. ಈ ವರ್ಷದ ಆರಂಭದಲ್ಲಿ ಇವರು ಎಂಗೇಜ್​ಮೆಂಟ್ ಮಾಡಿಕೊಂಡಿದ್ದರು. ಇವರು ಪ್ರೀತಿ ವಿಚಾರವನ್ನು ಅನೇಕ ಬಾರಿ ಒಪ್ಪಿಕೊಂಡಿದ್ದು ಇದೆ.

ಇದನ್ನೂ ಓದಿ: Kriti Kharbanda: ʻಗೂಗ್ಲಿʼ ಸಿನಿಮಾ ನಟಿ ಕೃತಿ ಕರಬಂದ ಜತೆ ಪುಲ್ಕಿತ್ ಸಾಮ್ರಾಟ್ ಎಂಗೇಜ್‌!

ಪುಲ್ಕಿತ್ ಸಾಮ್ರಾಟ್ ಸನಮ್ ರೇ, ಡಾಲಿ ಕಿ ಡೋಲಿ, ಫುಕ್ರೆ ರಿಟರ್ನ್ಸ್, ಹಾಥಿ ಮೇರೆ ಸಾಥಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಕೃತಿ ಅವರು ಹಿಂದಿ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಗೂಗ್ಲಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದರು ಕೃತಿ.

Exit mobile version