Site icon Vistara News

ಶಂಶೇರಾ ಚಿತ್ರದ ಫಸ್ಟ್‌ ಲುಕ್‌ ರಿಲೀಸ್, ಸೆಳೆಯುತ್ತಿದೆ ರಣಬೀರ್‌ ರಗಡ್‌ ನೋಟ

ಮುಂಬೈ: ಬಾಲಿವುಡ್‌ನ ಹ್ಯಾಂಡ್‌ಸಮ್ ಸ್ಟಾರ್ ರಣಬೀರ್‌ ಕಪೂರ್‌ ಮೂರು ವರ್ಷಗಳ ವಿರಾಮದ ನಂತರ ಮತ್ತೆ ಬ್ಯುಸಿಯಾಗಿದ್ದಾರೆ. ಅವರು ನಾಯಕನಾಗಿರುವ ಶಂಶೇರಾ ಮತ್ತು ಬ್ರಹ್ಮಾಸ್ತ್ರ ಚಿತ್ರಗಳು ಒಂದರ ಬೆನ್ನಿಗೆ ಒಂದು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲಿವೆ. ಅದರಲ್ಲಿ ಶಂಶೇರಾ ಚಿತ್ರದ ಫಸ್ಟ್-ಲುಕ್ ಪೋಸ್ಟರ್ ಸಾಮಾಜಿಕ ಸಕತ್‌ ವೈರಲ್ ಆಗುತ್ತಿದೆ.

ಜುಲೈ 22 ಕ್ಕೆ ಬಿಡುಗಡೆಯಾಗಲಿದೆ.

ಶಂಶೇರಾ ಚಿತ್ರದಲ್ಲಿ ವಾಣಿ ಕಪೂರ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶಂಶೇರಾ ಚಿತ್ರದ ರಣಬೀರ್ ಅವರ ಫಸ್ಟ್-ಫುಲ್ ಲುಕ್ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಈಗಾಗಲೆ ಸಾಕಷ್ಟು ಅಲೆಗಳನ್ನು ಸೃಷ್ಟಿಸುತ್ತಿದೆ. ಬಾಲಿವುಡ್‌ನಲ್ಲಿ ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಕಾಣಿಸುತ್ತಿದೆ. ರಣಬೀರ್ ಅವರ ಈ ಫೋಟೊದಲ್ಲಿ ಅವರು ರಫ್‌ ಎಂಡ್‌ ಟಫ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಅವರ ಈ ಲುಕ್ ಸಖತ್‌ ಇಷ್ಟ ಆಗಿದೆ. ಚಿತ್ರದ ನಿರ್ಮಾಣವನ್ನು ಯಶ್ ರಾಜ್ ಫಿಲ್ಮ್ಸ್ ಅವರು ಮಾಡಿದ್ದಾರೆ. ಆದರೆ ಅವರ ಈ ಲುಕ್‌ ಹಿನ್ನೆಲೆ ಬಗ್ಗೆ ಯಾವುದೇ ಕ್ಲೂ ನೀಡಿಲ್ಲ.

ಇದನ್ನೂ ಓದಿ: Brahmastra: ಕನ್ನಡದಲ್ಲೇ ಟ್ವೀಟ್‌ ಮಾಡಿದ ಆಲಿಯಾ : ಶಿವನ ಅವತಾರದಲ್ಲಿ ರಣಬೀರ್‌ ಕಪೂರ್‌

Exit mobile version