Site icon Vistara News

Lok Sabha Elections 2024: ಈ ಬಾಲಿವುಡ್‌ ಸ್ಟಾರ್ಸ್‌ಗಳು ಈ ಬಾರಿ ವೋಟ್‌ ಹಾಕಲೇ ಇಲ್ಲ!

Lok Sabha Elections 2024 7 celebs who didn’t vote in Lok Sabha Elections

ಬೆಂಗಳೂರು: ದೇಶದಲ್ಲಿ ಈಗಾಗಲೇ ನಾಲ್ಕು (Lok Sabha Elections 2024) ಹಂತಗಳಲ್ಲಿ 379 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಐದನೇ ಹಂತದ ಮತದಾನ ಸೋಮವಾರ ಆಗಿದೆ. ಹಲವಾರು ಬಾಲಿವುಡ್ ತಾರೆಯರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ದೀಪಿಕಾ ಪಡುಕೋಣೆ, ಶಾರುಖ್ ಖಾನ್, ಆಮೀರ್ ಖಾನ್ ಮತ್ತು ಅವರ ಕುಟುಂಬ, ಸಲ್ಮಾನ್ ಖಾನ್ ಮತ್ತು ಅವರ ಪೋಷಕರು, ರಣಬೀರ್ ಕಪೂರ್, ಅಕ್ಷಯ್ ಕುಮಾರ್, ಐಶ್ವರ್ಯಾ ರೈ ಬಚ್ಚನ್, ಅಮಿತಾಭ್‌ ಬಚ್ಚನ್ ಮತ್ತು ಕಿಯಾರಾ ಆಡ್ವಾಣಿ ಸೇರಿದಂತೆ ಅನೇಕರು ವೋಟ್‌ ಮಾಡಿದ್ದಾರೆ. ಆದರೆ ಕೆಲವು ಸೆಲೆಬ್ರಿಟಿಗಳು ವೋಟ್‌ ಹಾಕಿಲ್ಲ.

ನಟಿ ಕತ್ರಿನಾ ಕೈಫ್ ಸದ್ಯ ಲಂಡನ್‌ನಲ್ಲಿದ್ದಾರೆ. ವದಂತಿಗಳ ಪ್ರಕಾರ ಕತ್ರಿನಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭಾರತದಲ್ಲಿದ್ದರೂ ಅವರು ಬ್ರಿಟಿಷ್ ಪ್ರಜೆಯಾದ್ದರಿಂದ ಮತದಾನ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದೇ ರೀತಿ ಆಲಿಯಾ ಕೂಡ ವೋಟ್‌ ಹಾಕಿಲ್ಲ.

ಅಮಿತಾಭ್‌ ಬಚ್ಚನ್ ಮತ್ತು ಜಯಾ ಬಚ್ಚನ್ ಒಟ್ಟಿಗೆ ಬಂದು ವೋಟ್‌ ಹಾಕಿದರು. ಐಶ್ವರ್ಯಾ ರೈ ಬಚ್ಚನ್ ಅವರು ಕಾನ್‌ ಫೆಸ್ಟಿವಲ್‌ ಮುಗಿಸಿ ಒಬ್ಬರೇ ಬಂದು ವೋಟ್‌ ಮಾಡಿದರು. ಆದರೆ ಅಭಿಷೇಕ್ ಮುಂಬೈನಲ್ಲಿದ್ದರೂ ವೋಟ್‌ ಹಾಕಿರುವುದು ಕಂಡು ಬಂದಿಲ್ಲ . ಜಾಕ್ವೆಲೀನ್ ಪ್ರಸ್ತುತ 77ನೇ ಕಾನ್‌ ಫೆಸ್ಟಿವಲ್‌ ಚಲನಚಿತ್ರೋತ್ಸವಕ್ಕಾಗಿ ಫ್ರಾನ್ಸ್‌ನಲ್ಲಿದ್ದಾರೆ. ನಟಿ ಶ್ರೀಲಂಕಾದ ಪ್ರಜೆ, ಅದಕ್ಕಾಗಿಯೇ ಅವರು ಭಾರತದಲ್ಲಿದ್ದರೂ ಮತ ಚಲಾಯಿಸಿಲ್ಲ.

ಇದನ್ನೂ ಓದಿ: Lok Sabha Elections 2024: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಟಾಲಿವುಡ್ ಸ್ಟಾರ್ಸ್‌​!

ಅನುಷ್ಕಾ ಕೂಡ ಈ ಬಾರಿ ವೋಟ್‌ ಮಾಡಿಲ್ಲ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ಇದ್ದ ಕಾರಣ ಅನುಷ್ಕಾ ಅವರು ಈ ಬಾರಿ ಮತ ಚಲಾಯಿಸಲು ಹೋಗಿಲ್ಲ.

ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಲ್ಲಿಯು ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. 4.69 ಕೋಟಿ ಪುರುಷ, 4.26 ಕೋಟಿ ಮತ್ತು 5,409 ತೃತೀಯ ಲಿಂಗಿ ಮತದಾರರು ಸೇರಿದಂತೆ 8.95 ಕೋಟಿಗೂ ಅಧಿಕ ಮತದಾರರು ಇಂದು 695 ಅಭ್ಯರ್ಥಿಗಳ ಅದೃಷ್ಟ ನಿರ್ಧರಿಸಲಿದ್ದಾರೆ.

ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳ 7, ಬಿಹಾರ ಹಾಗೂ ಒಡಿಶಾದಲ್ಲಿ ತಲಾ 5, ಜಾರ್ಖಂಡ್‌ನಲ್ಲಿ 3, ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ತಲಾ 1 ಕ್ಷೇತ್ರಗಳಲ್ಲಿ ಮತದಾನ ಆಗಿದೆ.

Exit mobile version