Site icon Vistara News

Love Sex Aur Dhokha: ಮೊದಲ ಬಾರಿಗೆ ಬಾಲಿವುಡ್ ಸಿನಿಮಾದಲ್ಲಿ ನಾಯಕಿಯಾದ ತೃತೀಯ ಲಿಂಗಿ!

Love Sex Aur Dhokha Ektaa Kapoor introduces trans woman

ಬೆಂಗಳೂರು: 2010ರಲ್ಲಿ ಬಿಡುಗಡೆಯಾದ ʻಲವ್ ಸೆಕ್ಸ್ ಔರ್ ಧೋಖಾʼ (Love Sex Aur Dhokha) ಸಿನಿಮಾವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ರಾಜ್‌ಕುಮಾರ್ ರಾವ್, ನೇಹಾ ಚೌಹಾನ್, ಅಂಶುಮಾನ್ ಝಾ ಮತ್ತು ನುಸ್ರುತ್‌ ಭರುಚ್ಚ ಇತರರು ನಟಿಸಿದ್ದರು. ಈ ಸಿನಿಮಾದ ಸೀಕ್ವೆಲ್‌ಅನ್ನು ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ಘೋಷಿಲಾಗಿತ್ತು. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ (Love Sex Aur Dhokha 2) ಏಪ್ರಿಲ್ 19 ರಂದು ಥಿಯೇಟರ್‌ಗಳಲ್ಲಿ ಬರಲಿದೆ. ಈ ಸಿನಿಮಾಗೆ ಲವ್ ಸೆಕ್ಸ್ ಔರ್ ಧೋಖಾ ಸಿನಿಮಾದಲ್ಲಿ ರಾಜಸ್ಥಾನಿ ಮೂಲದ ಬೋನಿತಾ ರಾಜಪುರೋಹಿತ್ (Bonita Rajpurohit) ಎನ್ನುವ ತೃತೀಯಲಿಂಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂಥದ್ದೊಂದು ಅವಕಾಶವನ್ನು ನಿರ್ಮಾಪಕಿ ಏಕ್ತಾ ಕಪೂರ್ ನೀಡಿದ್ದಾರೆ.

ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಲು ಹೆಸರುವಾಸಿಯಾಗಿರುವ ಏಕ್ತಾ ಕಪೂರ್ ಇತ್ತೀಚೆಗೆ ‘ಲವ್ ಸೆಕ್ಸ್ ಔರ್ ಧೋಖಾ 2’ ನಲ್ಲಿ ದೊಡ್ಡ ಪರದೆಯ ಮೇಲೆ ಟ್ರಾನ್ಸ್‌ಜೆಂಡರ್ ಮಹಿಳೆಯನ್ನು ನಾಯಕಿಯಾಗಿ ಪರಿಚಯಿಸಿದ್ದಾರೆ. ಈ ಹಿಂದೆ, ಟ್ರಾನ್ಸ್ ಮಹಿಳೆ, ತ್ರಿನೇತ್ರ ಹಲ್ದಾರ್ ಗುಮ್ಮರಾಜು ಅವರು ‘ಮೇಡ್ ಇನ್ ಹೆವನ್ 2’ ನಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Uorfi Javed: ʻಲವ್ ಸೆಕ್ಸ್ ಔರ್ ಧೋಖಾʼಸೀಕ್ವೆಲ್‌ನಲ್ಲಿ ಉರ್ಫಿ ಜಾವೇದ್: ಏಕ್ತಾ ಕಪೂರ್‌ ನಿರ್ಮಾಪಕಿ!

ಬೋನಿತಾ ರಾಜ್‌ಪುರೋಹಿತ್ ಅವರ ಪ್ರಯಾಣ ಮತ್ತು ‘ಲವ್ ಸೆಕ್ಸ್ ಔರ್ ಧೋಖಾ 2’ ನಲ್ಲಿ ಬೋನಿತಾ ಹೇಗೆ ಚಾನ್ಸ್‌ ಪಡೆದರು ಎಂಬುದನ್ನು ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಬೋನಿಟಾಗೆ ನಟನೆಯಲ್ಲಿ ಮಾರ್ಗದರ್ಶನ ನೀಡಿದರು. ಇದೇ ಮೊದಲ ಬಾರಿಗೆ ತೃತೀಯಲಿಂಗಿ ಮಹಿಳೆಯೊಬ್ಬರು ಬಾಲಿವುಡ್ ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಅಂದರೆ ಈ ಸಿನಿಮಾ ಮೂಲಕ ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದ ಉರ್ಫಿ ಜಾವೇದ್ (Uorfi Javed) ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ‘ಲವ್ ಸೆಕ್ಸ್ ಔರ್ ಧೋಖಾ 2’ ಅನ್ನು ದಿವಾಕರ್ ಬ್ಯಾನರ್ಜಿ ಅವರೇ ನಿರ್ದೇಶಿಸಿದ್ದಾರೆ.

‘ಲವ್ ಸೆಕ್ಸ್ ಔರ್ ಧೋಖಾ 2’ನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇಂಟರ್ನೆಟ್ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿದೆ. ತುಷಾರ್ ಕಪೂರ್ ಮತ್ತು ಮೌನಿ ರಾಯ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾ ಸ್ವಾರ್‌ ಉರ್ಫಿ ಜಾವೇದ್, ‘ಲವ್ ಸೆಕ್ಸ್ ಔರ್ ಧೋಖಾ 2’ ಮೂಲಕ ದೊಡ್ಡ ಪರದೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ಈ ಹಿಂದೆ, ಮೌನಿ ರಾಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. “ಮೌನಿ ರಾಯ್ ಏಕ್ತಾ ಆರ್ ಕಪೂರ್ ಅವರ ‘ಲವ್, ಸೆಕ್ಸ್ ಔರ್ ಧೋಖಾ 2’ನ ಸೀಕ್ವೆಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಮೌನಿ ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆʼ ಎಂದು ವರದಿಯಾಗಿತ್ತು.

ಬಾಲಾಜಿ ಟೆಲಿಫಿಲ್ಮ್ಸ್ ಮತ್ತು ಕಲ್ಟ್ ಮೂವೀಸ್ , ದಿವಾಕರ್ ಬ್ಯಾನರ್ಜಿ ನಿರ್ಮಾಣದ ಬಾಲಾಜಿ ಮೋಷನ್ ಪಿಕ್ಚರ್ಸ್, ಲವ್ ಸೆಕ್ಸ್ ಔರ್ ಧೋಖಾ 2 ಅನ್ನು ಪ್ರಸ್ತುತಪಡಿಸುತ್ತದೆ. ಏಕ್ತಾ ಆರ್ ಕಪೂರ್ ಮತ್ತು ಶೋಭಾ ಕಪೂರ್ ನಿರ್ಮಿಸಿದ್ದಾರೆ. ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದಾರೆ. ಚಿತ್ರವು 2024ರ ಏಪ್ರಿಲ್‌ 19ರಂದು ಬಿಡುಗಡೆಯಾಗಲಿದೆ.

Exit mobile version