ಬೆಂಗಳೂರು: ಪ್ರಿಯಾಂಕಾ (Priyanka Chopra) ಮತ್ತು ನಿಕ್ ಜೋನಾಸ್ 2018ರ ಡಿಸೆಂಬರ್ 1ರಂದು ಮದುವೆಯಾದರು. ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಕೆಲವು ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ (Madhu Chopra) ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದರು. ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಇತ್ತೀಚೆಗೆ ತಮ್ಮ ಮಗಳು ಮತ್ತು ನಿಕ್ ಜೋನಾಸ್ ಅವರ ಸಂಬಂಧವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಗಳು ಮತ್ತು ಅಳಿಯನಿಗೆ ಇರುವ 10 ವರ್ಷ ವಯಸ್ಸಿನ ಅಂತರ ಬಗ್ಗೆ ಮಾತನಾಡಿದ್ದಾರೆ.
ಮಧು ಚೋಪ್ರಾ ಮಾತನಾಡಿ ʻʻವಯಸ್ಸಿನ ಅಂತರವಿದೆ. ಹೌದು. ಹುಡುಗ ಒಳ್ಳೆಯವನು. ಅದೇ ರೀತಿ ನನ್ನ ಮಗಳು ಒಳ್ಳೆಯವಳು. ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತಾರೆ. ಅವರಿಬ್ಬರನ್ನು ನೋಡಿ ನನಗೆ ಸಂತೋಷವಾಗಿದೆ. ಜನರು ಹಾಗೇ ಏನು ಬೇಕಾದರೂ ಮಾತನಾಡುತ್ತಾರೆ. ನಿಕ್ ಭಾರತಕ್ಕೆ ಬಂದು ನನ್ನನ್ನು ಭೇಟಿಯಾದಾಗ, ಪ್ರಿಯಾಂಕಾ ಇಲ್ಲದಿದ್ದಾಗ ನನ್ನನ್ನು ಊಟಕ್ಕೆ ಕರೆದೊಯ್ದರು. ಪ್ರಿಯಾಂಕಾಗೆ ಯಾವ ರೀತಿಯ ಹುಡುಗ ಬೇಕು ಎಂದು ಬಯಸುತ್ತೀರಿ ಎಂದು ನಿಕ್ ಕೇಳಿದರು. ಆ ಗುಣಗಳು ನಿಕ್‌ನಲ್ಲಿತ್ತು ಎಂದರು.
ಇದನ್ನೂ ಓದಿ: Met Gala 2024: ಮೆಟ್ ಗಾಲಾದಲ್ಲಿ ಆಲಿಯಾ ಹಾಜರಿ: ಪ್ರಿಯಾಂಕಾ ಚೋಪ್ರಾ ಗೈರು!
2018ರಲ್ಲಿ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ 2022ರ ಜನವರಿಯಲ್ಲಿ ತಮಗೆ ಹೆಣ್ಣುಮಗು ಹುಟ್ಟಿದ್ದಾಗಿ ತಿಳಿಸಿದ್ದರು. ಹಾಗೇ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾಗಿಯೂ ಹೇಳಿದ್ದರು. ಈ ಒಂದು ವರ್ಷದಲ್ಲಿ ಪ್ರಿಯಾಂಕಾ ಚೋಪ್ರಾ ಮಗುವನ್ನು ಎತ್ತಿಕೊಂಡಿರುವ ಫೋಟೊಗಳು ವೈರಲ್ ಆಗಿದ್ದರೂ ಕೂಡ ಮಗುವಿನ ಮುಖ ಬಹಿರಂಗವಾಗಿರಲಿಲ್ಲ. ಬಳಿಕ ಪ್ರಿಯಾಂಕಾ ಮಗುವಿನ ಮುಖವನ್ನು ರಿವೀಲ್ ಮಾಡಿದರು.
ಕೆಲವು ದಿನಗಳ ಹಿಂದೆ ಪ್ರಿಯಾಂಕ ಚೋಪ್ರಾ (Priyanka Chopra) ತಮ್ಮ ಸಹೋದರ ಸಿದ್ಧಾರ್ಥ ಅವರ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಭಾಗಿಯಾಗಿದ್ದರು.ಸಿದ್ಧಾರ್ಥ ಹಾಗೂ ನೀಲಂ ಎಂಗೇಜ್ ಮೆಂಟ್ ನಲ್ಲಿ ಕುಟುಂಬದ ಸದಸ್ಯರು ಹಾಗೂ ಒಂದಷ್ಟು ಆತ್ಮೀಯ ಸ್ನೇಹಿತರು ಪಾಲ್ಗೊಂಡಿದ್ದರು. ಸಿದ್ದಾರ್ಥ ಹಾಗೂ ನೀಲಂ ಜೋಡಿಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಈ ಸಂದರ್ಭದಲ್ಲಿ ಪ್ರಿಯಾಂಕ ದಂಪತಿಗಳ ಜೊತೆ ತಾಯಿ ಮಧು ಚೋಪ್ರಾ, ಸೋದರ ಸಂಬಂಧಿ ಮನ್ನಾರ್ ಚೋಪ್ರಾ, ಆತ್ಮೀಯ ಸ್ನೇಹಿತೆ ತಮನ್ನಾ ದತ್ ಪಾಲ್ಗೊಂಡಿದ್ದರು. ಇನ್ನು ಸಾಂಪ್ರಾಯಿಕ ಉಡುಗೆಯಲ್ಲಿ ಕಂಗೊಳಿಸಿದ ಪ್ರಿಯಾಂಕ ಕುಟುಂಬದ ಫೋಟೊ ಸಖತ್ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.