Site icon Vistara News

Madhubala Biopic: ಸಿನಿಮಾ ಆಗ್ತಿದೆ ಮಧುಬಾಲಾ ಬಯೋಪಿಕ್: ಹಿರೋಯಿನ್‌ ಯಾರು?

Madhubala Biopic Is In The Works

ಬೆಂಗಳೂರು: ನಟಿ ಮಧುಬಾಲಾ (Madhubala Biopic) ಅವರ ಬದುಕಿನ ವಿವರವನ್ನು ಆಧರಿಸಿ ಸಿನಿಮಾ ನಿರ್ಮಾಣ ಆಗಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಜಸ್ಮೀತ್​ ಕೆ. ರೀನ್ (Jasmeet K, Reen)​ ಅವರ ನಿರ್ದೇಶನದಲ್ಲಿ ʻಮಧುಬಾಲಾʼ ಬಯೋಪಿಕ್​ ಮೂಡಿಬರಲಿದೆ. ‘ಸೋನಿ ಪಿಕ್ಚರ್ಸ್​ ಇಂಟರ್​ನ್ಯಾಷಲ್​ ಪ್ರೊಡಕ್ಷನ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ.

ಈ ಪ್ರಾಜೆಕ್ಟ್‌ವನ್ನು ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ಸ್ ಮತ್ತು ಬ್ರೂಯಿಂಗ್ ಥಾಟ್ಸ್ ಪ್ರೈ. ಲಿಮಿಟೆಡ್, ಮಧುಬಾಲಾ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಮಧುಬಾಲಾ ಅವರ ಸಹೋದರಿಯರಾದ ಮಧುರ್ ಬ್ರಿಜ್ ಭೂಷಣ್ ಮತ್ತು ಅರವಿಂದ್ ಕುಮಾರ್ ಮಾಳವಿಯಾ ಅವರ ಸಹ-ನಿರ್ಮಾಣದೊಂದಿಗೆ ಘೋಷಣೆ ಮಾಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ಗೆ ಶೀರ್ಷಿಕೆ ನೀಡಿ, “ಎಕ್ಸೈಟಿಂಗ್ ನ್ಯೂಸ್! ಮಧುಬಾಲಾ ಅವರನ್ನು ಗೌರವಿಸುವ ನಮ್ಮ ಮುಂಬರುವ ಸಿನಿಮಾವನ್ನು ಘೋಷಿಸಲು ನಾವು ರೋಮಾಂಚನಗೊಂಡಿದ್ದೇವೆʼʼಎಂದು ಬರೆದುಕೊಂಡಿದೆ.

ಈ ಸಿನಿಮಾಗೆ ಕೃತಿ ಸನೂನ್ ನಾಯಕಿಯಾಗಲಿದ್ದಾರೆ ಎಂಬ ವದಂತಿಗಳಿವೆ. ಆಲಿಯಾ ಭಟ್​, ಶೆಫಾಲಿ ಶಾ ಮತ್ತು ವಿಜಯ್​ ವರ್ಮಾ ನಟನೆಯ ‘ಡಾರ್ಲಿಂಗ್ಸ್​’ ಸಿನಿಮಾ ಜನಮನ ಗೆದ್ದಿದೆ. ಈಗ ಜಸ್ಮೀತ್​ ಕೆ. ರೀನ್​ ಅವರು ಮಧುಬಾಲಾ ಜೀವನಾಧಾರಿತ ಸಿನಿಮಾಗೆ ನಿರ್ದೇಶನ ಮಾಡುವ ಅವಕಾಶ ಪಡೆದಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ: Arbbie Movie: ಅಣ್ಣಾಮಲೈ ನಟಿಸಿದ ಮೊದಲ ಕನ್ನಡದ ಸಿನಿಮಾ ಟ್ರೈಲರ್‌ ಔಟ್‌!

ಎರಡು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ಮಧುಬಾಲಾ ಅವರು ಸರಿಸುಮಾರು 60 ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಭಾರತೀಯ ಚಿತ್ರರಂಗದ ʻಶುಕ್ರʼ ಎಂದು ಕರೆಯಲ್ಪಟ್ಟ ಮಧುಬಾಲಾ, ಅವರ ಅವರ ಸೌಂದರ್ಯ ಮತ್ತು ಅಭಿನಯಕ್ಕಾಗಿ ಜನರು ಮನ ಸೋತಿದ್ದರು. 36ನೇ ವಯಸ್ಸಿನಲ್ಲಿ ಅವರು ಹೃದಯಾಘಾತದಿಂದ ನಿಧನರಾದರು. ಅವರ ಅಕಾಲಿಕ ಮರಣವು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತು. ಸಿನಿಮಾ ಮಾತ್ರವಲ್ಲದೇ ಮಧುಬಾಲಾ ಅವರ ಖಾಸಗಿ ಜೀವನ ಕೂಡ ಆಗಾಗ ಸುದ್ದಿ ಆಗುತ್ತಿತ್ತು. ನಟ ದಿಲೀಪ್​ ಕುಮಾರ್​ ಜೊತೆ ಅವರು ಹೊಂದಿದ್ದ ನಂಟಿನ ವಿಚಾರ ಕೂಡ ಬಹಿರಂಗ ಆಗಿತ್ತು. 

ʻಮಿಸ್ಟರ್ ಆ್ಯಂಡ್ ಮಿಸೆಸ್ 55ʼ, ʻಹಾಫ್ ಟಿಕೆಟ್ʼ, ʻಮುಘಲ್-ಎ-ಆಜಮ್ʼ, ಮಹಲ್ ಮತ್ತು ಬಾದಲ್ ಮುಂತಾದ ಚಿತ್ರಗಳಲ್ಲಿ ನಟಿ ಅಭಿನಯಿಸಿದ್ದಾರೆ. ಮಧುಬಾಲಾ ಬಯೋಪಿಕ್‌ನ ಕಾಸ್ಟಿಂಗ್ ವಿವರಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ,

Exit mobile version