Site icon Vistara News

Madhuri Dixit: ಲೈಂಗಿಕ ಕಿರುಕುಳ ದೃಶ್ಯದಲ್ಲಿ ನಟಿಸಲಾರೆ ಎಂದು ಗೋಳೋ ಎಂದು ಅತ್ತಿದ್ದ ಮಾಧುರಿ ದೀಕ್ಷಿತ್!

Madhuri Dixit Cried Refused to Do Molestation Scene

ಬೆಂಗಳೂರು: ʻಪ್ರೇಮ್ ಪ್ರತಿಜ್ಞಾʼ ( Prem Pratigya) 1989ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಸಿನಿಮಾ. ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಮಾಧುರಿ ದೀಕ್ಷಿತ್ (Madhuri Dixit), ರಂಜೀತ್, ದಿವಂಗತ ವಿನೋದ್ ಮೆಹ್ರಾ ಮತ್ತು ದಿವಂಗತ ಸತೀಶ್ ಕೌಶಿಕ್ ನಟಿಸಿದ್ದರು. ಸಂದರ್ಶನವೊಂದರಲ್ಲಿ ಈ ಸಿನಿಮಾದ ವಿಲನ್‌ ಪಾತ್ರ ನಿಭಾಯಿಸಿದ್ದ ರಂಜೀತ್ ಅವರು ಸಿನಿಮಾದಲ್ಲಿ ಲೈಂಗಿಕ ಕಿರುಕುಳ ನೀಡುವ ದೃಶ್ಯ (Molestation Scene) ನಿಭಾಯಿಸಬೇಕಿತ್ತು. ಈ ದೃಶ್ಯ ಮಾಡಲು ಮಾಧುರಿ ದೀಕ್ಷಿತ್ ನಿರಾಕರಿಸಿದ ಘಟನೆಯ ಬಗ್ಗೆ ರಂಜೀತ್ ಮಾತನಾಡಿದ್ದಾರೆ.

ರಂಜೀತ್ ಮಾಧ್ಯಮವೊಂದರಲ್ಲಿ ಬಗ್ಗೆ ಮಾತನಾಡಿ ʻʻಸಿನಿಮಾದಲ್ಲಿ ಲೈಂಗಿಕ ಕಿರುಕುಳ ನೀಡುವ ದೃಶ್ಯ ನಿಭಾಯಿಸಬೇಕಿತ್ತು. ಆದರೆ ಮಾಧುರಿ ಅವರು ಈ ದೃಶ್ಯಕ್ಕೆ ನಟಿಸಲು ಒಪ್ಪಿಗೆ ಇಲ್ಲ ಎಂದು ಅಳಲು ಶುರು ಮಾಡಿದ್ದರು. ಆದರೆ ನನಗೆ ಪರಿಸ್ಥಿತಿಯ ಬಗ್ಗೆ ತಿಳಿದಿರಲಿಲ್ಲ. ಕೆಲವು ಕಲಾ ನಿರ್ದೇಶಕರು ನನಗೆ ಈ ರೀತಿ ನಟಿ ಅಳುತ್ತಿದ್ದಾರೆ ಎಂದು ಹೇಳಿದರು. ಅಲ್ಲಿ ಒಬ್ಬ ಬಂಗಾಳಿ ಕಲಾ ನಿರ್ದೇಶಕ ಇದ್ದರು. ನಮ್ಮ ನಿರ್ದೇಶಕ ಬಾಪು ಅವರು ದಕ್ಷಿಣದವರು. ನಾನು ಕೂಡ ಸೆಟ್‌ಗಳಲ್ಲಿ ಆರಾಮದಾಯಕವಾಗಿ ಮೋಜು ಮಾಡಿಕೊಂಡು ಇರುತ್ತಿದ್ದೆ. ಹಾಗೇ ನನಗೆ ಮೇಕ್ಅಪ್ ರೂಮ್‌ಗೆ ಹೋಗುವ ಅಭ್ಯಾಸವೂ ಇರಲಿಲ್ಲ. ತುಂಬಾ ನಾರ್ಮಲ್‌ ಆಗಿರುತ್ತಿದ್ದೆ. ಇಲ್ಲದಿದ್ದರೆ, ಉಳಿದವರು ನಮ್ಮನ್ನು ಫೇಕ್‌ ಎಂದು ಬಿಡುತ್ತಾರೆʼʼ ಎಂದರು.

ಇದನ್ನೂ ಓದಿ: Madhuri Dixit: ಮಾಧುರಿ ದೀಕ್ಷಿತ್‌ ʼಎದೆ ಕುಣಿತʼ ನೋಡಿ ಬೆಚ್ಚಿಬಿದ್ದಿದ್ದ ಸೆನ್ಸಾರ್‌ ಮಂಡಳಿ!

ಮಾತು ಮುಂದುವರಿಸಿ ʻʻಹೀಗೆ ಸೆಟ್‌ನಲ್ಲಿ ದೃಶ್ಯ ಶೂಟ್‌ ಮಾಡಲು ತಯಾರಾದೆವು. ಕಥೆಯಲ್ಲಿ ಮಾಧುರಿಯ ತಂದೆ ತುಂಬ ಬಡವರಾಗಿರುತ್ತಾರೆ. ಚಿತ್ರದಲ್ಲಿ ಮಾಧುರಿಯ ತಂದೆ ಕೈಗಾಡಿ ಎಳೆಯುವರಾಗಿರುತ್ತಾರೆ. ಅದೇ ಕೈಗಾಡಿ ಮೇಲೆ ಲೈಂಗಿಕ ಕಿರುಕುಳ ನೀಡುವ ದೃಶ್ಯ ಮಾಡಬೇಕಿತ್ತು. ನಾನು ಕೂಡ ಮಾಧುರಿ ಅವರು ಬರುವುದನ್ನೇ ಕಾಯುತ್ತಿದ್ದೆ. ಒಳಗಡೆ ಏನಾಗುತ್ತಿದೆ! ಅವರು ಒಪ್ಪಿದರೇ, ಬಿಟ್ಟರೇ ಎಂದು ತಿಳಿಯುತ್ತಿರಲಿಲ್ಲ. ಯಾರೂ ನನಗೆ ಏನಾಗುತ್ತಿದೆ ಎಂದು ಹೇಳಲಿಲ್ಲ. ಕೊನೆಗೂ ಮಾಧುರಿ ಅವರು ಹೊರಗಡೆ ಬಂದರು. ದೃಶ್ಯವನ್ನು ಚಿತ್ರೀಕರಿಸಲಾಯ್ತು. ವೀರು ದೇವಗನ್ ಫೈಟ್ ಮಾಸ್ಟರ್ ಅವರು ಯಾವುದೇ ಕಟ್‌ ತೆಗೆದುಕೊಳ್ಳದೇ ಒಂದೇ ಶಾಟ್‌ನಲ್ಲಿ ಮಾಡಿ ಮುಗಿಸಿದರುʼʼ ಎಂದರು.

Exit mobile version