Site icon Vistara News

Alia Bhatt: ಪುತ್ರಿಯರಿಗೆ ಮುಸ್ಲಿಂ ಹೆಸರುಗಳನ್ನು ಇಟ್ಟಾಗ ನನ್ನ ತಾಯಿಗೆ ಚಿಂತೆಯಾಗಿತ್ತು ಎಂದ ಆಲಿಯಾ ಭಟ್‌ ತಂದೆ!

Mahesh Bhatt said his mother was worried after he gave daughters Muslim names

ಬೆಂಗಳೂರು: ಬಾಲಿವುಡ್‌ ನಟಿ ಆಲಿಯಾ ಭಟ್ (Alia Bhatt) ಅವರ ತಂದೆ ಮಹೇಶ್ ಭಟ್ ಆಗಾಗ ವೈಯಕ್ತಿಕ ಹೇಳಿಕೆ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಮಹೇಶ್ ಅವರ ತಂದೆ ನಾನಾಭಾಯ್ ಭಟ್ ಗುಜರಾತಿ ಬ್ರಾಹ್ಮಣರಾಗಿದ್ದರು ಮತ್ತು ತಾಯಿ ಶಿರಿನ್ ಮೊಹಮ್ಮದ್ ಅಲಿ ಮುಸ್ಲಿಂ. ತಮ್ಮ ಹೆಣ್ಣುಮಕ್ಕಳಾದ ಆಲಿಯಾ ಮತ್ತು ಶಾಹೀನ್‌ ಭಟ್ ಅವರಿಗೆ ಮುಸ್ಲಿಂ ಹೆಸರುಗಳನ್ನು ಇಟ್ಟಾಗ ಮಹೇಶ್‌ ಭಟ್‌ (Alia Bhatt and Shaheen) ತಾಯಿ ಚಿಂತಿತರಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

ಮಹೇಶ್ ಭಟ್‌ ಹಳೆಯ ಸಂದರ್ಶನವೊಂದರಲ್ಲಿ ತಮ್ಮ ಕುಂಟುಂಬದ ಬಗ್ಗೆ ಹೇಳಿಕೊಂಡಿದ್ದರು. ʻʻನನ್ನ ತಾಯಿ ಮುಸ್ಲಿಂ ಆಗಿದ್ದರೆ, ತಂದೆ ಜನಿವಾರ ಧರಿಸಿದ್ದರು. ಇಬ್ಬರೂ (ತಂದೆ ಮತ್ತು ತಾಯಿ) ತಮ್ಮ ವೈಯಕ್ತಿಕ ನಂಬಿಕೆಗಳನ್ನು ಉಳಿಸಿಕೊಂಡು ಬಂದರುʼʼಎಂದು ಹೇಳಿಕೊಂಡಿದ್ದಾರೆ.

“ನನ್ನ ತಾಯಿ ಯಾವಾಗಲೂ ದೊಡ್ಡದ್ದಾಗಿ ಹಣೆಗೆ ಬಿಂದಿ ಇಡುತ್ತಿದ್ದರು ಮತ್ತು ಸೀರೆಯನ್ನು ಧರಿಸುತ್ತಿದ್ದರು. ಅದೇ ಸಮಯದಲ್ಲಿ, ಅವರು ಏನೋ ಮರೆಮಾಚುವಂತೆ ನನಗೆ ಅನ್ನಿಸುತ್ತಿತ್ತು. ನಮ್ಮ ದೈನಂದಿನ ಜೀವನದಲ್ಲಿ ಅವಳ ಜಾತಿ ಎಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ಅವರು ಭಾವಿಸಿದ್ದರು. 1992 ರಲ್ಲಿ ನಡೆದ ಕೋಮುಗಲಭೆಗಳ ಸಮಯದಲ್ಲಿ ಹೆಚ್ಚು ಚಿಂತಿತಳಾಗಿದ್ದಳು. ಆಲಿಯಾಗೆ ಮುಸ್ಲಿಂ ಹೆಸರನ್ನು ಇಟ್ಟಾಗ ಮತ್ತಷ್ಟು ಚಿಂತಿತಳಾದಳು. ನನ್ನ ಎರಡನೇ ಹೆಂಡತಿ (ಸೋನಿ ರಜ್ದಾನ್) ಆಲಿಯಾ ಹೆಸರನ್ನು ಇಷ್ಟಪಟ್ಟರುʼʼಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?

1970 ರಲ್ಲಿ, ಮಹೇಶ್ ಲೋರೆನ್ ಬ್ರೈಟ್ ಅವರನ್ನು ವಿವಾಹವಾದರು (ನಂತರದ ಹೆಸರು ಕಿರಣ್ ಭಟ್ ಎಂದು ಬದಲಾಯಿತು), ಅವರಿಗೆ ಇಬ್ಬರು ಮಕ್ಕಳಿದ್ದರು. ರಾಹುಲ್ ಮತ್ತು ಪೂಜಾ ಭಟ್. 1986ರಲ್ಲಿ ನಟ ಸೋನಿ ರಜ್ದಾನ್ ಅವರನ್ನು ವಿವಾಹವಾದರು. ಆಗ ಶಾಹೀನ್ ಮತ್ತು ಆಲಿಯಾ ಭಟ್ ಜನಿಸಿದರು. ಆಲಿಯಾ ಮಾರ್ಚ್ 1993 ರಲ್ಲಿ ಜನಿಸಿದರು. ಇದೀಗ ನಟ ರಣಬೀರ್ ಕಪೂರ್ ಅವರನ್ನು ವಿವಾಹವಾಗಿದ್ದಾರೆ.

ಹಿಂದಿಯಲ್ಲಿ ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ಕೂಡ ಅಕ್ಟೋಬರ್​ನಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೆ ರಾಜ್​ಕುಮಾರ್ ರಾವ್ ಹಾಗೂ ತೃಪ್ತಿ ದಮ್ರಿ ನಟನೆಯ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಹಾಗೂ ಶಾಹಿದ್ ಕಪೂರ್-ಪೂಜಾ ಹೆಗ್ಡೆ ನಟನೆಯ ‘ದೇವ’ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ.

Exit mobile version