ಬೆಂಗಳೂರು: ಬ್ರೇಕಪ್ ವದಂತಿಗಳ ಬಳಿಕ, ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ (Malaika Arora) ಶುಕ್ರವಾರ ದೆಹಲಿಯಲ್ಲಿ ನಡೆದ ಇಂಡಿಯಾ ಕೌಚರ್ ವೀಕ್‌ನಲ್ಲಿ ಡಿಸೈನರ್ ಕುನಾಲ್ ರಾವಲ್ ಅವರ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈವೆಂಟ್‌ನಲ್ಲಿ ಜೋಡಿಯ ಹಲವಾರು ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ವೈರಲ್ ಆಗಿವೆ. ಆದರೆ ಇಬ್ಬರೂ ಒಂದೇ ಈವೆಂಟ್‌ನಲ್ಲಿ ಭಾಗಿಯಾಗಿದ್ದರೂ ಈಗ ಪರಸ್ಪರ ದೂರ ಆಗಿದ್ದಾರೆ.ಇಬ್ಬರೂ ಒಂದೇ ವೇದಿಕೆ ಏರಿದ್ದಾರೆ. ಆದರೆ, ಒಬ್ಬರಿಗೊಬ್ಬರು ನಿರ್ಲಕ್ಷಿಸಿದ್ದಾರೆ. ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡಿಲ್ಲ.
ವೀಡಿಯೊವೊಂದರಲ್ಲಿ, ಅರ್ಜುನ್ ಕಪೂರ್ ಮತ್ತು ಮಲೈಕಾ ಮುಂದಿನ ಸಾಲಿನಲ್ಲಿ ಕುಳಿತಿದ್ದಾರೆ. ಪರಸ್ಪರ ಅಕ್ಕ ಪಕ್ಕದಲ್ಲಿ ಕುಳಿತುಕೊಳ್ಳಲಿಲ್ಲ. ಮತ್ತೊಂದು ಕ್ಲಿಪ್‌ನಲ್ಲಿ, ಅರ್ಜುನ್ ಕಪೂರ್ ಎದುರಲ್ಲೇ ಮಲೈಕಾ ಹಾದು ಹೋಗಿದ್ದಾರೆ. ಈ ವೇಳೆ ಅಭಿಮಾನಿಗಳು ಮುತ್ತಿಕೊಳ್ಳದಂತೆ ತಡೆದಿದ್ದಾರೆ ಅರ್ಜುನ್ ಕಪೂರ್. ಆದರೆ, ಇದನ್ನು ಮಲೈಕಾ ಅರೋರಾ ಗಮನಿಸಿಯೂ ಇಲ್ಲ. ಅವರು ನೇರವಾಗಿ ಹೊರಟು ಹೋಗಿದ್ದಾರೆ. ಈ ಮೂಲಕ ಬ್ರೇಕಪ್ ವಿಚಾರ ಖಚಿತವಾಗಿದೆ. ಸ್ವತಃ ಮಲೈಕಾ ಅವರೇ ಬ್ರೇಕಪ್ ಮಾಡಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ಅರ್ಜುನ್ ಕಪೂರ್‌ಗೆ ಮಲೈಕಾ ಮೇಲೆ ಇನ್ನೂ ಕಾಳಜಿ ಇದೆ. ಆದರೆ, ಈ ಕಾಳಜಿ ಮಲೈಕಾಗೆ ಇಲ್ಲ.
ಈವೆಂಟ್‌ಗಾಗಿ, ಮಲೈಕಾ ವೈಟ್ ಬ್ಲೇಜರ್ ಕೋ-ಆರ್ಡರ್ ಸೆಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅರ್ಜುನ್ ಕಪ್ಪು ಶೆರ್ವಾನಿ ಮತ್ತು ಧೋತಿ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: Malaika Arora: 38ರ ಅರ್ಜುನ್ ಕಪೂರ್‌ಗೆ 50ರ ಮಲೈಕಾ ಅರೋರಾ ಸಹವಾಸ ಸಾಕಾಯ್ತಾ?!
ಮಲೈಕಾ ಮತ್ತು ಅರ್ಜುನ್ ʼವಿಶೇಷವಾದ ಸಂಬಂಧʼವನ್ನು ಹೊಂದಿದ್ದರು. ಇಬ್ಬರೂ ಪರಸ್ಪರರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೆ ಇದೀಗ ಜೋಡಿ ಬೇರೆಯಾಗಬೇಕು ಎಂದು ನಿರ್ಧರಿಸಿದೆ. ಇಷ್ಟೂ ವರ್ಷಗಳಲ್ಲಿ, ಅವರು ತಮ್ಮ ಸಂಬಂಧಕ್ಕೆ ಗೌರವವನ್ನು ನೀಡಿದ್ದಾರೆ. ಒಂದು ವೇಳೆ ಬೇರೆಯಾಗಲು ನಿರ್ಧರಿಸಿದರೂ ಪರಸ್ಪರ ಅದೇ ಗೌರವವನ್ನು ಕಾಪಾಡಿಕೊಂಡು ಹೋಗುತ್ತಾರೆ ಎಂದು ವರದಿಯಾಗಿದೆ.
11 ವರ್ಷಗಳ ಅಂತರ
ಮಲೈಕಾ ಅರೋರಾ ಅವರಿಗೆ ಈಗ 50 ವರ್ಷ. ಅರ್ಜುನ್ ಕಪೂರ್‌ಗೆ 38. ಇಬ್ಬರ ಮಧ್ಯೆ ಸುಮಾರು 11 ವರ್ಷಗಳ ಅಂತರ ಇದೆ. ಅರ್ಜುನ್ ಕಪೂರ್ ವಯಸ್ಸಿನಲ್ಲಿ ಸಣ್ಣವರು. ಮಾತ್ರವಲ್ಲ ಕೆಲವು ದಿನಗಳಿಂದ ಮಗು ವಿಚಾರವಾಗಿ ಸಾಕಷ್ಟು ಟ್ರೋಲ್ ಆಗಿತ್ತು ಜೋಡಿ. ಮಲೈಕಾ ಹಾಗೂ ಅರ್ಜುನ್ ಕಪೂರ್‌ಗೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇತ್ತು. ಆದರೆ, ಈ ಬಗ್ಗೆ ಈ ಜೋಡಿ ಮೌನ ವಹಿಸಿದ್ದರು.
ಇತ್ತೀಚಿನ ವರದಿಗಳ ಪ್ರಕಾರ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನಲಾಗಿದೆ. ಅರ್ಜುನ್ ಕಪೂರ್ ಕುಟುಂಬದವರನ್ನು ಅನ್ಫಾಲೋ ಮಾಡಿದ್ದಾರೆ ಮಲೈಕಾ ಅರೋರಾ. ಅಷ್ಟೇ ಅಲ್ಲದೇ ಅರ್ಜುನ್ ಕಪೂರ್ ಈಗ ನಟಿ ಕುಶಾ ಕಪಿಲಾ (Kusha Kapila) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂತಲೂ ವರದಿಗಳಿವೆ.
ಈ ಮೊದಲು ಮಲೈಕಾ ಅವರು ಅರ್ಜುನ್ ಕಪೂರ್ ತಂದೆ ಬೋನಿ ಕಪೂರ್, ಕುಟುಂಬದ ಇತರ ಸದಸ್ಯರಾದ ಅನಿಲ್ ಕಪೂರ್, ಜಾನ್ವಿ ಕಪೂರ್, ಖುಷಿ ಕಪೂರ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಫಾಲೋ ಮಾಡುತ್ತಿದ್ದರು. ಆದರೆ, ಇವರುಗಳನ್ನು ಮಲೈಕಾ ಅನ್ಫಾಲೋ ಮಾಡಿದ್ದಾರೆ. ಆದರೆ, ಅರ್ಜುನ್ ಕಪೂರ್ ಅವರನ್ನು ಈಗಲೂ ಅವರು ಫಾಲೋ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿರುವ ಕರಣ್ ಜೋಹರ್ ಅವರ ಮನೆಯಲ್ಲಿ ಅರ್ಜುನ್ ಮತ್ತು ಕುಶಾ ಒಟ್ಟಿಗೆ ಪಾರ್ಟಿ ಮಾಡಿದ್ದಾಗಿನಿಂದಲೂ ಸಂಬಂಧದ ವದಂತಿಗಳು ಪ್ರಾರಂಭವಾದವು.
ಮಲೈಕಾ ಈ ಹಿಂದೆ ನಟ, ನಿರ್ಮಾಪಕ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು. ಇಬ್ಬರು 2016ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಅವರಿಗೆ ಅರ್ಹಾನ್ ಖಾನ್ ಹೆಸರಿನ ಮಗನಿದ್ದಾನೆ. ಮಲೈಕಾ ಮತ್ತು ಅರ್ಜುನ್ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, 2019ರಲ್ಲಿ ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.