ಬೆಂಗಳೂರು: ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಅವರು ತಮ್ಮ ಮಾಜಿ ಪತಿ ಅರ್ಬಾಜ್ ಖಾನ್ ಅವರೊಂದಿಗೆ ಶುಕ್ರವಾರ (ಮಾ.29) ರಾತ್ರಿ ಮಗ ಅರ್ಹಾನ್ ಖಾನ್ (Arbaaz Khan) ಅವರ ಹುಟ್ಟುಹಬ್ಬದ ಗ್ರ್ಯಾಂಡ್ ಪಾರ್ಟಿಯನ್ನು ಆಯೋಜಿಸಿದ್ದರು. ಅರ್ಹಾನ್ ಅವರ ಹುಟ್ಟುಹಬ್ಬದ ಪಾರ್ಟಿಯ (Arhaan’s birthday bash ) ಹಲವಾರು ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಬಹು ವಿಶೇಷವಾಗಿ ವಿಡಿಯೊವೊಂದು ವೈರಲ್ ಆಗಿದೆ. ಅರ್ಬಾಜ್ ಖಾನ್ ಅವರ ತಂದೆ ಸಲೀಂ ಖಾನ್ ಜತೆ ಮಲೈಕಾ ಅರೋರಾ ಅವರ ತಾಯಿ ಕಂಡರು.
ಕ್ಲಿಪ್ನಲ್ಲಿ, ಅರ್ಬಾಜ್ ಖಾನ್ ಅವರ ತಂದೆ ಸಲೀಂ ಖಾನ್ ತಮ್ಮ ಕಾರಿನಿಂದ ಇಳಿಯುತ್ತಿರುವುದು ಕಾಣಬಹುದು. ಆಶ್ಚರ್ಯದ ಸಂಗತಿಯೆಂದರೆ ಮಲೈಕಾ ಅರೋರಾ ಅವರ ತಾಯಿ ಜಾಯ್ಸ್ ಪಾಲಿಕಾರ್ಪ್ (Joyce Polycarp) ಕೂಡ ಅದೇ ಕಾರಿನೊಳಗೆ ಕುಳಿತ್ತಿದ್ದರು. ಇದೀಗ ಇಬ್ಬರೂ ಒಟ್ಟಿಗೆ ಇರುವುದುನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಕಮೆಂಟ್ ಮೂಲಕ ಅಚ್ಚರಿ ಹೊರ ಹಾಕಿದ್ದಾರೆ.
ಅರ್ಬಾಜ್ ಖಾನ್ ಮಲೈಕಾ ಅರೋರಾ (Malaika Arora) ಅವರನ್ನು ಮದುವೆಯಾಗಿ 19 ವರ್ಷಗಳಾಗಿವೆ. ಈ ಜೋಡಿ 1998 ರಲ್ಲಿ ವಿವಾಹವಾದರು. ಮಾರ್ಚ್ 2016 ರಲ್ಲಿ ತಮ್ಮ ಪ್ರತ್ಯೇಕತೆವಾಗುವುದನ್ನೂ ಘೋಷಿಸಿದ್ದರು. ಮೇ 2017 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. ಅವರಿಗೆ ಅರ್ಹಾನ್ ಎಂಬ ಮಗನಿದ್ದಾನೆ. ಮಗ ಅರ್ಹಾನ್ಗೆ ಪೋಷಕರಾಗಿ ಮುಂದುವರಿಯಲಿದ್ದೇವೆ ಎಂದು ದಂಪತಿ ಹೇಳಿಕೊಂಡಿದ್ದರು. ಈಗಾಗಲೇ ಅರ್ಬಾಜ್ ಖಾನ್ ಶುರಾ ಖಾನ್ ಅವರನ್ನು ಮದುವೆಯಾಗಿದ್ದಾರೆ. ಹೀಗಿರುವಾಗಲೂ ಮಲೈಕಾ ಅವರ ತಾಯಿ ಅರ್ಬಾಜ್ ಖಾನ್ ಅವರ ತಂದೆ ಜತೆ ಇರುವುದನ್ನು ಕಂಡು ನೆಟ್ಟಿಗರು ಬಗೆ ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Malaika Arora: ಅರ್ಜುನ್ ಕಪೂರ್ ಫ್ಯಾಮಿಲಿ ಅನ್ಫಾಲೊ ಮಾಡಿದ ಮಲೈಕಾ; ಬ್ರೇಕಪ್ ನಿಜಾನಾ?
ವೈರಲ್ ವಿಡಿಯೊ
ಎರಡನೇ ಮದುವೆಯಾದ ಅರ್ಬಾಜ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮತ್ತು ಮೇಕಪ್ ಕಲಾವಿದೆ ಶುರಾ ಖಾನ್ 2023ರ ಡಿಸೆಂಬರ್ 24 ರಂದು ವಿವಾಹವಾದರು. ಸಹೋದರರಾದ ಸಲ್ಮಾನ್ ಖಾನ್ ಮತ್ತು ಸೊಹೈಲ್ ಖಾನ್, ಪೋಷಕರಾದ ಸಲೀಮ್ ಖಾನ್ ಮತ್ತು ಸಲ್ಮಾ ಖಾನ್ ಮತ್ತು ಮಗ ಅರ್ಹಾನ್ ಖಾನ್ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಹಾಜರಿತ್ತು. ಮಲೈಕಾ ಈಗ ಅರ್ಜುನ್ ಕಪೂರ್ ಅವರ ಜತೆ ಡೇಟಿಂಗ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Malaika Arora: ʻಚೈಯಾ ಚೈಯಾʼ ಹಾಡಿಗೆ ಮಲೈಕಾ ಅರೋರಾ ಸೆಕ್ಸಿ ಮೂವ್ಸ್!
ವಿಚ್ಛೇದನದ ನಂತರ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ಮಲೈಕಾ
ವಿಚ್ಛೇದನದ ನಂತರ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ಮಲೈಕಾ, ʻʻಸಂಬಂಧ ಯಾವಾಗಲೂ ಕಠಿಣವಾಗಿರುತ್ತದೆ. ನೀವು ಯಾವಾಗಲೂ ಬಹಳಷ್ಟು ವಿಷಯಗಳ ಬಗ್ಗೆ ಒಂದೇ ತೆರನಾಗಿರುವುದಿಲ್ಲ ವಿಶೇಷವಾಗಿ ನೀವು ನಿಮ್ಮ ಪ್ರತ್ಯೇಕ ಮಾರ್ಗಗಳಲ್ಲಿ ಹೋದಾಗ ಅಭಿಪ್ರಾಯ ಬೇರೆಯಾಗುತ್ತವೆ ಎಂದು ಹೇಳಿದ್ದರು. ಆದಾಗ್ಯೂ, ಅವರು ತಮ್ಮ ಮಾಜಿ ಪತಿಯನ್ನು ಶ್ಲಾಘಿಸಿದ್ದರು. ಅರ್ಬಾಜ್ ಮತ್ತು ನಾನು ಇಬ್ಬರೂ ಇಂದು ಮುಕ್ತರು. ನಾವು ಸಹಬಾಳ್ವೆ ನಡೆಸಬಹುದು. ನಮ್ಮ ಪ್ರೀತಿಯನ್ನು ಕಳೆದುಕೊಳ್ಳುವುದಿಲ್ಲ. ನಮ್ಮ ಮಗುವಿನ ಕಡೆಗೆ ಗಮನವನ್ನು ನೀಡಬಹುದುʼʼ ಎಂದು ಮಲೈಕಾ ಹೇಳಿದ್ದರು.