ಬೆಂಗಳೂರು: ನಟಿ ಆಲಿಯಾ ಭಟ್ (Alia Bhatt) ಈಗಾಗಲೇ ಭಾರತದ ಹಲವರ ಮನಸ್ಸು ಗೆದ್ದಿರುವ ನಟಿ. 2022ರಲ್ಲಿ ನಟಿ ಹಿಂದಿ ಚಿತ್ರೋದ್ಯಮದಲ್ಲಿ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ವಿಶ್ವದ ಸೆಲೆಬ್ರಿಟಿಗಳ ಅತ್ಯಂತ ದೊಡ್ಡ ಫ್ಯಾಷನ್ ಕಾರ್ಯಕ್ರಮವಾದ ಮೆಟ್ ಗಾಲಾದ ( Met Gala 2024) ರೆಡ್ ಕಾರ್ಪೆಟ್ ಮೇಲೆ ಹಿಂದಿನ ವರ್ಷ ಆಲಿಯಾ ಹೆಜ್ಜೆ ಹಾಕಿದ್ದರು. ಈ ಬಾರಿಯೂ ನಟಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಮೆಟ್ ಗಾಲಾ 2024ರ ಭಾಗವಾಗಿರುವ ಕೆಲವೇ ಕೆಲವು ಭಾರತೀಯ ಹೆಸರುಗಳಲ್ಲಿ ಆಲಿಯಾ ಭಟ್ ಕೂಡ ಒಬ್ಬರು. ಈ ಈವೆಂಟ್‌ಗೆ ಭಾಗವಾಗುತ್ತಿರುವುದು ಆಲಿಯಾ ಎರಡನೇ ಬಾರಿ. ಮೇ 4ರ ರಾತ್ರಿ ಮುಂಬೈನ ಅಂತಾರಾಷ್ಟ್ರೀಯ ಖಾಸಗಿ ಟರ್ಮಿನಲ್‌ನಿಂದ ನ್ಯೂಯಾರ್ಕ್‌ಗೆ ನಟಿ ಪ್ರಯಾಣಿಸಿರುವುದು ವರದಿಯಾಗಿದೆ.
ಮೆಟ್ ಗಾಲಾ ಈ ಬಾರಿ ನಾಳೆ (ಮೇ.6)ರಂದು ನಡೆಯಲಿದೆ. ಮೆಟ್ ಗಾಲಾ ಅತಿಥಿ ಪಟ್ಟಿಯನ್ನು ಮುಖ್ಯ ಕಾರ್ಯಕ್ರಮದ ಹಿಂದಿನ ಸಂಜೆಯವರೆಗೂ ರಹಸ್ಯವಾಗಿ ಇರಿಸಲಾಗುತ್ತದೆ. ಸುಮಾರು 450 ಜನರು ಈ ಸಮಾರಂಭದಲ್ಲಿ ಪಾಲ್ಗೊಳಲಿದ್ದಾರೆ ಎಂದು ವರದಿಯಾಗಿದೆ. ಹೊಸ ಊಹಾಪೋಹಗಳೆಂದರೆ ಸೆಲೆಬ್ರಿಟಿ ಜೋಡಿ ಟೇಲರ್ ಸ್ವಿಫ್ಟ್ ಮತ್ತು ಟ್ರಾವಿಸ್ ಕೆಲ್ಸೆ ಈ ವರ್ಷ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಲಾರೆನ್ ಸ್ಯಾಂಚೆಜ್, ಕೈಟ್ಲಿನ್ ಕ್ಲಾರ್ಕ್, ಸ್ಯಾಮ್ ಆಲ್ಟ್‌ಮನ್, ಜೆಫ್ ಬೆಜೋಸ್ ಸಹ ಈ ವರ್ಷದ ಮೆಟ್ ಗಾಲಾದಲ್ಲಿ ನಿರೀಕ್ಷಿಸಲಾದ ಕೆಲವು ಹೆಸರುಗಳು. ಪ್ರಿಯಾಂಕಾ ಚೋಪ್ರಾ ಈ ಬಾರಿ ಗೈರಾಗಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Heeramandi Trailer: ʻಹೀರಾಮಂಡಿʼ ಟ್ರೈಲರ್ ಕಂಡು ರಶ್ಮಿಕಾ, ಆಲಿಯಾ, ವಿಕ್ಕಿ ಕೌಶಲ್ ಫಿದಾ!
ಈ ಹಿಂದೆಯೂ ಬಾಲಿವುಡ್‌ನ ಅನೇಕ ನಟಿಯರು ಈ ಮೆಟ್ ಗಾಲಾದ ರೆಡ್ ಕಾರ್ಪೆಟ್‌ನಲ್ಲಿ ವಿಶೇಷವಾದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ನತಾಶಾ ಅವರು ಸಬ್ಯಸಾಚಿ ಸೀರೆ ತೊಟ್ಟು ಅದರೊಂದಿಗೆ ಚಿನ್ನದ ಬಣ್ಣದ ಲೋಹದ ಕೋಟ್ ಧರಿಸಿ ಕಾಣಿಸಿಕೊಂಡಿದ್ದರು. ನಟಿಯ ಈ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಹಾಗೆಯೇ 2017ರಲ್ಲಿ ದೀಪಿಕಾ ಪಡುಕೋಣೆ ಅವರು ಬಿಳಿ ಬಣ್ಣದ ಉಡುಗೆಯಲ್ಲಿ ಮೆಟ್ ಗಾಲಾದ ರೆಡ್ ಕಾರ್ಪೆಟ್ ಮೇಲೆ ಮೊದಲನೇ ಬಾರಿಗೆ ಕಾಣಿಸಿಕೊಂಡಿದ್ದರು. 2018ರಲ್ಲಿ ಮತ್ತೊಮ್ಮೆ ರೆಡ್ ಕಾರ್ಪೆಟ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು. ಆಗ ನಟಿ ಪ್ರಬಲ್ ಗುರುಂಗ್ ಅವರು ವಿನ್ಯಾಸ ಮಾಡಿದ್ದ ಕೆಂಪು ಬಣ್ಣದ ಉಡುಗೆ ತೊಟ್ಟಿದ್ದರು. ಒಂದು ಶೋಲ್ಡರ್‌ನ ಆ ಉಡುಗೆಯ ಫೋಟೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
ಯಾಂಕಾ ಚೋಪ್ರಾ ಅವರು 2017ರಲ್ಲಿ ಮೆಟ್ ಗಾಲಾದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ಈಗಿನ ಪತಿ ನಿಕ್ ಜೋನಾಸ್ ಅವರ ಜತೆಗೆ ಕಾಣಿಸಿಕೊಂಡಿದ್ದರು. ಉದ್ದನೆಯ ವೇಲು ರೀತಿಯಲ್ಲಿ ಬಟ್ಟೆ ಹೊಂದಿರುವ ಟ್ರೆಂಚ್ ಕೋಟ್ ಉಡುಗೆಯಲ್ಲಿ ನಟಿ ಮಿಂಚಿದ್ದರು