Site icon Vistara News

Miss World 2024 Finale: ವಿಶ್ವ ಸುಂದರಿ ಕಿರೀಟ: ರೆಡ್‌ ಕಾರ್ಪೆಟ್‌ ಮೇಲೆ ಬಾಲಿವುಡ್‌ ಸೆಲೆಬ್ರಿಟಿಗಳು ಕಂಡದ್ದು ಹೀಗೆ!

Miss World 2024 Finale celebs stun on red carpet

ಮುಂಬೈಯ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌(Jio World Convention Centre in BKC, Mumbai)ನಲ್ಲಿ ಜೆಕ್ ಗಣರಾಜ್ಯ ದೇಶದ (Miss World 2024 Finale) ಕ್ರಿಸ್ಟಿನಾ ಪಿಸ್ಕೋವಾ ಕಿರೀಟವನ್ನು ತಮ್ಮದಾಗಿಸಿಕೊಂಡರು. ಈ ವೇಳೆ ಕೃತಿ ಸನೂನ್ ಮತ್ತು ಪೂಜಾ ಹೆಗ್ಡೆ ಸೇರಿದಂತೆ ಕಿರುತೆರೆ ಮತ್ತು ಬಾಲಿವುಡ್‌ ಹಲವಾರು ಗಣ್ಯರು ಭಾಗಿಯಾಗಿದ್ದರು.

ಕಾರ್ಯಕ್ರಮಕ್ಕಾಗಿ ಕರಣ್ ಜೋಹರ್ ಬ್ಲಿಂಗಿ ಬ್ಲ್ಯಾಕ್ ಸೂಟ್ ಧರಿಸಿದ್ದರು. ಮಾಜಿ ವಿಶ್ವ ಸುಂದರಿ ಮೇಗನ್ ಯಂಗ್ ಮತ್ತು ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಈ ಕಾರ್ಯಕ್ರಮವನ್ನು ನಿರೂಪಿಸಿದ್ದರು.

‘ಬಿಗ್ ಬಾಸ್ 17’ ವಿಜೇತ ಮುನಾವರ್ ಫಾರೂಖಿ ಕೂಡ ವಿಶ್ವ ಸುಂದರಿ ಫೈನಲ್‌ಗೆ ಹಾಜರಾಗಿದ್ದರು.

ಕೃತಿ ಸನೂನ್ ಹಸಿರು ಬಣ್ಣದ ಮತ್ಸ್ಯಕನ್ಯೆಯ ಆಕಾರದ ಸ್ಕರ್ಟ್‌ನೊಂದಿಗೆ ನೆಕ್‌ಲೈನ್ ಟಾಪ್ ಧರಿಸಿ ಎಲ್ಲರ ಗಮನವನ್ನು ಸೆಳೆದರು.

ನೇರಳೆ ಬಣ್ಣದ ಮ್ಯಾಕ್ಸಿ ಡ್ರೆಸ್‌ನಲ್ಲಿ ಪೂಜಾ ಹೆಗ್ಡೆ ಕಂಗೊಳಿಸಿದ್ದರು.

ಇದನ್ನೂ ಓದಿ: Actor Dhanush: ಧನುಷ್‌-ರಶ್ಮಿಕಾ ಅಭಿನಯದ ಸಿನಿಮಾದ ಟೈಟಲ್‌ ರಿವೀಲ್‌!

ಜನಪ್ರಿಯ ಟಿವಿ ತಾರೆ, ಜೋಡಿ ರುಬಿನಾ ದಿಲಾಯಿಕ್ ಮತ್ತು ಅಭಿನವ್ ಶುಕ್ಲಾ ಆಗಮಿಸಿದ್ದರು.

ಇತ್ತೀಚೆಗೆ ‘ಬಿಗ್ ಬಾಸ್ 17’ ನಲ್ಲಿ ಕಾಣಿಸಿಕೊಂಡಿದ್ದ ನಟ ಮನ್ನಾರ್ ಚೋಪ್ರಾ ಅವರು ಕಂಡದ್ದು ಹೀಗೆ.

ಪ್ರಿಯಾಂಕಾ ಚಾಹರ್ ಮತ್ತು ಅಂಕಿತ್ ಗುಪ್ತಾ ಭಾಗಿಯಾಗಿದ್ದರು. ಪ್ರಿಯಾಂಕಾ ಹಾಟ್ ಪಿಂಕ್ ಪ್ಯಾಂಟ್‌ಸೂಟ್ ಧರಿಸಿದ್ದರೆ, ಅಂಕಿತ್ ಸ್ನೀಕರ್‌ಗಳೊಂದಿಗೆ ಆಲಿವ್ ಹಸಿರು ಸೂಟ್ ಧರಿಸಿದ್ದರು.

Exit mobile version