Site icon Vistara News

Mithun Chakraborty: ಮಿಥುನ್ ಚಕ್ರವರ್ತಿ ಮೇಲೆ ಪ್ರಧಾನಿ ಮೋದಿ ಗದರಿದ್ದು ಯಾಕೆ? ನಟ ಆಸ್ಪತ್ರೆಯಲ್ಲಿ ಹೇಳಿದ್ದೇನು?

Mithun Chakraborty reacts after getting discharged

ಬೆಂಗಳೂರು: ಮಿಥುನ್ ಚಕ್ರವರ್ತಿ (Mithun Chakraborty) ಅವರಿಗೆ ಮೆದುಳಿನ ಇಸ್ಕೆಮಿಕ್‌ ಸೆರೆಬ್ರೋವಾಸ್ಕುಲರ್‌ ಸ್ಟ್ರೋಕ್ (Ischemic Cerebrovascular Accident Stroke) ಆಗಿರುವುದು ಪತ್ತೆಯಾಗಿತ್ತು. ಇದಾದ ಬಳಿಕ ಆರೋಗ್ಯದಲ್ಲಿ ಬೇತರಿಕೆ ಕಂಡು ಫೆಬ್ರವರಿ 12ರ ಮಧ್ಯಾಹ್ನ ಆಸ್ಪತ್ರೆಯಿಂದ  ಡಿಸ್ಚಾರ್ಜ್‌ ಆದರು. ಫೆಬ್ರವರಿ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಿಥುನ್ ಚಕ್ರವರ್ತಿ ಅವರಿಗೆ ಕರೆ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದಕ್ಕಾಗಿ ಗದರಿದ್ದರುʼʼ ಎಂದು ನಟ ಮಾಧ್ಯಮದ ಮುಂದೆ ಹೇಳಿಕೊಂಡಿರುವುದು ವರದಿಯಾಗಿದೆ.

ನಟ ಮತ್ತು ರಾಜಕಾರಣಿ ಮಿಥುನ್ ಚಕ್ರವರ್ತಿ ಆಸ್ಪತ್ರೆಯಿಂದ  ಡಿಸ್ಚಾರ್ಜ್‌ ಆದ ಬಳಿಕ ಮಾತನಾಡಿ ʻʻನಾನು ರಾಕ್ಷಸನಂತೆ ತಿನ್ನುತ್ತೇನೆ. ಹಾಗಾಗಿ ನನಗೆ ಈ ರೀತಿ ಆರೋಗ್ಯ ಹದೆಗಟ್ಟಿತು. ಪ್ರತಿಯೊಬ್ಬರಿಗೂ ನನ್ನ ಸಲಹೆ ಏನಂದರೆ ನಿಯಮಿತ ಆಹಾರ ಬಳಸಿ. ಮಧುಮೇಹ ಇರುವವರು ಸಿಹಿತಿಂಡಿಗಳನ್ನು ಸೇವಿಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂಬ ತಪ್ಪು ಕಲ್ಪನೆಯನ್ನು ಹೊಂದಿರಬಾರದು. ನಿಮ್ಮ ಆಹಾರಕ್ರಮವನ್ನು ನಿಯಂತ್ರಿಸಿ” ಎಂದು ಹೇಳಿದರು.

ʻʻಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳನ್ನು ಯಾರು ನೋಡಿಕೊಳ್ಳುತ್ತಾರೆ? ನಾನು ನೋಡಿಕೊಳ್ಳುತ್ತೇನೆ. ನಾನು ಬಿಜೆಪಿಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ಬೇರೆ ರಾಜ್ಯಗಳಿಗೂ ಪ್ರಚಾರಕ್ಕೆ ಹೋಗುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆʼʼ ಎಂದು ಮಿಥುನ್‌ ಚಕ್ರವರ್ತಿ ಹೇಳಿದರು. ನರೇಂದ್ರ ಮೋದಿ ಅವರು ಮಿಥುನ್ ಚಕ್ರವರ್ತಿ ಅವರಿಗೆ ಕರೆ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದಕ್ಕಾಗಿ ಕಾಳಜಿ ಮಿಶ್ರಿತ ದನಿಯಲ್ಲಿ ಗದರಿದ್ದರು ಎನ್ನುವುದು ಈಗ ಚರ್ಚೆಯಾಗುತ್ತಿದೆ.

ಮಿಥುನ್ ಚಕ್ರವರ್ತಿ ಮಗ ನಮಶಿ ಚಕ್ರವರ್ತಿ ಎಕ್ಸ್‌ನಲ್ಲಿ ʻʻತಂದೆ ಆರೋಗ್ಯವಾಗಿದ್ದಾರೆ. ಶುಭ ಹಾರೈಕೆಗಳಿಗಾಗಿ ಎಲ್ಲರಿಗೂ ಧನ್ಯವಾದʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Mithun Chakraborty: ಮಿಥುನ್ ಚಕ್ರವರ್ತಿಗೆ ಮೆದುಳಿನ ಸ್ಟ್ರೋಕ್‌: ಆರೋಗ್ಯ ಸ್ಥಿತಿ ಹೇಗಿದೆ?

ಫೆಬ್ರವರಿ 10ರ ಬೆಳಗ್ಗೆ ಕೋಲ್ಕತ್ತಾದ ಆಸ್ಪತ್ರೆಗೆ ಮಿಥುನ್ ಚಕ್ರವರ್ತಿ ಅವರನ್ನು ದಾಖಲಿಸಲಾಗಿತ್ತು. ಅವರ ದೇಹದ ಬಲಭಾಗದ ಅಂಗಗಳಲ್ಲಿ ದೌರ್ಬಲ್ಯದ ಸಮಸ್ಯೆ ಇರುವುದಾಗಿ ವೈದ್ಯರು ಮಾಹಿತಿ ಹಂಚಿಕೊಂಡಿದ್ದರು. ಮೆದುಳಿನ ಎಂಆರ್‌ಐ ಸೇರಿದಂತೆ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗಿತ್ತು. ಮಿಥುನ್ ಕೊನೆಯ ಬಾರಿಗೆ ಬಂಗಾಳಿ ಚಿತ್ರ ‘ಕಾಬುಲಿವಾಲಾ’ದಲ್ಲಿ ಕಾಣಿಸಿಕೊಂಡರು. ಇದು ಡಿಸೆಂಬರ್ 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರವನ್ನು ಸುಮನ್ ಘೋಷ್ ನಿರ್ದೇಶಿಸಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಅವರು ಮಿಥುನ್‌ ಜಡ್ಜ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1976ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಚಿತ್ರದಲ್ಲೇ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದರು. ಹೀರೊ ಆಗಿ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಿಂದಿ, ಬೆಂಗಾಲಿ, ಒಡಿಯಾ, ಭೋಜ್‌ಪುರಿ ಮತ್ತು ತಮಿಳು ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ಮಿಥುನ್ ಚಕ್ರವರ್ತಿ ನಟಿಸಿದ್ದಾರೆ.

Exit mobile version