Site icon Vistara News

Amitabh Bachchan: ಟ್ರಂಪ್ ಮಗಳನ್ನು ಅಮಿತಾಭ್‌ಗೆ ಪರಿಚಯಿಸಿದ ಅಂಬಾನಿ!

Mukesh Ambani Introduces Amitabh Bachchan To Ivanka Trump

ಬೆಂಗಳೂರು: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಅಮಿತಾಭ್‌ ಬಚ್ಚನ್ ತಮ್ಮ ಕುಟುಂಬದೊಂದಿಗೆ ಜಾಮ್‌ನಗರಕ್ಕೆ ಆಗಮಿಸಿದ್ದರು. ಬಾಲಿವುಡ್ ಮೆಗಾಸ್ಟಾರ್ ಭಾನುವಾರ ಸಂಜೆ (ಮಾ.3) ಜಾಮ್‌ನಗರ್ ವಿಮಾನ ನಿಲ್ದಾಣದಿಂದ ಹೊರಬರುವ ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ. ಅವರ ಜತೆ ಅಭಿಷೇಕ್ ಬಚ್ಚನ್, ಜಯಾ ಬಚ್ಚನ್, ಶ್ವೇತಾ ಬಚ್ಚನ್ ಮತ್ತು ಐಶ್ವರ್ಯಾ ರೈ ಕೂಡ ಇದ್ದರು. ಈ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕಾಗೆ ಅಮಿತಾಭ್ ಬಚ್ಚನ್ ಅವರನ್ನು ಪರಿಚಯಿಸಿದ್ದಾರೆ ಮುಕೇಶ್ ಅಂಬಾನಿ.

ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಉದ್ಯಮಿ ಮುಕೇಶ್ ಅಂಬಾನಿಯ ಜತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಮಿತಾಭ್ ಬಚ್ಚನ್ ಅವರನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕಾಗೆ ಪರಿಚಯಿಸಿದ್ದಾರೆ. ಈ ಸಂದರ್ಭದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಮೆರಿಕನ್ ಗಾಯಕ ಎಕಾನ್ ಕೂಡ ಜಾಮ್‌ನಗರ ತಲುಪಿ ಮದುವೆಯ ಪೂರ್ವದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಆಲಿಯಾ ಭಟ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ವರುಣ್ ಧವನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಸಹ ಗ್ರ್ಯಾಂಡ್ ಸೆಲೆಬ್ರೆಷನ್‌ನಲ್ಲಿ ಭಾಗವಾಗಿದ್ದರು.

ಇದನ್ನೂ ಓದಿ: Amitabh Bachchan: ರೇಖಾ ಜತೆಗಿನ 70ರ ದಶಕದ ಫೋಟೊ ಹಂಚಿಕೊಂಡು ಕುತೂಹಲ ಕೆರಳಿಸಿದ ಬಿಗ್‌ ಬಿ

ವೈರಲ್‌ ವಿಡಿಯೊ

ಶುಕ್ರವಾರ, ರಿಹಾನ್ನಾ ಸೇರಿದಂತೆ ಹಲವಾರು ಭಾರತೀಯ ಮತ್ತು ಅಂತಾರಾಷ್ಟ್ರೀಯ ಕಲಾವಿದರ ಪ್ರದರ್ಶನಗಳನ್ನು ಈವೆಂಟ್ ಒಳಗೊಂಡಿತ್ತು. ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ, ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಈ ನಿಟ್ಟಿನಲ್ಲಿ ಮಾರ್ಚ್ 1 ರಿಂದ 3ರವರೆಗೆ ಗುಜರಾತ್‌ನ ಜಾಮ್‌ನಗರ ನಗರದಲ್ಲಿ ಮೂರು ದಿನಗಳ ಪೂರ್ವ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು.

Exit mobile version