Site icon Vistara News

Mukesh Ambani: ಪತ್ನಿ ನೀತಾ ಹಣೆಗೆ ಮುತ್ತಿಟ್ಟ ಮುಕೇಶ್ ಅಂಬಾನಿ: ರೊಮ್ಯಾಂಟಿಕ್‌ ಫೋಟೊಗಳು ವೈರಲ್‌!

Mukesh Ambani Kisses Nita Ambani

ಬೆಂಗಳೂರು: ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ವಿವಾಹಪೂರ್ವ ಸಮಾರಂಭದ ಹೃದಯಸ್ಪರ್ಶಿ ಕ್ಷಣಗಳು ಇದೀಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಮೂರು ದಿನಗಳ ಅದ್ಧೂರಿ ಕಾರ್ಯಕ್ರಮದ ಹೊಸ ಫೋಟೋಗಳು ವೈರಲ್‌ ಆಗಿದ್ದು, ಮುಖೇಶ್ ಅವರು ವೇದಿಕೆಯ ಮೇಲೆ ನೀತಾ ಅವರ ಹಣೆಗೆ ಮುತ್ತಿಟ್ಟಿದ್ದಾರೆ. ಮುಕೇಶ್‌ ಅಂಬಾನಿ ಅವರು ಪ್ರೀತಿಯಿಂದ ನೀತಾ ಅವರಿಗೆ ಮುತ್ತಿಟ್ಟಾಗ, ಮುಕೇಶ್‌ ಅವರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು ನೀತಾ.

ಈ ಫೋಟೊಗಳಲ್ಲದೇ ಸಮಾರಂಭದ ಇನ್ನಷ್ಟು ಫೋಟೊಗಳು ವೈರಲ್‌ ಆಗಿವೆ. ಅನಂತ್ ಅಂಬಾನಿ ಅವರು ರಾಧಿಕಾ ಮರ್ಚಂಟ್‌ ಜತೆ ಸುಂದರ ಕ್ಷಣಗಳನ್ನು ಹಂಚಿಕೊಂಡಿರುವ, ಮುಕೇಶ್ ಅಂಬಾನಿ ಮತ್ತು ನೀತಾ ಅವರು ಸಮಾರಂಭವೊಂದಕ್ಕೆ ನಡೆದುಕೊಂಡು ಹೋಗುವಾಗ ಅನಂತ್ ಅವರ ಕೈಗಳನ್ನು ಹಿಡಿದಿರುವ, ಅಷ್ಟೇ ಅಲ್ಲದೇ ಶಾರುಖ್‌ ಅವರು ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿರುವ ಡ್ರೋನ್ ಶಾಟ್ ಕೂಡ ವೈರಲ್‌ ಆಗಿದೆ. ಇವೆಲ್ಲವನ್ನು ಕಂಡು ಸ್ವರ್ಗವೇ ಧರೆಗಿಳಿದಂತಿದೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ ನೆಟ್ಟಿಗರು.

ಬುಧವಾರ (ಮಾ.6) ಕರಣ್ ಜೋಹರ್ ವಿವಾಹಪೂರ್ವ ಬ್ಯಾಷ್‌ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ರಾಧಿಕಾ ಅವರು ಅನಂತ್ ಅವರೊಂದಿಗೆ ಹೆಜ್ಜೆ ಹಾಕಿರುವುದು ಕಂಡು ಬಂದಿದೆ. ಇದನ್ನು ಕಂಡು ಮುಖೇಶ್ ಅಂಬಾನಿ, ನೀತಾ ಅಂಬಾನಿ ಮತ್ತು ಇತರ ಕುಟುಂಬ ಸದಸ್ಯರು ಭಾವುಕರಾದರು. ಆ ಬಳಿಕ ಅನಂತ್‌ ಅವರು ರಾಧಿಕಾ ಅವರಿಗೆ ಬೆಚ್ಚಗೆಯ ಅಪ್ಪುಗೆ ನೀಡಿದರು.

ಇದನ್ನೂ ಓದಿ: Mukesh Ambani: 100 ಶತಕೋಟಿ ಡಾಲರ್‌ ಕ್ಲಬ್‌ ಸೇರಿದ ಅಂಬಾನಿ; ಮತ್ತೆ ಏಷ್ಯಾದ ಶ್ರೀಮಂತ ಗರಿ!

Pictures from Anant Ambani and Radhika Merchant’s pre-wedding festivities
byu/Poophead123456789012 inBollyBlindsNGossip

ವೀಡಿಯೊವನ್ನು ಹಂಚಿಕೊಂಡ ಕರಣ್, “ಅನಂತ್ ಮತ್ತು ರಾಧಿಕಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! ಆಚರಣೆಗಳು, ಕೌಟುಂಬಿಕ ಬಂಧ, ಮತ್ತು ಅಪಾರ ಪ್ರೀತಿ, ಮಾತ್ರವಲ್ಲದೆ ನಮ್ಮ ವೈಭವಯುತ ಭಾರತೀಯ ಸಂಪ್ರದಾಯಗಳ ಸುಂದರವಾಗಿ ಪ್ರತಿಧ್ವನಿಸಿವೆ. ವಿವಾಹಪೂರ್ವ ಹಬ್ಬ ಕುಟುಂಬದ ಪ್ರತಿಯೊಬ್ಬರ ಹೃದಯದಲ್ಲಿ ಇರುವ ಪ್ರೀತಿಗೆ ಸಾಕ್ಷಿಯಾಗಿದೆʼʼ ಎಂದು ಅಂಬಾನಿ ಕುಟುಂಬಕ್ಕೆ ಹಾರೈಸಿದ್ದಾರೆ.

ಮಾರ್ಚ್ 1, 2 ಮತ್ತು 3ರಂದು ಜಾಮ್‌ನಗರದಲ್ಲಿ ಅನಂತ್ ಮತ್ತು ರಾಧಿಕಾ ಅವರ ವಿವಾಹ ಪೂರ್ವ ಸಮಾರಂಭ ನಡೆದಿತ್ತು. ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಆಡ್ವಾಣಿ, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್ , ಮಾಧುರಿ ದೀಕ್ಷಿತ್, ವರುಣ್ ಧವನ್, ಅನಿಲ್ ಕಪೂರ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಅನನ್ಯ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.

Exit mobile version