ಬೆಂಗಳೂರು: ಮಂಗಳವಾರ (ಏ. 10) ಮಧ್ಯರಾತ್ರಿ ಮುಂಬೈನ ಮೊಹಮ್ಮದ್ ಅಲಿ ರಸ್ತೆಯಲ್ಲಿ ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಮೇಲೆ ರೆಸ್ಟೋರೆಂಟ್ ಮಾಲೀಕರು ಮೊಟ್ಟೆ ಎಸೆದಿದ್ದಾರೆ. ಇದರಿಂದಾಗಿ ಮುನಾವರ್ ಫಾರೂಕಿ ಕೋಪಗೊಂಡ ವಿಡಿಯೊ ಇದೀಗ ವೈರಲ್ ಆಗಿದೆ. ಮುನಾವರ್ ಮೇಲೆ ಮೊಟ್ಟೆಗಳನ್ನು ಎಸೆದ ಆರೋಪದ ಮೇಲೆ ಮಾಲೀಕರು ಮತ್ತು ಅವರ ಐವರು ಸಿಬ್ಬಂದಿಯ ಮೇಲೆ ಕೇಸ್ ಕೂಡ ದಾಖಲಾಗಿದೆ.
ಮೂಲಗಳ ಪ್ರಕಾರ ಆರೋಪಿಗಳು ಮುನಾವರ್ ಫಾರೂಕಿ ಅವರನ್ನು ಮಿನಾರಾ ಮಸೀದಿ ಪ್ರದೇಶದ ತಮ್ಮ ರೆಸ್ಟೋರೆಂಟ್ ಇಫ್ತಾರ್‌ಗೆ ಆಹ್ವಾನಿಸಿದ್ದರು. ಆದರೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಹತ್ತಿರದ ಮತ್ತೊಂದು ಉಪಾಹಾರ ಗೃಹಕ್ಕೆ ಹೋಗಿದ್ದರು. ಇದರಿಂದಾಗಿ ಕೋಪಗೊಂಡು ಮುನಾವರ್ ಫಾರೂಕಿ ಮೇಲೆ ಮೇಲೆ ಮೊಟ್ಟೆಗಳನ್ನು ಎಸೆದಿರುವುದಾಗಿ ವರದಿಯಾಗಿದೆ.
ಮುನಾವರ್ ಫಾರೂಕಿ ರೆಸ್ಟೊರೆಂಟ್ ಮಾಲೀಕನ ಮೇಲೆ ತಾಳ್ಮೆ ಕಳೆದುಕೊಂಡು ಕೂಗಾಡಿರುವ ವಿಡಿಯೊ ವೈರಲ್ ಆಗಿದೆ. ಮುನಾವರ್ ಫಾರೂಕಿ ಕೂಗಾಡುತ್ತಿದ್ದಂತೆ ಸೆಕ್ಯುರಿಟಿ ಗಾರ್ಡ್‌ಗಳು ಬಿಗಿಯಾಗಿ ಅವರನ್ನು ಹಿಡಿದುಕೊಂಡು ಅಲ್ಲಿಂದ ಕರೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.
ಘಟನೆಯಲ್ಲಿ ಭಾಗಿಯಾಗಿರುವ ಆರು ಮಂದಿಯ ವಿರುದ್ಧ ಪೈದೋನಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Munawar Faruqui: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ ಮತ್ತೆ ಅರೆಸ್ಟ್!
ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಗೆ ಬಂದಿದ್ದರು ಮುನಾವರ್.
Kalesh b/w Public and Munawar Faruqi's at Mashaallah Restaurant Followed by Egg-Throwing Incident"
— Ghar Ke Kalesh (@gharkekalesh) April 10, 2024
pic.twitter.com/90vtRmdMSG
ಹಿಂದಿಯ ಬಿಗ್ ಬಾಸ್ 17ನೇ (Bigg Boss 17) ಆವೃತ್ತಿಯ ವಿನ್ನರ್ ಆಗಿ ಸ್ಟ್ಯಾಂಡ್ ಅಪ್ ಕಮೆಡಿಯನ್ ಮುನಾವರ್ ಫಾರೂಖಿ (Munawar Faruqui) ಅವರು ಹೊರ ಹೊಮ್ಮಿದ್ದರು. ಇನ್ನು ಕೆಲವರು ಮುನಾವರ್ ಗೆದ್ದ ಬಳಿಕ ಇದು ಫಿಕ್ಸಿಂಗ್ ಎಂದು ಆರೋಪ ಕೂಡ ಮಾಡಿದ್ದರು. ಈ ಬಗ್ಗೆ ಮುನಾವರ್ ಕೂಡ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ʻನಾನು ಫಿಕ್ಸಿಂಗ್ ವಿನ್ನರ್ ಆಗಿದ್ದಿದ್ದರೆ ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ ನನಗೆ ಸುಲಭವಾಗಿ ಸಿಗುತ್ತಿತ್ತು. ಇಡೀ ಸೀಸನ್ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್ ವಿನ್ನರ್ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್ ಅಲ್ಲ ಎಂಬುದು ಆಗ ಗೊತ್ತಾಗುತ್ತದೆʼʼ ಎಂದಿದ್ದರು.