ಬೆಂಗಳೂರು: ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ʻಸ್ತ್ರೀʼ ಚಿತ್ರದ ನಿರ್ಮಾಪಕ ಮತ್ತೊಂದು ಭಯಾನಕ ಚಿತ್ರವೊಂದು ತೆರೆಗೆ ತರಲು ಸಜ್ಜಾಗಿದ್ದಾರೆ. ʻಮುಂಜ್ಯಾʼ ಸಿನಿಮಾದ ಹೆಸರು (Munjya Teaser). ಇದು ಭಾರತದ ಮೊದಲ CGI ನಾಯಕನನ್ನು ಒಳಗೊಂಡಿರುವ ಸಿನಿಮಾ ಎಂದು ಹೇಳಲಾಗುತ್ತಿದೆ (first computer generated actor) . ʻಮುಂಜ್ಯಾʼ ಟೀಸರ್ ಮೇ 21ರಂದು ರಿಲೀಸ್ ಆಗಿದೆ.
ಅನಿಮೇಟೆಡ್ ಪಾತ್ರವನ್ನು ಒಳಗೊಂಡಿರುವ ಭಾರತದ ಮೊದಲ CGI (ಕಂಪ್ಯೂಟರ್-ಜನರೇಟೆಡ್ ಇಮೇಜರಿ) ಚಿತ್ರ ಎಂದು ಹೇಳಲಾಗಿದೆ. ‘ಮುಂಜ್ಯ’ ಚಿತ್ರದ ಟೀಸರ್ ಹಾರರ್ ಮತ್ತು ಹಾಸ್ಯದ ಸಮ್ಮಿಶ್ರಣ ಇದೆ.
ʻಮುಂಜ್ಯಾʼ ಟೀಸರ್ ಒಂದು ನಿಮಿಷ ಇದ್ದು, CGI ಪಾತ್ರವಾದ ಮುಂಜ್ಯನನ್ನು ಪರಿಚಯಿಸಲಾಗಿದೆ. ಟೀಸರ್‌ನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ 2010ರ ಬ್ಲಾಕ್‌ಬಸ್ಟರ್ ಚಿತ್ರ ದಬಾಂಗ್‌ನ ಜನಪ್ರಿಯ ಗೀತೆ ಮುನ್ನಿ ಬದ್ನಾಮ್ ಹುಯಿ ಹಾಡು ಟಿವಿಯಲ್ಲಿ ಪ್ಲೇ ಆಗುತ್ತಿದ್ದಂತೆ ʻಮುಂಜ್ಯಾʼ ಅನಾವರಣ ಆಗಿದ್ದಾನೆ. ʻಮುಂಜ್ಯಾʼ ನಗರಕ್ಕೆ ಪ್ರವೇಶಿಸುವ , ಹಾಗೇ ಟಿವಿ ನೋಡುತ್ತಿದ್ದವ ಏಕಾಏಕಿ ಟಿವಿ ಆಫ್ ಮಾಡುವಾಗ ಕೋಪಗೊಂಡ ʻಮುಂಜ್ಯಾʼ ಕೋಣೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸುವ ಸನ್ನಿವೇಶ ಟೀಸರ್‌ನಲ್ಲಿದೆ. ಮೇ 24 ರಂದು ಚಿತ್ರತಂಡ ಟ್ರೈಲರ್ ಅನಾವರಣಗೊಳಿಸಲಿದೆ. ಟೀಸರ್ ನೋಡಿದರೆ ಹಾರರ್ ಜತೆ ಕಾಮಿಡಿ ಕೂಡ ಇದೆ.
ಇದನ್ನೂ ಓದಿ: Actress Murder: ‘ಭಜರಂಗಿ’ ಸಿನಿಮಾ ನಟಿ ಗಂಡನಿಂದಲೇ ಭೀಕರ ಕೊಲೆ!
ಮುಂಜ್ಯ ಚಿತ್ರವನ್ನು ಆದಿತ್ಯ ಸರ್ಪೋತದಾರ್ ನಿರ್ದೇಶಿಸಿದ್ದಾರೆ ಮತ್ತು ಶಾರ್ವರಿ, ಅಭಯ್ ವರ್ಮಾ, ಮೋನಾ ಸಿಂಗ್ ಮತ್ತು ಬಾಹುಬಲಿ ಚಲನಚಿತ್ರ ಖ್ಯಾತಿಯ ಸತ್ಯರಾಜ್ ಅವರ ಸಮಗ್ರ ತಾರಾಗಣವನ್ನು ಒಳಗೊಂಡಿದೆ. ನಿರೇನ್ ಭಟ್ ಅವರ ಚಿತ್ರಕಥೆ, ಯೋಗೇಶ್ ಚಂಡೇಕರ್ ಸಂಭಾಷಣೆ ಇದೆ. ಸಚಿನ್-ಜಿಗರ್ ಸಂಗೀತ ಸಂಯೋಜಿಸಿದ್ದಾರೆ. ಅಮಿತಾಭ್ ಭಟ್ಟಾಚಾರ್ಯ ಸಾಹಿತ್ಯ ಇದೆ.
ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಮುಂಜ್ಯವನ್ನು ದಿನೇಶ್ ವಿಜನ್ ಮತ್ತು ಅಮರ್ ಕೌಶಿಕ್ ನಿರ್ಮಿಸಿದ್ದಾರೆ. ಚಿತ್ರ ಜೂನ್ 7 ರಂದು ದೇಶಾದ್ಯಂತ ತೆರೆಗೆ ಬರಲಿದೆ.