ಬೆಂಗಳೂರು: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜನಪ್ರಿಯ ಕಿರುತೆರೆ ನಟಿ ನಿಯಾ ಶರ್ಮಾ (Nia Sharma) ಕಾಣಿಸಿಕೊಂಡರು. ಆದರೆ ನಟಿ ಬಟ್ಟೆಯ ವಿಚಾರಕ್ಕೆ ಸಖತ್ ಟ್ರೋಲ್ ಆಗಿದ್ದಾರೆ. ನಿಯಾ ಧರಿಸಿದ್ದ ಬಿಳಿ ಬಣ್ಣದ ಬ್ರಾಲೆಟ್ ಮತ್ತು ಟ್ರ್ಯಾಕ್ ಪ್ಯಾಂಟ್ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಬ್ರಾಗೆ ಬಿಳಿ ಹೂವುಗಳ ಡಿಸೈನ್ ಇದ್ದರೂ ಫ್ಯಾಷನ್ ಎನ್ನುವ ಪಟ್ಟ ಕೊಟ್ಟರೂ, ವಿಶೇಷ ಅತಿಥಿಗಳು ಧರಿಸುವ ಉಡುಪು ಅಲ್ಲ ಎನ್ನೋದು ನೆಟ್ಟಿಗರ ವಾದ.
ನಿಯಾ ಅವರ ಅಸಾಂಪ್ರದಾಯಿಕ ಮತ್ತು ಸ್ಟೈಲಿಶ್ ಲುಕ್‌ಗಾಗಿ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ, ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವಿಭಾಗವು ನಟಿಯನ್ನು ಟ್ರೋಲ್ ಮಾಡಿದ್ದಾರೆ. ಮತ್ತು ಅವರ ಫ್ಯಾಶನ್ ಸೆನ್ಸ್ ಅನ್ನು ಪ್ರಶ್ನಿಸಿದ್ದಾರೆ.
“ಅವಳ ಡ್ರೆಸ್ಸಿಂ’ಏನ್ ಮೇಡಂ ಮನೆಯಲ್ಲಿ ಒಂದು ಚೆನ್ನಾಗಿರುವ ಡ್ರೆಸ್ ಇಲ್ವಾ? ಇಷ್ಟೋಂದು ಕೆಟ್ಟದಾಗಿ ಬಂದಿದ್ದೀರಾ…ಅಸಹ್ಯ’ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿರುವ ನಿಯಾ ಶರ್ಮಾ ಏಕ್ ಹಜಾರೋನ್ ಮೇ ಮೇರಿ ಬೆಹನಾ ಹೈ ಚಿತ್ರದಲ್ಲಿ ಮಾನ್ವಿ ಔಧರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಜೀ ವಾಹಿನಿಯಲ್ಲಿ ರಾಜಾ, ಕಲರ್ಸ್ ವಾಹಿನಿಯಲ್ಲಿ ಇಷ್ಕ್ ಮೇ ಮಾರ್ಜಾವಾನ್, ನಾಗಿಣಿ 4 ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ: Duniya Vijay- Ganesh: ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್ ಸಿನಿಮಾ ಬರೋದು ಪಕ್ಕಾ; ʻಭೀಮʼನದ್ದೇ ಆ್ಯಕ್ಷನ್ ಕಟ್!
ಖತ್ರೋನ್ ಕೆ ಖಿಲಾಡಿ 8ರಲ್ಲಿ ಭಾಗವಹಿಸಿ ಫೈನಲಿಸ್ಟ್ ಆಗಿದ್ದರು. ಮೇಡ್ ಇನ್ ಇಂಡಿಯಾದಲ್ಲಿ ಭಾಗವಹಿಸಿ ವಿಜೇತರಾಗಿ ಹೊರ ಹೊಮ್ಮಿದ್ದರು. ನಿಯಾ ಪ್ರಸ್ತುತರಿಯಾಲಿಟಿ ಶೋ ಲಾಫ್ಟರ್ ಚೆಫ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.