ಬೆಂಗಳೂರು: ಐಎಎಸ್ ಅಧಿಕಾರಿಯಾಗಿರುವ ಸ್ಮಿತಾ ಅವರು ಖ್ಯಾತ ಕಿರುತೆರೆ ನಟ, ಮಹಾಭಾರತ ಶ್ರೀಕೃಷ್ಣ ಪಾತ್ರಧಾರಿ ನಿತೀಶ್ ಭಾರದ್ವಾಜ್ (Nitish Bharadwaj) ಜತೆ ವಿಚ್ಛೇದನ ಪಡೆಯುತ್ತಿರುವುದಾಗಿ ಈ ಹಿಂದೆ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಅದರಂತೆ ಡಿವೋರ್ಸ್ ಕೂಡ ಆಗಿದೆ. ಇದೀಗ ನಿತೀಶ್ ಭಾರದ್ವಾಜ್ (Smita Gate) ಅವರು ಪತ್ನಿ ಸ್ಮಿತಾ ಗಟೆ ವಿರುದ್ಧ ಮಾನಸಿಕ ಕಿರುಕುಳ ಮತ್ತು ಅಶಿಸ್ತಿನ ವರ್ತನೆಯ ವಿರುದ್ಧ ದೂರು ದಾಖಲಿಸಿದ್ದಾರೆ.
ನಿತೀಶ್ ಭಾರದ್ವಾಜ್ ಅವರು ಬುಧವಾರ (ಫೆ.14) ಭೋಪಾಲ್‌ನ ಪೊಲೀಸ್ ಕಮಿಷನರ್ (ಸಿಪಿ) ಹರಿನಾರಾಯಣಾಚಾರಿ ಮಿಶ್ರಾ ಅವರನ್ನು ಸಂಪರ್ಕಿಸಿ, ತಮ್ಮ ವಿಚ್ಛೇದಿತ ಪತ್ನಿ ವಿರುದ್ಧ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ದೂರಿನಲ್ಲಿ, ನಿತೀಶ್ ಅವರು ʻʻ12 ವರ್ಷಗಳ ಸುದೀರ್ಘ ದಾಂಪತ್ಯದ ನಂತರ, ನಾನು ಮತ್ತು ಸ್ಮಿತಾ ಮುಂಬೈ ಕೌಟುಂಬಿಕ ನ್ಯಾಯಾಲಯದಲ್ಲಿ 2018 ರಲ್ಲಿ ವಿಚ್ಛೇದನಕ್ಕಾಗಿ ಒಮ್ಮತಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಪ್ರಕರಣವು ಇನ್ನೂ ಬಾಕಿ ಉಳಿದಿದೆʼʼ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ʻʻಅಷ್ಟೇ ಅಲ್ಲದೇ ದೂರಿನಲ್ಲಿ ಸ್ಮಿತಾ ನನ್ನ ಅವಳಿ ಹೆಣ್ಣುಮಕ್ಕಳಾದ ದೇವಯಾನಿ ಮತ್ತು ಶಿವರಂಜನಿ ಅವರನ್ನು ಭೇಟಿಯಾಗಲು ಬಿಡುತ್ತಿಲ್ಲ. ಭೇಟಿ ಆದಾಗೆಲ್ಲ ಮಕ್ಕಳ ಶಾಲೆಯನ್ನು ಬದಲಾಯಿಸುತ್ತಿದ್ದಾರೆ. ಇದು ನನ್ನ ಮಾನಸಿಕ ಹಿಂಸೆಗೆ ಕಾರಣವಾಗಿದೆʼʼ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಭೋಪಾಲ್‌ನ ಪೊಲೀಸ್ ಕಮಿಷನರ್ (ಸಿಪಿ) ಈ ಬಗ್ಗೆ ಮಾಹಿತಿ ನೀಡಿದ್ದು, ʻʻನಿತೀಶ್ ಭಾರದ್ವಾಜ್ ಅವರಿಂದ ಅರ್ಜಿಯನ್ನು ಸ್ವೀಕರಿಸಲಾಗಿದೆ ಮತ್ತು ಅದನ್ನು ಪರಿಶೀಲಿಸುವ ವಿಷಯವನ್ನು ತನಿಖಾಧಿಕಾರಿ ಫಲ್ಗುಣಿ ದೀಕ್ಷಿತ್ ಅವರಿಗೆ ವಹಿಸಲಾಗಿದೆʼʼಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Ishan Kishan: ‘ತಂತ್ರಗಳಿಗೆ ಅವಕಾಶವಿಲ್ಲ’; ಇಶಾನ್ ಕಿಶನ್ಗೆ ಎಚ್ಚರಿಕೆ ನೀಡಿದ ಜಯ್ ಶಾ
ನಿತೀಶ್ ಭಾರದ್ವಾಜ್ ಮತ್ತು ಸ್ಮಿತಾ ಗಟೆ 2009ರಲ್ಲಿ ವಿವಾಹವಾಗಿದ್ದರು. ಅವಳಿ ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. 12 ವರ್ಷಗಳ ದಾಂಪತ್ಯ ಜೀವನದ ಬಳಿಕ ಸೆಪ್ಟೆಂಬರ್ 2019ರಲ್ಲಿ ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ, ವಿಚ್ಛೇದನ ಪಡೆದರು. ನಿತೀಶ್ ಅವರಿಗೆ ಇದು ಎರಡನೇ ಮದುವೆಯಾಗಿತ್ತು. ಮೊನೀಷಾ ಪಟೇಲ್ ಎಂಬಾಕೆಯನ್ನು ಮದುವೆಯಾಗಿ 2005ರಲ್ಲಿ ವಿಚ್ಚೇದನ ಪಡೆದಿದ್ದರು.