ಬೆಂಗಳೂರು: ಜನ ಚಿನ್ನ, ಹಣಗಳನ್ನು ಸಂಗ್ರಹಿಸಿ ಇಟ್ಟಿರುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಹಾಗೆಯೇ ಚಪ್ಪಲಿ, ಬೂಟುಗಳನ್ನು ಸಂಗ್ರಹಿಸುವುದರ (Nushrratt Bharuccha) ಬಗ್ಗೆಯೂ ನಾವು ಕೇಳಿದ್ದೇವೆ. ಈ ರೀತಿಯ ವಿಶಿಷ್ಟ ಗೀಳು ಕೆಲವರಲ್ಲಿ ಮಾತ್ರ ಇರುತ್ತದೆ. ಆದರೀಗ ಬಾಲಿವುಡ್ ಖ್ಯಾತ ನಟಿ(Nushrratt Bharuccha shoe collection) ಲೆಕ್ಕವಿಲ್ಲದಷ್ಟು ಶೂಗಳೊಂದಿಗೆ ಪೋಸ್ ನೀಡಿದ್ದಾರೆ. ಅದು ಬೇರೆ ಯಾರೂ ಅಲ್ಲ ನಟಿ ನುಸ್ರತ್ ಭರುಚಾ.
ನಟಿ ನುಸ್ರತ್ ಭರುಚಾ ಅವರು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ‘ಕ್ಲೀನಿಂಗ್ ಡೇ’ ಎಂದು ತಮ್ಮ ಬಳಿ ಇರುವ ಚಪ್ಪಲಿ, ಶೂಗಳ ಸಂಗ್ರಹದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಸ್ಯಾಂಡಲ್ಸ್, ಫ್ಲಿಪ್ ಫ್ಲಾಪ್‌ಗಳು, ಹೀಲ್ಸ್, ಸ್ನೀಕರ್‌ಗಳು ಹೀಗೆ ಅನೇಕ ರೀತಿಯ ವಿಡಿಯೊ ಶೇರ್ ಮಾಡಿಕೊಂಡಿದ್ದರು. ಇದೀಗ ಈ ಫೋಟೊ ನೋಡಿ ನೆಟ್ಟಿಗರು ʻʻ”ಶೂ ಫ್ಯಾಕ್ಟರಿ” ಎಂದು ಕಮೆಂಟ್ ಮಾಡುತ್ತಿದ್ದಾರೆ.
ಉಗ್ರದಾಳಿ ಮಧ್ಯೆ ಇಸ್ರೇಲ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ನುಸ್ರತ್ ಭರುಚಾ
ಹಮಾಸ್ ಉಗ್ರರು ಇಸ್ರೇಲ್ ಮೇಲೆ ಟಾರ್ಗೆಟ್ ಮಾಡಿದ್ದರು. ಏಕಾಏಕಿ ಇಸ್ರೇಲ್ ಮೇಲೆ ಮುಗಿಬಿದ್ದಿರುವ ಹಮಾಸ್ ಉಗ್ರರು, ಬರೋಬ್ಬರಿ 500ಕ್ಕೂ ಹೆಚ್ಚು ರಾಕೆಟ್‌ಗಳಿಂದ ದಾಳಿ ಮಾಡಿದ್ದರು. ಬಾಲಿವುಡ್ ನಟಿ ನುಸ್ರತ್ ಭರುಚಾ ಅವರು ಇಸ್ರೇಲ್ನಲ್ಲಿರುವಾಗಲೇ ದಾಳಿ ನಡೆದಿತ್ತು. ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಯುವ ನಟಿ ನುಸ್ರತ್ ಭರುಚಾ ಅವರು ಹೈಫಿ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ಇಸ್ರೇಲ್ಗೆ ಹೋಗಿದ್ದರು. ಆದರೆ ದುರದೃಷ್ಟವಶಾತ್ ಇದೇ ಸಂದರ್ಭದಲ್ಲಿ ಹಮಾಸ್ ಉಗ್ರರು ಇಸ್ರೇಲ್ ಮೇಲೆ ಏಕಾಏಕಿ ದಾಳಿ ಮಾಡಿದ್ದರು ಹೀಗಾಗಿ ನಟಿ ದಾಳಿ ಸಂದರ್ಭ ಅಪಾಯದ ವಾತಾವರಣದಲ್ಲಿ ಇಸ್ರೇಲ್ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಬಳಿಕ ಸುರಕ್ಷತವಾಗಿ ಮರಳಿದರು.
ಇದನ್ನೂ ಓದಿ: Viral Video: ಕೊಹ್ಲಿ ಅಭಿಮಾನಕ್ಕಾಗಿ ರಾಜಸ್ಥಾನ್ ಜೆರ್ಸಿ ಬಿಟ್ಟು ಆರ್ಸಿಬಿ ಜೆರ್ಸಿ ತೊಟ್ಟ ಯುವತಿ
ಸುರಕ್ಷಿತವಾಗಿ ಮನೆಗೆ ತೆರಳಲು ಸಹಾಯ ಮಾಡಿದ ಭಾರತ ಸರ್ಕಾರ ಮತ್ತು ಇಸ್ರೇಲಿ ರಾಯಭಾರ ಕಚೇರಿಗೆ ಅವರು ಧನ್ಯವಾದ ತಿಳಿಸಿದ್ದರು. ನುಸ್ರತ್ ಭರುಚಾ ಅವರು ಜೈ ಸಂತೋಷಿ ಮಾ (2006) ಸಿನಿಮಾದೊಂದಿಗೆ ನಟನೆ ಶುರು ಮಾಡಿದ್ದರು. ಲವ್ ರಂಜನ್ ಅವರ ʻಪ್ಯಾರ್ ಕಾ ಪಂಚ್ನಾಮಾʼ (2011) ಸಿನಿಮಾ ಮೂಲಕ ಖ್ಯಾತಿ ಪಡೆದರು. ʻಸೋನು ಕೆ ಟಿಟು ಕಿ ಸ್ವೀಟಿʼ, ʻಛೋರಿʼ, ʻಡ್ರೀಮ್ ಗರ್ಲ್ʼ, ʻಛಲಾಂಗ್ʼ, ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.